ಶಿವಮೊಗ್ಗ: ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಸಿಎಂ ಸಿದ್ಧರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರಲಿದ್ದಾರೆ. ಅವರ ಬದಲಾವಣೆಯಿಲ್ಲ. ಸಿಎಂ ಬದಲಾವಣೆ ಎನ್ನುವುದು ಕೇವಲ ಗೊಂದಲ ಸೃಷ್ಠಿಯಷ್ಟೇ. ಇದು ಬಿಜೆಪಿಗರು ಸೃಷ್ಠಿಸುತ್ತಿರುವ ಗೊಂದಲ ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದರು. ಅಲ್ಲದೇ ಹಳೆಯ ಕಾರಾಗೃಹಕ್ಕೂ ಭೇಟಿ ನೀಡಿ, ಅಲ್ಲಿ ನಡೆಯುತ್ತಿದ್ದಂತ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು.
ತಡವಾಗಿ ಬರುವ ಆರೋಗ್ಯ ಸಿಬ್ಬಂದಿ ವೇತನ ತಡೆಗೆ ಖಡ್ ಸೂಚನೆ
ಸಾಗರದ ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಕರ್ತವ್ಯಕ್ಕೆ ತಡವಾಗಿ ಬರುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ. ರಾತ್ರಿ ಪಾಳಿಯಲ್ಲಿ ವೈದ್ಯರಿರೋದಿಲ್ಲ. ಕರ್ತವ್ಯಕ್ಕೂ ಹಾಜರಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಯಾರೆಲ್ಲ ಡ್ಯೂಟಿಗೆ ತಡವಾಗಿ ಬರುತ್ತಾರೋ ಅವರ ವೇತನ ತಡೆ ಹಿಡಿಯಿರಿ ಎಂಬುದಾಗಿ ಸ್ಥಳದಲ್ಲಿದ್ದಂತ ಆಡಳಿತ ವೈದ್ಯಾಧಿಕಾರಿ ಡಾ.ಪರಪ್ಪ ಅವರಿಗೆ ಸೂಚಿಸಿದರು.
ಸಾಗರ ತಾಲ್ಲೂಕು ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕೋಟಿ ಕೋಟಿ ಅನುದಾನ
ಸಾಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಡೆಂಗ್ಯೂ ಹೆಚ್ಚಿರುವುದರಿಂದ ತಡೆಗೆ ನಿಯಂತ್ರಣ ಕ್ರಮವಾಗಿ ಆಸ್ಪತ್ರೆಯ ಕಿಟಕಿಗಳಿಗೆ ಸೊಳ್ಳೆ ಪರದಿ ಅಳಪಡಿಸುವ ಕಾರ್ಯ ನಡೆಯುತ್ತಿದೆ. ಕಿಟಕಿಗಳಿಗೆ ಗ್ಲಾಸ್ ಅಳವಡಿಸಲಾಗುತ್ತಿದೆ. ಆಸ್ಪತ್ರೆಯ ಎಲ್ಲಾ ಶೌಚಾಲಯಗಳನ್ನು ರಿಪೇರಿ ಕಾಮಗಾರಿ ನಡೆಯುತ್ತಿದೆ ಎಂದರು.
ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ-ಮಕ್ಕಳ ಆಸ್ಪತ್ರೆಗೆ ಸರ್ಕಾರದಿಂದ ಅಭಿವೃದ್ಧಿ ಕಾಮಗಾರಿ ನಡೆಸಲು ಹಣ ಮಂಜೂರಾಗಿದೆ. ಸಾರ್ವಜನಿಕ ಆಸ್ಪತ್ರೆಗೆ 1 ಕೋಟಿ 47 ಲಕ್ಷ ಮಂಜೂರಾಗಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ 1 ಕೋಟಿ 87 ಲಕ್ಷ ಅನುದಾನ ನೀಡಲಾಗಿದೆ. ಇದರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ನಡೆಸಲಾಗುವುದು ಎಂದು ಹೇಳಿದರು.
ಡಯಾಲಿಸಿಸ್ ಸಮಸ್ಯೆ ಕ್ಲಿಯರ್
ನಾನು ಶಾಸಕರಾಗುವ ಮೊದಲೇ ಜನರು ನೀವು ಏನು ಮಾಡ್ತಿರೋ ಗೊತ್ತಿಲ್ಲ ಡಯಾಲಿಸಿಸ್ ಕೇಂದ್ರಕ್ಕೆ ತಂತ್ರಜ್ಞರನ್ನು ಹಾಕಿಸುವ ಕೆಲಸ ಮಾಡಬೇಕು ಎಂಬುದಾಗಿ ಮೊದಲೇ ಬೇಡಿಕೆ ಇಟ್ಟಿದ್ದರು. ಅದರಂತೆ ಶಾಸಕರಾದ ಮರು ಕ್ಷಣವೇ ಆ ಕೆಲಸ ಮಾಡಿದ್ದೇನೆ. ಈಗ ಡಯಾಲಿಸಿಸ್ ರೋಗಿಗಳಿಗೆ ಅದರಿಂದ ಅನುಕೂಲ ಆಗುತ್ತಿದೆ. ಅನೇಕರು ನೀವು ಇದೊಂದು ಒಳ್ಳೆಯ ಕಾರ್ಯ ಮಾಡಿದ್ರಿ ಅಂತಾನೇ ಹೇಳುತ್ತಿದ್ದಾರೆ ಎಂದರು.
ಗ್ಯಾರಂಟಿ ಅನುಷ್ಠಾನ ಕಾರ್ಯಾಲಯ ಶೀಘ್ರವೇ ಓಪನ್
ಸಾಗರ ತಾಲ್ಲೂಕಿನಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆಯಾಗಿದೆ. ಅದಕ್ಕಾಗಿ ಕಾರ್ಯಾಲಯ ಒಂದು ತೆರೆಯುವ ಅಗತ್ಯವಿದೆ. ಸಾಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರನ್ನಾಗಿ ಬಿಆರ್ ಜಯಂತ್ ಮಾಡಲಾಗಿದೆ. ಶೀಘ್ರವೇ ಗ್ಯಾರಂಟಿ ಅನುಷ್ಠಾನ ಸಮಿತಿಯ ಕಚೇರಿ ತೆರೆಯುವುದಾಗಿ ತಿಳಿಸಿದರು.
ಗಣಪತಿ ಹಬ್ಬದ ಬಳಿಕ ರಸ್ತೆ ಗುಂಡಿ ಮುಚ್ಚುವ ಕಾರ್ಯ ಆರಂಭ
ಸಾಗರ ನಗರ, ಗ್ರಾಮಾಂತರ ಭಾಗದ ಅನೇಕ ಕಡೆಯಲ್ಲಿ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದಾವೆ. ಹಲವೆಡೆ ವಾಹನಗಳು ಓಡಾಡದಷ್ಟು ಗುಂಡಿಗಳು ಬಿದ್ದಿರುವುದು ನನ್ನ ಗಮನಕ್ಕೆ ಬಂದಿದೆ. ರಸ್ತೆ ಗುಂಡಿಗಳನ್ನು ಗಣಪತಿ ಹಬ್ಬ ಮುಗಿಯುತ್ತಿದ್ದಂತೆ ಮುಚ್ಚುವ ಕೆಲಸ ಮಾಡಲಾಗುತ್ತದೆ. ಮಳೆ ಕಡಿಮೆ ಆದರೇ ರಸ್ತೆ ಕಾಮಗಾರಿ ಕೂಡ ಆರಂಭಗೊಳ್ಳಲಿದೆ ಎಂದರು.
ಇದೇ ಸಂದರ್ಭದಲ್ಲಿ ಸಣ್ಣಮನೆ ಸೇತುವೆ ಕಾಮಗಾರಿಯನ್ನು ಮಳೆಗಾಲ ಮುಗಿದ ಮೇಲೆ ನಾನೇ ಖುದ್ದು ಮುಂದೆ ನಿಂತು ಮಾಡಿಸುವುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಭರವಸೆ ನೀಡಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ರೈತರಿಗೆ ಮಹತ್ವದ ಮಾಹಿತಿ: ಕೃಷಿ ಪ್ರಶಸ್ತಿ ಯೋಜನೆಯಡಿ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಸ್ಪರ್ಧೆಗೆ ಅರ್ಜಿ ಆಹ್ವಾನ
BREAKING : ಕುಸ್ತಿಪಟು ವಿನೇಶ್ ಪೋಗಾಟ್, ಭಜರಂಗ್ ಪೂನಿಯಾ ಕಾಂಗ್ರೆಸ್ ಸೇರ್ಪಡೆ | Joining Congress