Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬಾಂಗ್ಲಾದೇಶದ ಮಧ್ಯಂತರ ನಾಯಕ ಸ್ಥಾನಕ್ಕೆ ‘ರೆಹಮಾನ್ ಯೂನಸ್’ ರಾಜೀನಾಮೆ

16/02/2026 10:02 PM

BIGG NEWS : ಭಾರತ-ಬ್ರೆಜಿಲ್ 10 ವರ್ಷಗಳ ವೀಸಾಗಳಿಗೆ ಅನುಮೋದನೆ ; ದೀರ್ಘಾವಧಿಯ ಪ್ರವೇಶ ಈಗ ಸುಲಭ!

16/02/2026 9:57 PM

BREAKING : ಫೆ.25-26ರಂದು ಪ್ರಧಾನಿ ಮೋದಿ ಇಸ್ರೇಲ್’ಗೆ ಭೇಟಿ ; ಪ್ರಧಾನಿ ‘ಬೆಂಜಮಿನ್ ನೆತನ್ಯಾಹು’ ಘೋಷಣೆ!

16/02/2026 9:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಎಲ್ಲಾ ಅನುದಾನಿತ ವಿಕಲಚೇತನರ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ ಸೇರಿ ಎಲ್ಲಾ ಸೌಲಭ್ಯ : ಸಚಿವ ಮಧು ಬಂಗಾರಪ್ಪ
KARNATAKA

ರಾಜ್ಯದ ಎಲ್ಲಾ ಅನುದಾನಿತ ವಿಕಲಚೇತನರ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ ಸೇರಿ ಎಲ್ಲಾ ಸೌಲಭ್ಯ : ಸಚಿವ ಮಧು ಬಂಗಾರಪ್ಪ

By kannadanewsnow5704/09/2024 5:03 AM

ಶಿವಮೊಗ್ಗ: ಸಮಾಜದಲ್ಲಿ ಎಲ್ಲಾ ವರ್ಗದ ಜನರಿಗೂ ಸಮಾನತೆಯನ್ನು ನೀಡುವ ಕೆಲಸ ಸರ್ಕಾರದ ಯೋಜನೆಗಳಿಂದ ಆಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.

ಮಂಗಳವಾರ ಶ್ರೀ ಶಾರದಾದೇವಿ ಅಂಧರ ವಿಕಾಸ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ 53 ಜನ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು.

ಸಮಾಜದಲ್ಲಿ ಇತರರಿಗಿಂತ ನಾವು ಭಿನ್ನವಾಗಿದ್ದೇವೆ ಎನ್ನುವ ಮನೋಭಾವ ವಿಕಲಚೇತನರಿಗೆ ಮೂಡಬಾರದು ಎಂದು ಸರ್ಕಾರ ವಿಕಲಚೇತನರಿಗೆ ಸಮಾಜದಲ್ಲಿ ಸಮಾನತೆಯನ್ನು ತರಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಯಾವುದಾದರು ಯೋಜನೆಗಳಲ್ಲಿ ಅನುದಾನದ ಕೊರತೆ ಅಥವಾ ಇನ್ನಾವುದೇ ರೀತಿಯ ತೊಂದರೆ ಉಂಟಾದರೆ ನನ್ನ ಗಮನಕ್ಕೆ ತನ್ನಿ ಪರಿಹಾರ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಮ್ಮ ಕೆಲಸ ಕೇವಲ ಭಾಷಣಗಳಿಗೆ ಮಾತ್ರ ಸೀಮಿತವಾಗಿರಬಾರದು ಅನುಷ್ಠಾನ ಮತ್ತು ಸೇವೆ ನೀಡುವಲ್ಲಿ ಮುಂದಾಗಬೇಕು ಎಂದರು.

ರಾಜ್ಯದ ಎಲ್ಲಾ ಅನುದಾನಿತ ವಿಕಲಚೇತನರ ಶಾಲೆಗಳಲ್ಲಿ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮಾಧ್ಯಹ್ನದ ಬಿಸಿಊಟ ಯೋಜನೆ ವಿಸ್ತರಿಲಾಗುವುದು. ಈ ಕುರಿತು ಸರ್ಕಾರದಿಂದ ಅಧಿಕೃತ ಆದೇಶವನ್ನು ಹೊರಡಿಸಲಾಗುವುದು. ವಿಕಲಚೇತನ ಮಕ್ಕಳಿಗೆ ಈ ಯೋಜನೆಗಳು ತಲುಪಬೇಕಾಗಿದ್ದು ಶಿಕ್ಷಣ ಇಲಾಖೆ ಅಡಿಯಲ್ಲಿ ಸಿಗುವ ಉಚಿತ ಸಮವಸ್ತ್ರ, ಶೂ, ಹಾಗೂ ಇನ್ನಿತರ ಸೌಲಭ್ಯಗಳನ್ನು ರಾಜ್ಯದ ಎಲ್ಲಾ ವಿಕಲಚೇತನರ ಮಕ್ಕಳ ಶಾಲೆಗಳಿಗೆ ವಿಸ್ತರಿಸಲು ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಡಿಐಆರ್‌ಟಿ ಕಾರ್ಯಕ್ರಮದ ಅಡಿ ಶಿಕ್ಷಕರು ವಿಕಲಚೇತನ ಮಕ್ಕಳ ಮನೆಗಳಿಗೆ ತೆರಳಿ ಅವರಿಗೆ ಅಗತ್ಯವಿರುವ ಸೌಲಭ್ಯ, ತರಬೇತಿ ನೀಡುವರು. ಇದನ್ನು ಅವರು ಉಪಯೋಗಿಸಿಕೊಳ್ಳಬೇಕು. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿAದ 5 ಗ್ಯಾರಂಟಿಗಳ ಮೂಲಕ ಜೊತೆ ಸಮಾಜದಲ್ಲಿ ಸಮಾನತೆಯನ್ನು ನೀಡುವ ಅನೇಕ ಕೆಲಸವನ್ನು ಮಾಡುತ್ತಿದೆ. ಇಂದು ಜಿಲ್ಲೆಯ ಎಲ್ಲಾ ತಾಲೂಕುಗಳ 53 ಫಲಾನುಭವಿಗಳಿಗೆ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಲಾಗಿದ್ದು ಅತ್ಯಂತ ಜಾಗರೂಕತೆಯಿಂದ ವಾಹನ ಚಾಲಾಯಿಸಬೇಕು. ಮಕ್ಕಳ ಕೈಯಲ್ಲಿ ವಾಹನ ಎಂದು ಎಚ್ಚರಿಕೆ ಮಾತು ಹೇಳಿದರು.

ಈ ವೇಳೆ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಆರ್‌ಡಬ್ಲುö್ಯ ಮತ್ತು ಎಂಆರ್‌ಡಬ್ಲುö್ಯ ಗಳು, ತಾವು ಅನೇಕ ವರ್ಷಗಳಿಂದ ಗೌರವಧನದ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು ಸೇವೆ ಖಾಯಂಗೊಳಿಸುವAತೆ ಸಚಿವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರವಿಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರಾದ ಚಂದ್ರಭೂಪಾಲ್, ಸೂಡಾ ನಿರ್ದೇಶಕರಾದ ಪ್ರವೀಣ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಶಶಿರೇಖಾ, ಶಾರದಾ ಅಂಧರ ವಿಕಾಸ ಶಾಲೆಯ ಮುಖ್ಯಸ್ಥರಾದ ಈಶ್ವರ್ ಭಟ್, ಮತ್ತಿತರರು ಉಪಸ್ಥಿತರಿದ್ದರು.

All aided schools for differently-abled persons in the state will have all facilities including mid-day meals free uniforms: Minister Madhu Bangarappa ಉಚಿತ ಸಮವಸ್ತ್ರ ಸೇರಿ ಎಲ್ಲಾ ಸೌಲಭ್ಯ : ಸಚಿವ ಮಧು ಬಂಗಾರಪ್ಪ ರಾಜ್ಯದ ಎಲ್ಲಾ ಅನುದಾನಿತ ವಿಕಲಚೇತನರ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ
Share. Facebook Twitter LinkedIn WhatsApp Email

Related Posts

‘ನಂದಿನಿ ಉತ್ಪನ್ನ’ಗಳನ್ನು ‘FSSAI’ ಎಲ್ಲಾ ಸುರಕ್ಷತಾ ಮಾನದಂಡ ಪಾಲಿಸಿ ತಯಾರಿಕೆ: KMF ಸ್ಪಷ್ಟನೆ | Nandini Products

16/02/2026 9:19 PM1 Min Read

BREAKING: ಈಸೂರು ದಂಗೆಯ ಕೊನೆಯ ಕೊಂಡಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಕೆ.ದೇವೇಂದ್ರಪ್ಪ ನಿಧನ

16/02/2026 8:25 PM1 Min Read

ಪತ್ರಕರ್ತರಿಗೆ ಸರ್ಕಾರಿ ನಿವೇಶನ ಹಂಚಿಕೆಯ ವೇಳೆ ಶೇ.5ರಷ್ಟು ಮೀಸಲಾತಿ ನೀಡಿ: ಸಿಎಂಗೆ KUWJ ಮನವಿ

16/02/2026 8:19 PM1 Min Read
Recent News

BREAKING : ಬಾಂಗ್ಲಾದೇಶದ ಮಧ್ಯಂತರ ನಾಯಕ ಸ್ಥಾನಕ್ಕೆ ‘ರೆಹಮಾನ್ ಯೂನಸ್’ ರಾಜೀನಾಮೆ

16/02/2026 10:02 PM

BIGG NEWS : ಭಾರತ-ಬ್ರೆಜಿಲ್ 10 ವರ್ಷಗಳ ವೀಸಾಗಳಿಗೆ ಅನುಮೋದನೆ ; ದೀರ್ಘಾವಧಿಯ ಪ್ರವೇಶ ಈಗ ಸುಲಭ!

16/02/2026 9:57 PM

BREAKING : ಫೆ.25-26ರಂದು ಪ್ರಧಾನಿ ಮೋದಿ ಇಸ್ರೇಲ್’ಗೆ ಭೇಟಿ ; ಪ್ರಧಾನಿ ‘ಬೆಂಜಮಿನ್ ನೆತನ್ಯಾಹು’ ಘೋಷಣೆ!

16/02/2026 9:51 PM

ನಿಮ್ಗೆ ಗೊತ್ತಾ.? ‘ಎಂ.ಎಸ್ ಧೋನಿ’ಗೆ ಪ್ರತಿ ತಿಂಗಳು 70,000 ರೂ. ಪಿಂಚಣಿ ; ‘BCCI’ ನೀಡುವ ನಿವೃತ್ತಿ ಸೌಲಭ್ಯಗಳಿವು.!

16/02/2026 9:42 PM
State News
KARNATAKA

‘ನಂದಿನಿ ಉತ್ಪನ್ನ’ಗಳನ್ನು ‘FSSAI’ ಎಲ್ಲಾ ಸುರಕ್ಷತಾ ಮಾನದಂಡ ಪಾಲಿಸಿ ತಯಾರಿಕೆ: KMF ಸ್ಪಷ್ಟನೆ | Nandini Products

By kannadanewsnow0916/02/2026 9:19 PM KARNATAKA 1 Min Read

ಬೆಂಗಳೂರು: ನಂದಿನಿ ಉತ್ಪನ್ನಗಳನ್ನು ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡ ಪ್ರಾಧಿಕಾರದ ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಪಾಲಿಸಿ ತಯಾರಿಸಲಾಗುತ್ತಿದೆ. ಸಾಮಾಜಿಕ…

BREAKING: ಈಸೂರು ದಂಗೆಯ ಕೊನೆಯ ಕೊಂಡಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಕೆ.ದೇವೇಂದ್ರಪ್ಪ ನಿಧನ

16/02/2026 8:25 PM

ಪತ್ರಕರ್ತರಿಗೆ ಸರ್ಕಾರಿ ನಿವೇಶನ ಹಂಚಿಕೆಯ ವೇಳೆ ಶೇ.5ರಷ್ಟು ಮೀಸಲಾತಿ ನೀಡಿ: ಸಿಎಂಗೆ KUWJ ಮನವಿ

16/02/2026 8:19 PM

ಕುಲದೇವರ ದೇವಸ್ಥಾನಕ್ಕೆ ಹೋಗುವಾಗ ತಪ್ಪದೇ ಹೀಗೆ ಮಾಡಿ, ನಿಮ್ಮ ಸಮಸ್ಯೆಗಳೆಲ್ಲ ದೂರ ಗ್ಯಾರಂಟಿ

16/02/2026 8:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.