ಬೆಂಗಳೂರು: ಜ್ಞಾನಭಾರತಿಯ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಆರು ಸಿಂಡಿಕೇಟ್ ಸದಸ್ಯರನ್ನು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿತ್ತು. ಅದರಲ್ಲಿ ರಮೇಶ್ ಬಾಬು ಎಂಬುವರ ಹೆಸರು ಕೂಡ ಇತ್ತು. ಅದು ನಾನಲ್ಲ. ಅವರು ರಾಮನಗರ ನಿವಾಸಿಯಾಗಿರುತ್ತಾರೆ. ನಾನು ಯಾವುದೇ ವಿವಿ ಸಿಂಡಿಕೇಟ್ ಸದಸ್ಯನಾಗಿ ನಾಮನಿರ್ದೇಶನ ಹೊಂದಿರುವುದಿಲ್ಲ. ಅಂದಹ ಆಪೇಕ್ಷೆಯನ್ನು ಪಟ್ಟಿರುವುದಿಲ್ಲ ಎಂಬುದಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ನಿಯಮಾನುಸಾರ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರನ್ನು ನಾಮನಿರ್ದೇಶನ ಮಾಡಿ 27-08-2024 ರಂದು ಅಧಿಸೂಚನೆ ಹೊರಡಿಸಿರುತ್ತದೆ. ಸದರಿ ಅಧಿಸೂಚನೆಯ ಮೂಲಕ ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ (ಜ್ಞಾನಭಾರತಿ) ಆರು ಸಿಂಡಿಕೇಟ್ ಸದಸ್ಯರನ್ನು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮದ ಅಡಿಯಲ್ಲಿ ಪ್ರದರ್ಥವಾದ ಅಧಿಕಾರವನ್ನು ಚಲಾಯಿಸಿ ಮೂರು ವರ್ಷದ ಅವಧಿಗೆ ನಾಮನಿರ್ದೇಶನ ಮಾಡಿದ್ದು, ಅದರಲ್ಲಿ ರಾಮನಗರದ ನಿವಾಸಿಯಾದ ರಮೇಶ್ ಬಾಬು ಎಂಬುವವರನ್ನು ಸಿಂಡಿಕೇಟ್ ಸದಸ್ಯರಾಗಿ ನಾಮನಿರ್ದೇಶನ ಮಾಡಿರುತ್ತದೆ ಎಂದಿದ್ದಾರೆ.
ಕೆಲವು ಮಾಧ್ಯಮಗಳಲ್ಲಿ ಮತ್ತು ಜಾಲತಾಣಗಳಲ್ಲಿ ನಾನು ಸಿಂಡಿಕೇಟ್ ಸದಸ್ಯನಾಗಿ ನಾಮ ನಿರ್ದೇಶನಗೊಂಡಿರುವುದಾಗಿ ವರದಿಯಾಗಿರುತ್ತದೆ. ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ ನಾಮನಿರ್ದೇಶನಗೊಂಡಿರುವ ರಮೇಶ್ ಬಾಬು ಎಂಬುವವರು ರಾಮನಗರದವರಾಗಿದ್ದು, ನಾನು ಯಾವುದೇ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯತ್ವದ ನಾಮನಿರ್ದೇಶನಕ್ಕೆ ಅಪೇಕ್ಷೆ ಪಟ್ಟಿರುವುದಿಲ್ಲ. ರಾಜ್ಯ ಸರ್ಕಾರವು ನನ್ನನ್ನು ದೇವರಾಜ್ ಅರಸು ಟ್ರಕ್ ಅಂಡ್ ಟರ್ಮಿನಲ್ ಸಂಸ್ಥೆಯ ಅಧ್ಯಕ್ಷನಾಗಿ ನೇಮಕ ಮಾಡಿತ್ತು. ನನ್ನ ವೈಯಕ್ತಿಕ ಕಾರಣಗಳಿಗಾಗಿ ಇದನ್ನೂ ನಾನು ಸ್ವೀಕರಿಸಿರುವುದಿಲ್ಲ. ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಉಪಮುಖ್ಯಮಂತ್ರಿಗಳಿಗೆ ನನ್ನ ಹೆಸರನ್ನು ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿದ ಕಾರಣಕ್ಕೆ ಧನ್ಯವಾದಗಳನ್ನು ತಿಳಿಸಿರುತ್ತೇನೆ. ಸಾರ್ವಜನಿಕ ಮಾಹಿತಿಗಾಗಿ ಈ ಸ್ಪಷ್ಟೀಕರಣವನ್ನು ನೀಡಬಯಸುತ್ತೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.
BREAKING : ಬೆಂಗಳೂರಿನಲ್ಲಿ ಇನ್ ಸ್ಟಾಗ್ರಾಮ್ ಸ್ಟಾರ್ `ಯೂನಿಸ್ ಝರೂರಾ’ ಪೊಲೀಸ್ ವಶಕ್ಕೆ | Younis Zaroora