ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ನಡೆದಿದ್ದು, ನಡು ರಸ್ತೆಯ್ಲೇ ಚಾಲಕರಿಬ್ಬರು ಗಲಾಟೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರಿನ ವೈಟ್ ಫೀಲ್ಡ್ ಐಟಿಪಿಎಲ್ ಮುಖ್ಯರಸ್ತೆಯಲ್ಲಿ ಸೆಪ್ಟೆಂಬರ್ 5 ರಂದು ಕಾರು ಟಚ್ ಆಗಿದ್ದಕ್ಕೆ ಕಿರಿಕ್ ಮಾಡಿಕೊಂಡಿದ್ದು, ಚಾಲಕರಿಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಕಾರು ಟಚ್ ಆಗಿದ್ದಕ್ಕೆ ಮುಂದಿನ ಕಾರು ಚಾಲಕ ಸ್ಕ್ರೂಡೈವರ್ ನಿಂದ ಹಿಂಬದಿ ಕಾರಿನ ಬ್ಯಾನೆಟ್ ಗೆ ಡ್ಯಾಮೇಜ್ ಮಾಡಿದ್ದಾನೆ. ಈ ವೇಳೆ ಹಿಂಬದಿ ಕಾರಿನಲ್ಲಿದ್ದ ಸವಾರ ಚಾಲಕನಿಗೆ ಕಣ್ಣಿಗೆ ಪೆಪ್ಪರ್ ಸ್ಪ್ರೇ ಬಿಟ್ಟಿದ್ದಾನೆ.
ಇನ್ನು ಬೆಂಗಳೂರಿನಲ್ಲಿ ಇತ್ತೀಚೆಗೆ ರೋಡ್ ರೇಜ್ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರಿನ ರಸ್ತೆಗಳಲ್ಲಿ ಅತಿರೇಕದ ಜಗಳಗಳಿಗಿಲ್ಲ ಅವಕಾಶ! ನಿಮ್ಮ ಆಕ್ರೋಶ ಬದಿಗೊತ್ತಿ, ತಾಳ್ಮೆಯನ್ನು ತಂದುಕೊಳ್ಳಿ. ರಸ್ತೆ ಜಗಳ ಅಪಾಯಕಾರಿಯಷ್ಟೇ ಅಲ್ಲ, ಕ್ರಿಮಿನಲ್ ಅಪರಾಧ ಕೂಡ. ಅದರಲ್ಲಿ ಭಾಗಿಯಾದರೆ ಕಾನೂನು ಕ್ರಮ ನಿಶ್ಚಿತ! ಇಂತಹ ಪರಿಸ್ಥಿತಿಯಲ್ಲಿ ನೆರವು ಪಡೆಯಲು ನಮ್ಮ 112ಗೆ ಕರೆ ಮಾಡಿ ಎಂದು ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.