Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಭಾರತ-ಪಾಕ್ ಉದ್ವಿಗ್ನತೆ ನಡುವೆ ‘ಆಪರೇಷನ್ ಸಿಂಧೂರ್’ ಸಿನಿಮಾ ಘೋಷಣೆ; ಮೊದಲ ಪೋಸ್ಟರ್ ರಿಲೀಸ್

09/05/2025 10:14 PM

BREAKING: ಪಂಜಾಬ್ ನ ಫಿರೋಜ್ ಪುರ್ ನಲ್ಲಿ ಮನೆಗೆ ಅಪ್ಪಳಿಸಿದ ಡ್ರೋನ್: 2-3 ಜನರಿಗೆ ಗಾಯ

09/05/2025 10:09 PM

BREAKING: ಪಾಕಿಸ್ತಾನಕ್ಕೆ ‘ಐಎಂಎಫ್ ಬೇಲ್ ಔಟ್ ಪ್ಯಾಕೇಜ್’ಗೆ ಭಾರತ ಆಕ್ಷೇಪ

09/05/2025 9:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ರಾಜ್ಯ ಸರ್ಕಾರದಿಂದ ಈ ಜಿಲ್ಲೆಗಳಿಗೆ ‘ಮಕ್ಕಳ ಕಲ್ಯಾಣ ಸಮಿತಿ’ಗೆ ಅಧ್ಯಕ್ಷರು, ಸದಸ್ಯರನ್ನು ನೇಮಿಸಿ ಆದೇಶ
KARNATAKA

BREAKING: ರಾಜ್ಯ ಸರ್ಕಾರದಿಂದ ಈ ಜಿಲ್ಲೆಗಳಿಗೆ ‘ಮಕ್ಕಳ ಕಲ್ಯಾಣ ಸಮಿತಿ’ಗೆ ಅಧ್ಯಕ್ಷರು, ಸದಸ್ಯರನ್ನು ನೇಮಿಸಿ ಆದೇಶ

By kannadanewsnow0911/09/2024 7:37 PM

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ಬೆಂಗಳೂರು: ರಾಜ್ಯ ಸರ್ಕಾರದಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಮಕ್ಕಳ ಕಲ್ಯಾಣ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಆದೇಶಿಸಿದೆ. ಆ ಬಗ್ಗೆ ಪಟ್ಟಿ ಮುಂದಿದೆ ಓದಿ.

ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.

ಬಾಲ ನ್ಯಾಯ ( ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015, ತಿದ್ದುಪಡಿ ಕಾಯ್ದೆ 2021 ಹಾಗೂ ಬಾಲ ನ್ಯಾಯ ( ಮಕ್ಕಳ ಪಾಲನೆ ಮತ್ತು ರಕ್ಷಣೆ ) ಮಾದರಿ ನಿಯಮಗಳು 2016, ತಿದ್ದುಪಡಿ ಮಾದರಿ ನಿಯಮಗಳು 2022ರ ಅನ್ವಯ ಈ ಕೆಳಕಂಡ 26 ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು 3 ವರ್ಷಗಳ ಅವಧಿಗೆ ನೇಮಕಾತಿ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಮಕ್ಕಳ ಕಲ್ಯಾಣ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರ ಜವಾಬ್ದಾರಿ ಮತ್ತು ಕರ್ತವ್ಯಗಳು:-

1. ಮಕ್ಕಳ ಕಲ್ಯಾಣ ಸಮಿತಿಯು ಕೇಂದ್ರ ಸರ್ಕಾರವು ಹೊರಡಿಸಿರುವ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015, ತಿದ್ದುಪಡಿ ಕಾಯ್ದೆ 2021 ಹಾಗೂ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಮಾದರಿ ನಿಯಮಗಳು 2016 ಹಾಗೂ ತಿದ್ದುಪಡಿ ಮಾದರಿ ನಿಯಮಗಳು 2022 ರಡಿ ಕಾರ್ಯನಿರ್ವಹಿಸುವುದು.
2. ಪ್ರತಿ ಮಕ್ಕಳ ಕಲ್ಯಾಣ ಸಮಿತಿಯ ಕಾರ್ಯವ್ಯಾಪ್ತಿ ಇಲಾಖೆಯು ನಿರ್ದಿಷ್ಟ ಪಡಿಸಿರುವ ಆಯಾ ಜಿಲ್ಲೆಗೆ ಮಾತ್ರ ಸೀಮಿತವಾಗಿರುತ್ತದೆ.
3. ರಕ್ಷಣೆ ಮತ್ತು ಪೋಷಣೆಗೆ ಒಳಪಡುವ ಮಕ್ಕಳ ಪಕರಣಗಳನ್ನು ಮೇಲೆ ತಿಳಿಸಿದ ಕಾಯ್ದೆ ಮತ್ತು ನಿಯಮಗಳನ್ವಯ ನಿರ್ವಹಿಸುವುದು. ಮಕ್ಕಳಿಗೆ ಸಂಬಂಧಿಸಿದ ಇತರೆ ಕಾಯ್ದೆಗಳನ್ನು ನಿರ್ದಿಷ್ಟ ಪ್ರಕರಣಗಳಲ್ಲಿ ಸಂದರ್ಭಕ್ಕೆ ತಕ್ಕಂತೆ ಪರಿಶೀಲಿಸುವುದು. ಎಲ್ಲಾ ಸಂದರ್ಭಗಳಲ್ಲೂ ಮಗುವಿನ ಒಳಿತನ್ನು ಗಮನದಲ್ಲಿಟ್ಟುಕೊಳ್ಳತಕ್ಕದ್ದು.
4. ನಿಯಮ 16(3)ರಲ್ಲಿ ತಿಳಿಸಿರುವಂತೆ, ಸಭೆಗಳನ್ನು ಬಾಲಮಂದಿರದಲ್ಲಿ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ನಿಗದಿ ಪಡಿಸುವ ಸ್ಥಳದಲ್ಲಿ ನಡೆಸುವುದು. ಸಭಾ ಸ್ಥಳವನ್ನು ಅನಗತ್ಯವಾಗಿ ಬದಲಾಯಿಸಬಾರದು. ಬೇರೆ ಸ್ಥಳದಲ್ಲಿ ವಿಶೇಷ ಸಭೆ ನಡೆಸಬೇಕಾದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳೊಡನೆ ಸಮಾಲೋಚಿಸಿ ಮೊದಲೇ ನಿರ್ಧರಿಸಿ ಸೂಕ್ತ ಪ್ರಚಾರ ನೀಡಿ ಸಭೆ ಆಯೋಜಿಸುವುದು.
5. ನಿಯಮ 16(6) ರಲ್ಲಿ ತಿಳಿಸಿರುವಂತೆ, ದಿನದ 24*7 ಕನಿಷ್ಠ ಒಬ್ಬರು ಸದಸ್ಯರು ತುರ್ತು ಸಂದರ್ಭಗಳಲ್ಲಿ ನೇರವಾಗಿ ಅಥವಾ ದೂರವಾಣಿ ಮುಖಾಂತರ ಸ್ಥಳೀಯ ಪೊಲೀಸರು ಅಥವಾ ಮಕ್ಕಳ ವಿಶೇಷ ಪೊಲೀಸ್ ಘಟಕಕ್ಕೆ ಅಗತ್ಯ ನಿರ್ದೇಶನ ನೀಡಲು ಲಭ್ಯರಿರಬೇಕು.
6. ನಿಯಮ 16(7)ರನ್ವಯ ಸಮಿತಿಯು ಪ್ರತಿ ಕರ್ತವ್ಯ ನಿರತ ದಿನಗಳಲ್ಲಿ ಬೆಳಿಗ್ಗೆ 10:00 ರಿಂದ ಸಭೆಗಳನ್ನು ಕಡ್ಡಾಯವಾಗಿ ಆರಂಭಿಸಬೇಕು. ದಿನಕ್ಕೆ ಕನಿಷ್ಠ 06 ಗಂಟೆಗಳ ಕಾಲ ಉಪಸ್ಥಿತಿಗಳನ್ನು ನಡೆಸತಕ್ಕದ್ದು.
7. ಮಕ್ಕಳ ಕಲ್ಯಾಣ ಸಮಿತಿಯು ಶಾಸನಬದ್ದ ಸಮಿತಿಯಾಗಿದ್ದು, ಸೆಕ್ಷನ್ 27(9) ರನ್ವಯ ಒಂದು ನ್ಯಾಯಾಪೀಠದಂತೆ ಕಾರ್ಯನಿರ್ವಹಿಸತಕ್ಕದ್ದು, ಸಮಿತಿ ಕಲಾಪಗಳು ಕ್ರಮವಾಗಿರತಕ್ಕದ್ದು, ಸಮಿತಿ ಪ್ರಾರಂಭದಲ್ಲಿ ಎಲ್ಲಾ ಸದಸ್ಯರು ಏಕಕಾಲಕ್ಕೆ ಹಾಜರಾಗಿ ಕಲಾಪ ಮುಗಿಯುವರೆಗೆ ಇರತಕ್ಕದ್ದು,
8. ಬಾಲನ್ಯಾಯ ಕಾಯ್ದೆಯ ಸೆಕ್ಷನ್ 28 ರಲ್ಲಿ ತಿಳಿಸಿರುವಂತೆ ಮಕ್ಕಳ ಪಾಲನಾ ಸಂಸ್ಥೆಗಳ ಭೇಟಿಯೂ ಸೇರಿದಂತೆ ತಿಂಗಳಲ್ಲಿ ಕನಿಷ್ಠ 20 ಉಪಸ್ಥಿತಿಗಳು ಕಡ್ಡಾಯವಾಗಿ ಇರತಕ್ಕದ್ದು, ಉಪಸ್ಥಿತಿಗಳನ್ನು ಹೆಚ್ಚಿಸುವ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯವಿದ್ದಲ್ಲಿ ಹೆಚ್ಚುವರಿ ನಿಗದಿಪಡಿಸುವುದು.
9. ನಿಯಮ 15(5) ಹಾಗೂ 89 (3)ರ ಅನುಸಾರ ಅಧ್ಯಕ್ಷರು ಮತ್ತು ಸದಸ್ಯರು ಮಕ್ಕಳ ರಕ್ಷಣಾ ನಿರ್ದೇಶನಾಲಯವು ನಿಯೋಜಿಸುವ ತರಬೇತಿಗಳಿಗೆ ಕಡ್ಡಾಯವಾಗಿ
ಹಾಜರಾಗುವುದು.

10. ನಿಯಮ 16(1)ರಂತೆ ಸಮಿತಿಯ ಸದಸ್ಯರು ರಾಜ್ಯ ಸರ್ಕಾರ ನಿಗದಿಪಡಿಸಿರುವ ಉಪಸ್ಥಿತಿ ಭತ್ಯೆ ಹಾಗೂ ಪ್ರಯಾಣ ದರಕ್ಕೆ ಅರ್ಹರಾಗಿರುತ್ತಾರೆ.
11. ನಿಯಮ 15(6)ರಲ್ಲಿ ತಿಳಿಸಿರುವಂತೆ, ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಸ್ಥಾನಕ್ಕೆ ಒಂದು ತಿಂಗಳ ರಾಜೀನಾಮೆ ನೀಡಬೇಕಾದ ಸಂದರ್ಭಗಳಲ್ಲಿ ಕನಿಷ್ಠ ಮುಂಚಿತವಾಗಿ ರಾಜೀನಾಮೆ ತಿಳುವಳಿಕೆಯನ್ನು ರಾಜ್ಯ ಸರ್ಕಾರಕ್ಕೆ ನೇರವಾಗಿ ಪ್ರತಿಯನ್ನು ನಿರ್ದೇಶಕರು, ಹಾಗೂ ಪ್ರತಿಯನ್ನು ನಿರ್ದೇಶನಾಲಯ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಇವರಿಗೆ  ಕಳುಹಿಸುವುದು.
12. ಸಮಿತಿಯು ಮಕ್ಕಳೊಡನೆ ಸಂಭಾಷಿಸುವಾಗ / ಪಕರಣಗಳನ್ನು ನಿರ್ವಹಿಸುವಾಗ ನಿಯಮ 16(9)ರಂತೆ ಮಕ್ಕಳ ಸ್ನೇಹಿಯಾಗಿರಬೇಕು. ಸಮಿತಿ ಸಭೆಗಳಲ್ಲಿ ಅಸಭ್ಯವಾದ ಮಾತುಗಳು / ಸಂಜ್ಞೆಗಳನ್ನು ಬಳಸತಕ್ಕದ್ದಲ್ಲ. ಮಕ್ಕಳ ಜಾತಿ, ಧರ್ಮ, ಲಿಂಗ ವರ್ಣ ಮತ್ತು ಪ್ರಭೇದಗಳನ್ನು ಆಧರಿಸಿ ಬೇಧ ತೋರಬಾರದು. ಅಂಗವಿಕಲತೆ ಅಥವಾ ಅಡ್ಡ ಹೆಸರಿನಲ್ಲಿ ಗುರುತಿಸಿ ಸಂಬೋಧಿಸಬಾರದು ಮಕ್ಕಳ ಹಕ್ಕುಗಳನ್ನು ಸದಾ ಗೌರವಿಸುವುದು.
13. ನಿಯಮ 17(i) ಸಮಿತಿಯು ಪ್ರತಿಯೊಂದು ಪ್ರಕರಣದ ಕೇಸ್ ಫೈಲ್‌ನ್ನು ಫಾರಂ 15ರ ಘೋಷ್ಕಾರಯೊಂದಿಗೆ ನಿರ್ವಹಿಸುವುದು.
14. ಸಮಿತಿಯ ಆಡಳಿತಾತ್ಮಕ ವಿಷಯಗಳನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ನಿರ್ವಹಿಸುವುದು.
15. ಬಾಲಕಿಯರ ಬಾಲಮಂದಿರಗಳಿಗೆ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಭೇಟಿ ನೀಡುವ ಅವಶ್ಯಕತೆ ಬಂದಲ್ಲಿ ಪುರುಷ ಸದಸ್ಯರು ಕಡ್ಡಾಯವಾಗಿ ಮಹಿಳಾ ಸದಸ್ಯರೊಂದಿಗೆ ಭೇಟಿ ನೀಡುವುದು.
16. ಸಮಿತಿಯು ತಮ್ಮ ಕರ್ತವ್ಯದ ಅವಧಿಯಲ್ಲಿ ಮಕ್ಕಳ ಮಾಹಿತಿಯನ್ನು ಗೌಪ್ಯವಾಗಿ ಇಡತಕ್ಕದ್ದು. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ, ಮಾಧ್ಯಮಗಳಿಗೆ ಬಿಡುಗಡೆ ಮಾಡುವಂತಿಲ್ಲ (ಸೆಕ್ಷನ್ 3(xi), 74)
17. ಸಮಿತಿಯ ಮುಂದೆ ಬಂದ ಮಕ್ಕಳನ್ನು ಪುನರ್ವಸತಿಗಾಗಿ ಆದ್ಯತೆ ಮೇಲೆ ಸರ್ಕಾರದ ಬಾಲಮಂದಿರಗಳಲ್ಲಿ ಅಥವಾ 2ನೇ ಆದ್ಯತೆ ಮೇರೆಗೆ ಬಾಲನ್ಯಾಯ ಕಾಯ್ದೆಯಡಿ ನೋಂದಣಿಯಾಗಿರುವ ಖಾಸಗಿ ಮಕ್ಕಳ ಸಂಸ್ಥೆಗಳಲ್ಲಿ ಅಥವಾ ಅರ್ಹ ಸಂಸ್ಥೆಗಳಲ್ಲಿ ಮಾತ್ರ ದಾಖಲು ಮಾಡಬೇಕು.
18. ಮಕ್ಕಳನ್ನು ಅಂತರ್ ಜಿಲ್ಲಾ ಹಾಗೂ ಅಂತರ್‌ ರಾಜ್ಯ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ನಿರ್ದಿಷ್ಟ ಅನುಷ್ಠಾನ ಮಾರ್ಗಸೂಚಿ (Standard Operating Procedure) ಅನ್ನು ಪಾಲಿಸತಕ್ಕದ್ದು.
19. ಸಮಿತಿಯ ಮಕ್ಕಳ ಸ್ನೇಹಿಯಾಗಿ, ಸಾಮರಸ್ಯವನ್ನು ಕಾಪಾಡಿಕೊಂಡು ಮಕ್ಕಳ ಪರಮೋಚ್ಚ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರವನ್ನು ಕೈಗೊಳ್ಳುವುದು.
20. ಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ಸಂದರ್ಭದಲ್ಲಿ ವೈಯುಕ್ತಿಕವಾಗಿ ಸಮಿತಿಯ ಯಾವುದೇ ಸದಸ್ಯರು ಆರ್ಥಿಕ ಅಥವಾ ಇನ್ಯಾವುದೇ ಆಮಿಷದಿಂದ ದೂರ ಉಳಿಯುವುದು.
21. ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಸದಸ್ಯರು ಬಾಲಮಂದಿರಗಳ ಯಾವುದೇ ಆಡಳಿತಾತ್ಮಕ ಅಧಿಕಾರಗಳನ್ನು ಹೊಂದಿರುವುದಿಲ್ಲ.
22. ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಮಾದರಿ ನಿಯಮ 2016, ನಿಯಮ

ಆಯ್ಕೆಗೊಂಡ ಯಾವುದೇ ಸದಸ್ಯರು ತಾವು ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲಸದಿಂದಾಗಿ ಮಕ್ಕಳ ಕಲ್ಯಾಣ ಸಮಿತಿ/ಬಾಲನ್ಯಾಯ ಮಂಡಳಿಗಳ ಸದಸ್ಯರಾಗಿ ಕಾರ್ಯನಿರ್ವಹಿಸುವುದಕ್ಕೆ ಅಗತ್ಯವಿರುವಷ್ಟು ವೇಳೆ ಮತ್ತು ಗಮನ ನೀಡಲು ಸಾಧ್ಯವಿಲ್ಲದಿದ್ದಲ್ಲಿ ಅಂತಹವರು ಮಕ್ಕಳ ಕಲ್ಯಾಣ ಸಮಿತಿ 1 ಬಾಲನ್ಯಾಯ ಮಂಡಳಿಗಳ ಸದಸ್ಯರಾಗುವಂತಿಲ್ಲ.

ಯಾವುದೇ ಮಕ್ಕಳ ಪೋಷಣಾ ಸಂಸ್ಥೆಯ ಜೊತೆಗೆ ನೇರವಾಗಿ ಅಥವಾ ಪರೋಕ್ಷವಾಗಿ ತಮ್ಮ ಅಧಿಕಾರ ಅವಧಿಯಲ್ಲಿ ಸಂಬಂಧ ಹೊಂದಿರುವಂತಿಲ್ಲ.
ಅಧಿಕಾರ ಅವಧಿಯಲ್ಲಿ ಯಾವುದೇ ರಾಜಕೀಯ ಪಕ್ಷದಲ್ಲಿ ಯಾವುದೇ ಅಧಿಕಾರ ಹೊಂದಿರುವಂತಿಲ್ಲ.

• ದಿವಾಳಿ ಎಂದು ಘೋಷಿತವಾದಲ್ಲಿ ಸದಸ್ಯತ್ವನ್ನು ಕಳೆದುಕೊಳ್ಳುವರು.

23. ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015ರ ಸೆಕ್ಷನ್ 27 ರಲ್ಲಿ ತಿಳಿಸಿರುವಂತೆ ಈ ಮುಂದಿನ ಕಾರಣಗಳು ಎದುರಾದಲ್ಲಿ ವಿಚಾರಣೆ ನಡೆಸಿ ಸಮಿತಿಯ ಸದಸ್ಯತ್ವವನ್ನು ರದ್ದುಗೊಳಿಸಲಾಗುವುದು.
ಯಾವುದೇ ಸದಸ್ಯರು:
• ತಮ್ಮ ಅಧಿಕಾರಗಳ ದುರುಪಯೋಗ ಮಾಡುತ್ತಿರುವುದು ಕಂಡು ಬಂದರೆ,
• ಯಾವುದೇ ಸೂಕ್ತ ಕಾರಣಗಳನ್ನು ನೀಡದೆ ಸತತವಾಗಿ 03 ತಿಂಗಳುಗಳ ಕಾಲ ಮಂಡಳಿಯ ಸಭೆಗಳಿಗೆ ಗೈರು ಹಾಜರಾದಲ್ಲಿ. ವರ್ಷದಲ್ಲಿ ನಡೆದ ಸಭೆಗಳಲ್ಲಿ 3 ಭಾಗ ಸಭೆಗಳಿಗೆ ಗೈರು ಹಾಜರಾದಲ್ಲಿ.
• ಅನೈತಿಕ ವ್ಯವಹಾರಗಳಲ್ಲಿ ಸಿಲುಕಿರುವುದು ಹಾಗೂ ಇಂತಹ ಆರೋಪವನ್ನು ತೊಡೆದು ಹಾಕದಿದ್ದಲ್ಲಿ ಅಥವಾ ಇಂತಹ ಆರೋಪದಿಂದ ಅವರನ್ನು ಸಂಪೂರ್ಣವಾಗಿ ಕ್ಷಮಿಸದಿದ್ದಲ್ಲಿ.
• ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಅಥವಾ ಜವಾಬ್ದಾರಿ ಹೊಂದಿರುವ ಅಥವಾ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಸ್ವಾಮಿತ್ವದ ಅಥವಾ ನಿರ್ವಹಿಸುವ ಯಾವುದೇ ಸೇವೆಯಿಂದ ವಜಾಗೊಳಿಸಿದಲ್ಲಿ,
-ಮಕ್ಕಳ ದುರುಪಯೋಗದಲ್ಲಿ ಭಾಗಿಯಾದ್ದಲ್ಲಿ ಅಥವಾ ಬಾಲಕಾರ್ಮಿಕರಿಂದ ದುಡಿಸಿಕೊಂಡಿದ್ದಲ್ಲಿ ಅಥವಾ ಇನ್ಯಾವುದೇ ಮಾನವ / ಮಕ್ಕಳ ಹಕ್ಕುಗಳ ಉಲ್ಲಂಘನೆ ಅಥವಾ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಲ್ಲ.
ರಾಜ್ಯ ಸರ್ಕಾರದ ಗಮನಕ್ಕೆ ಸದರಿ ವ್ಯಕ್ತಿಯು ಸದಸ್ಯರಾಗಿ ಮುಂದುವರೆಯುವುದು ಅನಗತ್ಯವೆಂದು ಕಂಡು ಬಂದಲ್ಲಿ ವಿಚಾರಣೆ ನಡೆಸಿ ಸದಸ್ಯತ್ವ ತೆಗೆಯಲು ಅವಕಾಶವಿರುತ್ತದೆ.
24. ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಕ್ಕಳ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣೆ ಬಗ್ಗೆ ಕ್ರಮ ವಹಿಸುವುದು.
25. ಸೆಕ್ಷನ್ 27 (8), ನಿಯಮ 17(v-a) ರಲ್ಲಿ ತಿಳಿಸಿರುವಂತೆ, ಮಾಸಿಕ ವರದಿಯನ್ನು ನಮೂನೆ 16A ನಲ್ಲಿ ಪತಿ ಮಾಹೆ 5ನೇ ತಾರೀಖಿನೊಳಗೆ ಹಾಗೂ ತ್ರೈಮಾಸಿಕ ವರದಿಯನ್ನು ನಮೂನೆ 16ರಲ್ಲಿ ಜಿಲ್ಲಾ ದಂಡಾಧಿಕಾರಿಗಳಿಗೆ ಮತ್ತು ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ ಸಲ್ಲಿಸಲು ಕ್ರಮಹಿಸತಕ್ಕದ್ದು.
ಇನ್ನುಳಿದಂತೆ, ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ ಮತ್ತು ನಿಯಮಗಳಿಗೆ ಅನುಗುಣವಾಗಿ ಮಕ್ಕಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು
ಕಾರ್ಯನಿರ್ವಹಿಸತಕ್ಕದ್ದು.

ಇಲ್ಲಿದೆ 26 ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿಯ ನೂತನ ಅಧ್ಯಕ್ಷರು, ಸದಸ್ಯರ ಪಟ್ಟಿ

ಮೀನು ಕೃಷಿಯಲ್ಲಿ ತೊಡಗಿದವರಿಗೆ ಗುಡ್ ನ್ಯೂಸ್: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಬಳ್ಳಾರಿ: ಸೆ.13ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

ಕೇಂದ್ರ ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ ಸೌಲಭ್ಯ : ಈ ದಾಖಲೆಗಳಿದ್ರೆ ಕೂಡಲೇ ಅರ್ಜಿ ಸಲ್ಲಿಸಿ!

Share. Facebook Twitter LinkedIn WhatsApp Email

Related Posts

ಚಿಕ್ಕಮಗಳೂರು ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ.ಬಾಲಕೃಷ್ಣ ಸರ್ಕಾರಿ ಸೇವೆಯಿಂದ ವಜಾ

09/05/2025 9:51 PM1 Min Read

BIG NEWS: ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ: ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿ ಪ್ರಕಟ

09/05/2025 9:28 PM1 Min Read

ಅಂಗವಿಕಲರಿಗೆ ಗುಡ್ ನ್ಯೂಸ್: ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ

09/05/2025 9:26 PM1 Min Read
Recent News

BREAKING: ಭಾರತ-ಪಾಕ್ ಉದ್ವಿಗ್ನತೆ ನಡುವೆ ‘ಆಪರೇಷನ್ ಸಿಂಧೂರ್’ ಸಿನಿಮಾ ಘೋಷಣೆ; ಮೊದಲ ಪೋಸ್ಟರ್ ರಿಲೀಸ್

09/05/2025 10:14 PM

BREAKING: ಪಂಜಾಬ್ ನ ಫಿರೋಜ್ ಪುರ್ ನಲ್ಲಿ ಮನೆಗೆ ಅಪ್ಪಳಿಸಿದ ಡ್ರೋನ್: 2-3 ಜನರಿಗೆ ಗಾಯ

09/05/2025 10:09 PM

BREAKING: ಪಾಕಿಸ್ತಾನಕ್ಕೆ ‘ಐಎಂಎಫ್ ಬೇಲ್ ಔಟ್ ಪ್ಯಾಕೇಜ್’ಗೆ ಭಾರತ ಆಕ್ಷೇಪ

09/05/2025 9:56 PM

ಚಿಕ್ಕಮಗಳೂರು ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ.ಬಾಲಕೃಷ್ಣ ಸರ್ಕಾರಿ ಸೇವೆಯಿಂದ ವಜಾ

09/05/2025 9:51 PM
State News
KARNATAKA

ಚಿಕ್ಕಮಗಳೂರು ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ.ಬಾಲಕೃಷ್ಣ ಸರ್ಕಾರಿ ಸೇವೆಯಿಂದ ವಜಾ

By kannadanewsnow0909/05/2025 9:51 PM KARNATAKA 1 Min Read

ಬೆಂಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದಂತ ಮಗುವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಂತ ಚಿಕ್ಕಮಗಳೂರು ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ…

BIG NEWS: ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ: ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿ ಪ್ರಕಟ

09/05/2025 9:28 PM

ಅಂಗವಿಕಲರಿಗೆ ಗುಡ್ ನ್ಯೂಸ್: ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ

09/05/2025 9:26 PM

ಮಂಡ್ಯದಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಆರೋಪಿ ಜಾವೀದ್ ಬಂಧನ

09/05/2025 9:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.