ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಬಳ್ಳಾರಿ ಜೈಲಿನಲ್ಲಿ ಬೀಡು ಬಿಟ್ಟಿರುವ ನಟ ದರ್ಶನ್ ಹಾಗೂ 17 ಮಂದಿ ಒಟ್ಟು ಆರೋಪಿಗಳ ವಿರುದ್ದ ಇಂದು ಬೆಳಗ್ಗೆ ನ್ಯಾಯಾಲಯಕ್ಕೆ ಪೊಲೀಸರು ಚಾರ್ಚಚ ಶೀಟ್ ಸಲ್ಲಿಸಿದ್ದಾರೆ.
ಒಟ್ಟು 4000 ಪುಟಗಳ ಚಾರ್ಚ್ ಶೀಟ್ನಲ್ಲಿ ತನಿಖೆ ಬಗ್ಗೆ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿರುವ ಪೊಲೀಸರು ಕೊನೆಗೂ ದರ್ಶನ್ ಸೇರಿದಂತೆ ಒಟ್ಟು ಆರೋಪಿಗಳ ವಿರುದ್ದ ಆರೋಪಪಟ್ಟಿಯನ್ನು ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ಕಳೆದ ಎರಡು ದಿನಗಳಿಂದ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ಬಳಿಕ ಕೊನೆಗೂ ಇಂದು ನ್ಯಾಯಾಲಯದಲ್ಲಿ ಚಾರ್ಚ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಬೆಂಗಳೂರಿನ 24ನೇ ಎಸಿಎಂ ಎಂ ನ್ಯಾಯಾಲಯದ ನ್ಯಾಯಾಧೀಶರಿಗೆ ಪೊಲೀಸರು ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು ಎನ್ನಲಾಗಿದೆ. ಈ ವೇಳೇ ಎಸಿಪಿ ಚಂದನ್ ಅವರು ಹಾಜರಿದ್ದರು. ಇದಲ್ಲದೇ ಚಾರ್ಚ್ ಶೀಟ್ ಜೊತೆಗೆ ತನಿಖೆಯಲ್ಲಿ ಕಂಡು ಬಂದಿರುವ ಮಹತ್ವದ ಮಾಹಿತಿಗಳನ್ನು ಕೂಡ ಸಲ್ಲಿಸಲಾಗಿದೆ ಅಂಥ ತಿಳಿದು ಬಂದಿದೆ. ಆರೋಪ ಪಟ್ಟಿಯಲ್ಲಿ ಕೂಡ ಪವಿತ್ರ ಕೂಡ ಆರೋಪಿ ಒಂದು ಹಾಗೂ ದರ್ಶನ್ ಎರಡನೇ ಆರೋಪಿಯಾಗಿ ಸ್ಥಾನ ಪಡೆದುಕೊಂಡಿದ್ದಾರೆ ಅಂಥ ತಿಳಿದು ಬಂದಿದೆ.