ಅಸಮರ್ಪಕ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿಯಿಂದ ಕೆಲವರು ಚಿಕ್ಕ ವಯಸ್ಸಿನಲ್ಲೇ ಫೈಲ್ಸ್‌ನಂತ ಸಮಸ್ಯೆ ಎದುರಿಸುತ್ತಿದ್ದಾರೆ. ಪೈಲ್ಸ್‌ನಿಂದಾಗಿ ಕುಳಿತುಕೊಳ್ಳಲು, ನಡೆಯಲು ಅಥವಾ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಪೈಲ್ಸ್ ರೋಗಿಗಳ ಸಂಕಟ ಎದುರಿಸುತ್ತಾರೆ. ಮಲ ವಿಸರ್ಜನೆ ಜಾಗದಲ್ಲಿ ತೀವ್ರವಾದ ನೋವು, ಸುಡುವಿಕೆ, ತುರಿಕೆ ಮತ್ತು ಚುಚ್ಚಿದ ಅನುಭವ ಆಗುತ್ತದೆ. ಕೆಲವೊಮ್ಮೆ ಮಲದ ಮೂಲಕ ರಕ್ತವೂ ಹೊರಬರುತ್ತದೆ.
ವ್ಯಾಯಾಮದ ಕೊರತೆ, ಅಧಿಕ ತೂಕ, ಆಹಾರ ಪದ್ಧತಿ ಮತ್ತು ಫೈಬರ್ ಕೊರತೆಯು ಈ ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ದಿನನಿತ್ಯದ ಕೆಲವೊಂದು ಅಭ್ಯಾಸಗಳಿಂದ ಪೈಲ್ಸ್ ಬರುವ ಅಪಾಯವಿದೆ. ಇದು ವಂಶಪಾರಂಪರ್ಯವಾಗಿ ಬರುವ ಸಾಧ್ಯತೆಯೂ ಇದೆ.
ಟಾಯ್ಲೆಟ್ ಸೀಟ್ ಮೇಲೆ ಬಹಳ ಹೊತ್ತು ಕುಳಿತುಕೊಳ್ಳುವುದು
ಕೆಲವರು ಟಾಯ್ಲೆಟ್ ಸೀಟ್ ಮೇಲೆ ದೀರ್ಘಕಾಲ ಕುಳಿತುಕೊಳ್ಳುತ್ತಾರೆ. ಆದರೆ ವೈದ್ಯರ ಪ್ರಕಾರ, ಈ ಅಭ್ಯಾಸ ಹೊಂದಿರುವ ಜನರಿಗೆ ಪೈಲ್ಸ್ ಬರುವ ಸಾಧ್ಯತೆ ಹೆಚ್ಚು. ಟಾಯ್ಲೆಟ್ ಸೀಟ್ ಮೇಲೆ ಹೆಚ್ಚು ಸಮಯ ಕುಳಿತುಕೊಳ್ಳುವುದರಿಂದ ಗುದನಾಳದ ರಕ್ತನಾಳಗಳ ಮೇಲೆ ಒತ್ತಡ ಬೀಳುತ್ತದೆ, ಇದು ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ. ಆದರೆ ಟಾಯ್ಲೆಟ್ ಸೀಟ್ ಮೇಲೆ ಅದೇ ಭಂಗಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು ಈ ಒತ್ತಡವನ್ನು ಹೆಚ್ಚಿಸುತ್ತದೆ. ಕೆಲವರು ಮೊಬೈಲ್ ನೋಡುತ್ತಾ, ಮಾತನಾಡುತ್ತಾ ಗಂಟೆಗಟ್ಟಲೆ ಕಮೋಡ್ ಮೇಲೆ ಕುಳಿತುಕೊಳ್ಳುತ್ತಾರೆ. ಆದರೆ ಮುಂದೆ ಇದು ಪೈಲ್ಸ್‌ಗೆ ಕಾರಣವಾಗಬಹುದು. ಟಾಯ್ಲೆಟ್ ಸೀಟ್ ಆಗಿರಲಿ ಅಥವಾ ಕುಳಿತುಕೊಳ್ಳುವಾಗಲೂ ಒಂದೇ ಭಂಗಿಯಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳಬಾರದು ಎನ್ನುತ್ತಾರೆ ತಜ್ಞರು.
ಹೆಚ್ಚು ಭಾರ ಅಥವಾ ದಿಢೀರ್ ಭಾರ ಹೊರುವುದು
ನೀವು ಅಧಿಕವಾದ ಭಾರ ಹೊತ್ತರೆ ಅಥವಾ ಭಾರವನ್ನು ದಿಢೀರ್ ಎಂದು ಹೊತ್ತರೆ ಅದು ಹೊಟ್ಟೆ ಮತ್ತು ಗುದನಾಳದ ಗೋಡೆಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಈ ಕಾರಣದಿಂದಾಗಿ, ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಪೈಲ್ಸ್ ಉಂಟಾಗುವ ಅಪಾಯವಿದೆ. ನೀವು ತೂಕವನ್ನು ಎತ್ತುವಾಗ ಬಹಳ ಜಾಗ್ರತೆಯಿಂದ ಇರಬೇಕು.
ಹೆಚ್ಚು ಬಾರಿ ಮಲವಿಸರ್ಜನೆ ಮಾಡುವುದು
ದಿನಕ್ಕೆ ಹಲವು ಬಾರಿ ಮಲ ವಿಸರ್ಜನೆ ಮಾಡಿದರೂ ಪೈಲ್ಸ್ ಬರುವ ಸಾಧ್ಯತೆ ಇರುತ್ತದೆ. ನೀವು ಪದೇ ಪದೇ ಅತಿಸಾರದಿಂದ ಬಳಲುತ್ತಿದ್ದರೆ, ತಕ್ಷಣ ಚಿಕಿತ್ಸೆ ಪಡೆಯುವುದು ಉತ್ತಮ. ಆಗ್ಗಾಗ್ಗೆ ಮಲವಿಸರ್ಜನೆ ಮಾಡುವುದನ್ನು ತಪ್ಪಿಸಲು ಆಹಾರವನ್ನು ಮಿತಿಯಾಗಿ ತಿನ್ನಿ, ಹೆಚ್ಚು ಆಹಾರ ಸೇವನೆ ಮಾಡುವುದು ಪದೇ ಪದೇ ಮೋಶನ್ ಮಾಡುವುದು ಮಾಡುತ್ತಿದ್ದರೆ ಸಮಸ್ಯೆ ಹೆಚ್ಚಾಗುತ್ತದೆ.
ಹೆಚ್ಚು ನೀರು ಸೇವಿಸದಿರುವುದು
ಕೆಲವರು ಊಟದ ನಂತರ ಹೆಚ್ಚು ನೀರು ಸೇವಿಸುವುದಿಲ್ಲ. ಹಾಗೇ ದಿನವಿಡೀ ಒಂದೆರಡು ಗ್ಲಾಸ್ ನೀರಿನಲ್ಲೇ ಕಳೆಯುತ್ತಾರೆ. ಆದರೆ ಕೆಲವೊಂದು ಆಹಾರಗಳನ್ನು ಸೇವಿಸಿದಾಗ ತಪ್ಪದೆ ಹೆಚ್ಚು ನೀರು ಕುಡಿಯಬೇಕು.