ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕರಿಗೆ ಲಘು / ಭಾರಿ ವಾಹನ ಚಾಲನಾ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಮುಂದಿದೆ ಓದಿ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬೆ.ಮ.ಸಾ.ಸಂ) ತರಬೇತಿ ಕೇಂದ್ರದಲ್ಲಿ ಸಾರ್ವಜನಿಕರಿಗೆ ಲಘು ಮತ್ತು ಭಾರಿ ವಾಹನಗಳ ಚಾಲನಾ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆಯಲು ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
ಅರ್ಜಿದಾರರು ಸಲ್ಲಿಸಬೇಕಾಗಿರುವ ದಾಖಲೆಗಳು ಮತ್ತು ಅರ್ಹತೆ
ಲಘು ವಾಹನ ಚಾಲನಾ ತರಬೇತಿ
ವಯೋಮಿತಿ ಕನಿಷ್ಟ 18 ವರ್ಷ.
ದಾಖಲೆಗಳು:
– ಜನನ ಪ್ರಮಾಣ ಪತ್ರ ಅಥವಾ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ ಟಿ.ಸಿ ಅಥವಾ ನೋಟರಿಯಿಂದ ಪ್ರಮಾಣ ಪತ್ರ.
– ಆಧಾರ್ ಕಾರ್ಡ್.
– 5 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.
ಭಾರಿ ವಾಹನ ಚಾಲನಾ ತರಬೇತಿ:
1. ವಯೋಮಿತಿ: ಕನಿಷ್ಟ 20 ವರ್ಷ.
2. ದಾಖಲೆಗಳು:
– ಜನನ ಪ್ರಮಾಣ ಪತ್ರ ಅಥವಾ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ ಟಿ.ಸಿ ಅಥವಾ ನೋಟರಿಯಿಂದ ಪ್ರಮಾಣ ಪತ್ರ.
– ಆಧಾರ್ ಕಾರ್ಡ್.
– 5 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.
– ಲಘು ವಾಹನ ಪರವಾನಗಿ ಪಡೆದ ದಿನಾಂಕದಿಂದ ಒಂದು ವರ್ಷ ಪೂರ್ಣಗೊಂಡಿರಬೇಕು.
ತರಬೇತಿ ಶುಲ್ಕ:
ವಸತಿ ಸಹಿತ:
– ಲಘು ವಾಹನ: 26 ದಿನಗಳ ವಾಹನ ಚಾಲನಾ ತರಬೇತಿ – ₹13,000/-
– ಭಾರಿ ವಾಹನ: 26 ದಿನಗಳ ವಾಹನ ಚಾಲನಾ ತರಬೇತಿ – ₹16,700/-
ವಸತಿ ರಹಿತ:
– ಲಘು ವಾಹನ: 26 ದಿನಗಳ ವಾಹನ ಚಾಲನಾ ತರಬೇತಿ – ₹7,000/-
– *ಭಾರಿ ವಾಹನ:* 26 ದಿನಗಳ ವಾಹನ ಚಾಲನಾ ತರಬೇತಿ – ₹11,000/-
ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ:
– ಲಘು ವಾಹನ: 6 ದಿನಗಳ ಚಾಲನಾ ಕೌಶಲ್ಯ ಅಭಿವೃದ್ದಿ ತರಬೇತಿ – ₹4,250/- (ವಸತಿ ಸಹಿತ) / ₹3,000/- (ವಸತಿ ರಹಿತ).
– ಭಾರಿ ವಾಹನ: 6 ದಿನಗಳ ಚಾಲನಾ ಕೌಶಲ್ಯ ಅಭಿವೃದ್ದಿ ತರಬೇತಿ – ₹6,000/- (ವಸತಿ ಸಹಿತ) / ₹5,000/- (ವಸತಿ ರಹಿತ).
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:
– 7760991085
– 6364858520 (ಕಛೇರಿ ವೇಳೆಯಲ್ಲಿ).
ಕಛೇರಿ ವಿಳಾಸ:
ಚಾಲಕರ ತರಬೇತಿ ಕೇಂದ್ರ, ವಡ್ಡರಹಳ್ಳಿ, ಕಡಬಗೆರೆ ಅಂಚೆ, ಮಾಗಡಿ ಮುಖ್ಯ ರಸ್ತೆ, ಬೆಂಗಳೂರು-562130.
BMTC ಬಸ್ಸಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ: 2,778 ಪ್ರಕರಣ ಪತ್ತೆ, 5.58 ಲಕ್ಷ ದಂಡ ವಸೂಲಿ
BIG NEWS : ಏನ್ರಿ ಮೀಡಿಯಾ?…ಎಂದಿದ್ದ ಕೊಲೆ ಆರೋಪಿ ನಟ ದರ್ಶನ್ ಗೆ ಜೈಲಿನಲ್ಲಿ ಟಿವಿ ಬೇಕೆ ಬೇಕಂತೆ!
ರೈಲ್ವೆ ಪ್ರಯಾಣಿಕರ ಗಮನಕ್ಕೆ: ಭುವನೇಶ್ವರ-ಬೆಳಗಾವಿ ನಡುವೆ ವಿಶೇಷ ರೈಲು ಸಂಚಾರ