ಬೆಂಗಳೂರು: ನಗರದಲ್ಲಿ ಮೊದಲ ದಿನವೇ 2.17 ಲಕ್ಷ ಗಣೇಶ ಮೂರ್ತಿಯನ್ನು ವಿವಿಧೆಡೆ ವಿಸರ್ಜಿಸಲಾಗಿತ್ತು. ನಿನ್ನೆ ಮತ್ತೆ ಮುಂದುವರೆದಿದ್ದು, ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 83,404 ಗಣೇಶ ಮೂರ್ತಿಯನ್ನು ವಿಸರ್ಜಿಸಲಾಗಿದೆ.
ಈ ಕುರಿತಂತೆ ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಾಂಕ: 08/09/2024 ರಂದು ಸಂಚಾರಿ/ಮೊಬೈಲ್ ಟ್ಯಾಂಕರ್ ಹಾಗೂ ಕೆರೆ ಅಂಗಳದ ಶಾಶ್ವಾತ/ತಾತ್ಕಾಲಿಕ ಕಲ್ಯಾಣಿಗಳಲ್ಲಿ ಒಟ್ಟು 83404 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿರುತ್ತದೆ ಎಂದಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿರುವ ವಿವರ:
ಪೂರ್ವ ವಲಯ: 12652
ಪಶ್ಚಿಮ ವಲಯ: 10828
ದಕ್ಷಿಣ ವಲಯ: 47055
ಬೊಮ್ಮನಹಳ್ಳಿ ವಲಯ: 2276
ದಾಸರಹಳ್ಳಿ ವಲಯ: 424
ಮಹದೇವಪುರ ವಲಯ: 2224
ಆರ್.ಆರ್.ನಗರ ವಲಯ: 3859
ಯಲಹಂಕ ವಲಯ: 4096
ಒಟ್ಟು: 83404 ಗಣೇಶ ಮೂರ್ತಿಯನ್ನು ಸೆ.8ರ ನಿನ್ನೆಯ ದಿನ ಬೆಂಗಳೂರಿನ ವಿವಿಧೆಡೆ ವಿಸರ್ಜಿಸಲಾಗಿದೆ ಎಂಬುದಾಗಿ ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಶಿವಮೊಗ್ಗ: ಸೆ.11ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
BREAKING : ನಟ ದರ್ಶನ್ ಗೆ ಸದ್ಯಕ್ಕಿಲ್ಲ ರಿಲೀಫ್ : 3 ದಿನ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಕೋರ್ಟ್ ಆದೇಶ