ತುಮಕೂರು: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದಂತ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವಂತ ಘಟನೆ ತುಮಕೂರಿನ ಕೆರೆಗಳಪಾಳ್ಯದಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೆರೆಗಳಪಾಳ್ಯದ ಬಳಿಯಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಒಂದು ಕಾರಿನಲ್ಲಿದ್ದ ಇಬ್ಬರು, ಮತ್ತೊಂದು ಕಾರಿನಲ್ಲಿದ್ದಂತ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನೂ ಎರಡು ಕಾರುಗಳ ನಡುವಿನ ಅಪಘಾತದಲ್ಲಿ ಮಹಿಳೆ ಮತ್ತು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಚಿಂತಾಜನಕ ಎಂಬುದಾಗಿ ತಿಳಿದು ಬಂದಿದೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಮಧುಗಿರಿ ಠಾಣೆಯ ಪೊಲೀಸರು ಮೃತರ ಗುರುತಿನ ಬಗ್ಗೆ ಪರಿಶೀಲನೆ ನಡೆಸಿದರು. ಸಾವನ್ನಪ್ಪಿದವರ ಗುರುತು ತಿಳಿಯಬೇಕಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.
ಕಪಟಿಗಳ ದ್ವೇಷದ ಪಿತೂರಿಗೆ ಮಹನೀಯರ ಮಾನವೀಯ ಆಶಯಗಳು ಬಲಿಯಾಗಬಾರದು: ಸಿಎಂ ಸಿದ್ಧರಾಮಯ್ಯ
Watch Video: ನಿಮ್ಮ ‘ಸ್ಮಾರ್ಟ್ ಪೋನ್’ನಲ್ಲೇ ‘ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ’ ಪಾವತಿಸೋದು ಹೇಗೆ? ಈ ವೀಡಿಯೋ ನೋಡಿ
ALERT : ಅತಿಯಾಗಿ ಮೊಬೈಲ್ ಬಳಸುವವರೇ ಎಚ್ಚರ : ಈ ಅಪಾಯಕಾರಿ ರೋಗ ನಿಮ್ಮನ್ನು ಕಾಡಬಹುದು!