ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಯುಜಿ ಸಿಇಟಿ, ಯುಜಿ ನೀಟ್ 2024ಕಕ್ಕೆ 2ನೇ ಸುತ್ತಿನ ಸೀಟು ಹಂಚಿಕೆಗೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದ್ದು, ಸೀಟ್ ಮ್ಯಾಟ್ರಿಕ್ಸ್ ನಲ್ಲಿ ಸೀಟುಗಳ ಲಭ್ಯತೆಯನ್ನು ತೋರಿಸದಿದ್ದರೂ ಸಹ ಅಭ್ಯರ್ಥಿಗಳು ಆದ್ಯತೆಗಳನ್ನು ಉಳಿಸಿಕೊಳ್ಳಲು, ಬದಲಾಯಿಸಲು, ಮಾರ್ಪಡಿಸಲು ಸಲಹೆ ನೀಡಲಾಗಿದೆ ಎಂದಿದೆ.
ಈ ಆಯ್ಕೆ ಯಾಕೆ ನೀಡಿದೆ ಎಂದರೇ ಸೀಟು ಹಂಚಿಕೆಯ ಕಾರ್ಯದಲ್ಲಿ ಉದ್ಭಿಸುವ ಸೀಟುಗಳನ್ನೂ ಸಹ ಹಂಚಿಕೆ ಮಾಡುವುದರಿಂದ ಅಭ್ಯರ್ಥಿಗಳು ಆಯ್ಕೆಗಳನ್ನು ನಮೂದಿಸಿದ್ದಲ್ಲಿ ಅಂತಹ ಸೀಟುಗಳನ್ನು ಪಡೆಯಬಹುದಾಗಿದೆ ಎಂದಿದೆ.
ಹೀಗಿದೆ ಯುಟಿ ಸಿಇಟಿ, ಯುಟಿ ನೀಟ್ 2024ರ 2ನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿ
- ಸೀಟ್ ಮ್ಯಾಟ್ರಿಕ್ಸ್ ಪ್ರಕಟಣೆ – ದಿನಾಂಕ 08-09-2024ರ ಬೆಳಿಗ್ಗೆ 11ರ ನಂತ್ರ.
- ಹಣ ಪಾತಿಗೆ ದಿನಾಂಕ 09-09-2024 ರಿಂದ 11-09-2024ರವರೆಗೆ ಅವಕಾಶ ನೀಡಲಾಗಿದೆ.
- ಅರ್ಹ ಅಭ್ಯರ್ಥಿಗಳು ಆಯ್ಕೆಗಳನ್ನು ಬದಲಾಯಿಸಲು ಅವಕಾಶ (ಅಳಿಸಿ, ಬದಲಾಯಿಸಿ, ಮಾರ್ಪಡಿಸಿ) ಸೋದಕ್ಕೆ ಅವಕಾಶವನ್ನು ಮಧ್ಯಾಹ್ನ 2 ಗಂಟೆಯಿಂದ ದಿನಾಂಕ 08-09-2024 ರಿಂದ 11-09-2024ರ ಮಧ್ಯಾಹ್ನ 2ಗಂಟೆಯವರೆಗೆ ಅವಕಾಶ ನೀಡಲಾಗಿದೆ.
ಗಣೇಶ ಹಬ್ಬದ ಹೊತ್ತಲ್ಲೇ ಮುಂದುವರೆದ ಡೆಂಗ್ಯೂ ಆರ್ಭಟ: ಇಂದು 169 ಕೇಸ್ ಪತ್ತೆ | Dengue Case
ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಈ ಮಾರ್ಗದಲ್ಲಿ ವಿಶೇಷ ಸಾಪ್ತಾಹಿಕ ರೈಲು ಸಂಚಾರ | South Western Railway