ಯಾದಗಿರಿ: 2024-25ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯ ಪ್ರೌಢ ಶಾಲಾ ವಿಭಾಗದಲ್ಲಿ ಸುರಪೂರದ ಆರ್ ಎಂ ಎಸ್ ಎ ದೇವಿಕೇರಾ ಪ್ರೌಢ ಶಾಲೆಯ ತಿಪ್ಪೇಸ್ವಾಮಿ ಆಯ್ಕೆಯಾಗಿದ್ದಾರೆ.
ಯಾದಗಿರಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪಟ್ಟಿಯನ್ನು ಪ್ರಕಟಿಸಿದ್ದು, 2024-25ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಾಲ್ವರು, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮೂವರು ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ಮೂವರು ಶಿಕ್ಷಕರನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ತಿಪ್ಪೇಸ್ವಾಮಿ ಆಯ್ಕೆ
ಯಾದಗಿರಿ ಜಿಲ್ಲೆಯ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಅತ್ಯುತ್ತಮ ಶಿಕ್ಷಕ ಶ್ರೀ ತಿಪ್ಪೇಸ್ವಾಮಿ ಎಂ ಆರ್ ಗಣಿತ ಶಿಕ್ಷಕರು ಸರಕಾರಿ ಪ್ರೌಢಶಾಲೆ ( ಪಿ ಎಮ್ ಶ್ರೀ ಶಾಲೆ ) ದೇವಿಕೇರಾ ತಾಲೂಕು ಸುರಪುರ ಲಭಿಸಿರುತ್ತದೆ.
20 ವರ್ಷಗಳಿಂದ ಗಣಿತ ಶಿಕ್ಷಕರಾಗಿ ರಾಷ್ಟ್ರ ಹಾಗೂ ರಾಜ್ಯ ಹಂತದ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ವೈವಿಧ್ಯಮಯವಾದ ವಿಧಾನಗಳ ಮೂಲಕ ಕಲಿಕೆಯಲ್ಲಿ ತೊಡಗಿಸುವುದರಿಂದ ಗಣಿತ ವಿಷಯದಲ್ಲಿ ಪ್ರತಿ ವರ್ಷ ಅತಿ ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣಾರಾಗಲು ಕಾರಣಿಭೂತರಾದ ಕೀರ್ತಿ ಇವರಿಗೆ ಸಲ್ಲುತ್ತದೆ.
ಈ ಹಿಂದೆ ಇನ್ಸ್ಪೈರ್ ಅವಾರ್ಡ್ ಮನಕ್ ಶಾಲೆಯ ವಿದ್ಯಾರ್ಥಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದಂತಹ ಸಾಧನೆ ಮಾಡಿದ್ದಾರೆ. ರಾಜ್ಯಮಟ್ಟದ ಸಹಶಿಕ್ಷಕರ ಸ್ಥಳದಲ್ಲೇ ಪಾಠೋಪಕರಣ ತಯಾರಿಕೆ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದರು. ಡಿ ಎಸ್ಇಆರ್‌ಟಿ ಅಡಿಯಲ್ಲಿ ಗುರು ಚೇತನ ಕಾರ್ಯಕ್ರಮದಲ್ಲಿ ಹಲವಾರು ಸಾಹಿತ್ಯಗಳ ರಚನೆಯಲ್ಲಿ ತೊಡಗಿದ್ದಾರೆ.
ಶಿಕ್ಷಕರಿಗೆ ಉಪಯುಕ್ತ ವಾಗುವಂತಹ ಹಣಕಾಸು ಸಾಕ್ಷರತೆ ಸಾಹಿತ್ಯ ರಚನೆಯಲ್ಲಿ ಭಾಗವಹಿಸಿದ್ದರು. ಒಂಬತ್ತು ಮತ್ತು 10ನೇ ತರಗತಿಯ ಕಲಿಕಾ ಸರಿ ಎನ್ನುವ ವಿನೂತನ ಕೈಪಿಡಿ ರಚನಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಎಂ ಈ ಪಿ 20 ರ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಮುಖ ಕಾರ್ಯಗಳನ್ನು ಪಟ್ಟಿ ಮಾಡುವ ಡಯಟ್ ಹಂತದ ಸಾಹಿತ್ಯ ರಚನೆಯಲ್ಲಿ ತೊಡಗಿರುತ್ತಾರೆ. ಇವರು ಗಣಿತ ಶಿಕ್ಷಕರಿಗೆ ಡಯಟ್ ಹಂತದಲ್ಲಿ ಹಲವಾರು ತರಬೇತಿಗಳನ್ನು ನೀಡುವುದರ ಮೂಲಕ ಜಿಲ್ಲೆಯ ಗಣಿತ ಶಿಕ್ಷಕರಲ್ಲಿ ಮನೆಮಾತಾಗಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
‘ಡೆಂಗ್ಯೂ’ ಸಾಂಕ್ರಾಮಿಕ ಕಾಯಿಲೆ, ಸ್ವಚ್ಛತೆ ಕಾಪಾಡಿ: ಇಲ್ಲದಿದ್ದರೇ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಈ ದಂಡ ಫಿಕ್ಸ್
ರೈತರಿಗೆ ಮಹತ್ವದ ಮಾಹಿತಿ: ಕೃಷಿ ಪ್ರಶಸ್ತಿ ಯೋಜನೆಯಡಿ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಸ್ಪರ್ಧೆಗೆ ಅರ್ಜಿ ಆಹ್ವಾನ
BREAKING : ಕುಸ್ತಿಪಟು ವಿನೇಶ್ ಪೋಗಾಟ್, ಭಜರಂಗ್ ಪೂನಿಯಾ ಕಾಂಗ್ರೆಸ್ ಸೇರ್ಪಡೆ | Joining Congress