ಬೆಂಗಳೂರು: ಭಾರತದ ನಗರಗಳನ್ನು ವಾಸಯೋಗ್ಯ ಮಾಡದೇ ಹೋದರೆ ಜನರು ಗ್ರಾಮೀಣ ಪ್ರದೇಶಗಳಿಗೆ ಮರಳುತ್ತಾರೆ ಹಾಗೂ ಅಲ್ಲಿನ ಭೂಮಿಯನ್ನು ಕಸಿದು ಹಳ್ಳಿಗಳನ್ನು ನಗರಗಳಾಗಿ ಪರಿವರ್ತಿಸುತ್ತಾರೆ ಎಂದು ಲೇಖಕಿ ಮತ್ತು ಸರೋವರ ಕಾರ್ಯಕರ್ತೆ ಉಷಾ ರಾಜಗೋಪಾಲನ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಆಗಸ್ಟ್ 27ರಿಂದ 29ರವರೆಗೆ ಹೊಸದಿಲ್ಲಿಯ ಡಾ.ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ (ಡಿಎಐಸಿ) ನಡೆದ ಕಾಮನ್ಸ್ ಕನ್ವೀನಿಂಗ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಮನ್ಸ್ (ಮುಕ್ತ ಭೂವಲಯ) ಎಂಬ ಪದವನ್ನು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಜನಜೀವನಕ್ಕೆ ಸಂಬಂಧಿಸಿದಂತೆ ಅರ್ಥೈಸಲಾಗುತ್ತದೆ. ಆದರೆ ಅದು ಅರಣ್ಯ ಮತ್ತು ಗ್ರಾಮೀಣ ಪ್ರದೇಶದ ನೈಸರ್ಗಿಕ ಸಂಪನ್ಮೂಲಗಳಿಗೆ ಸೀಮಿತವಾಗಿಲ್ಲ. ನಗರ ಪ್ರದೇಶಕ್ಕೂ ಅದು ಅನ್ವಯವಾಗುತ್ತದೆ. ಹೀಗಾಗಿ ನಗರ ಪ್ರದೇಶವನ್ನೂ ಜನರ ವಾಸಕ್ಕೆ ಯೋಗ್ಯವಾಗಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಜನರು ತಮ್ಮ ಮೂಲಕ್ಕೆ ಮರಳಿ ಅಲ್ಲಿನ ನೈಸರ್ಗಿಕ ಸಂಪತ್ತುಗಳನ್ನು ಕಬಳಿಸಲಿದ್ದಾರೆ ಎಂದು ಹೇಳಿದರು.
‘ಚೇಂಜ್ ಮೇಕರ್ಸ್ ಫಾರ್ ಕಾಮನ್ಸ್: ಸೆಲೆಬ್ರೇಟಿಂಗ್ ಅಂಡ್ ಲರ್ನಿಂಗ್ ಫ್ರಮ್ ದಿ ಕಾಮನ್ಸ್ ಕನ್ವೀನಿಂಗ್’ ಎಂಬ ಶೀರ್ಷಿಕೆಯಡಿ ನಡೆದ ಸಮಾವೇಶದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿದಂತೆ 20ಕ್ಕೂ ಅಧಿಕ ರಾಜ್ಯಗಳ 500 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಭಾರತದಾದ್ಯಂತ ವ್ಯಾಪಿಸಿರುವ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ಹೊಸ ಮಾರ್ಗಗಳನ್ನು ರೂಪಿಸಲು ಈ ಸಮಾವೇಶದಲ್ಲಿ ಸಮುದಾಯಗಳ ನಾಯಕರು, ನೀತಿ ನಿರೂಪಕರು, ಶಿಕ್ಷಣ ತಜ್ಞರು, ನಾಗರಿಕ ಸಮಾಜ ಸಂಸ್ಥೆಗಳು, ತಂತ್ರಜ್ಞರು, ಉದ್ಯಮಿಗಳು ಮತ್ತು ಮಾಧ್ಯಮ ವೃತ್ತಿಪರರು ಸೇರಿದ್ದರು.
ಭಾರತದಲ್ಲಿ 205 ದಶಲಕ್ಷ ಎಕರೆಗಳು ಸರಿಸುಮಾರು ಕಾಲು ಭಾಗದಷ್ಟು ಭೂಪ್ರದೇಶವನ್ನು ಹೊಂದಿದ್ದು, ಸಮುದಾಯ ಅರಣ್ಯಗಳು, ಹುಲ್ಲುಗಾವಲುಗಳು ಮತ್ತು ಜಲಮೂಲಗಳನ್ನು ಒಳಗೊಂಡಿದೆ. ದುರದೃಷ್ಟವಶಾತ್, ಈ ಸಂಪನ್ಮೂಲಗಳು ವರ್ಷದಿಂದ 4% ರಷ್ಟು ಇಳಿಕೆಯಾಗುತ್ತಿದೆ ಎಂದು ಸಮಾವೇಶದಲ್ಲಿ ಕಳವಳ ವ್ಯಕ್ತಪಡಿಸಲಾಯಿತು.
ಕಾಮನ್ಸ್ ಕನ್ವೀನಿಂಗ್ ಸಮಾವೇಶದಲ್ಲಿ ಕಾಮನ್ಸ್ (ಮುಕ್ತಭೂಪ್ರದೇಶ) ಪ್ರಾಮುಖ್ಯತೆಯನ್ನು ಚರ್ಚಿಸಲಾಯಿತು. ಈ ಪ್ರದೇಶಗಳ ನಿರ್ವಹಣೆಯನ್ನು ಸ್ಥಳೀಯ ಆಡಳಿತಕ್ಕೆ ಒಪ್ಪಿಸುವ ವಿಚಾರದ ಬಗ್ಗೆ ಅಭಿಪ್ರಾಯಗಳು ವ್ಯಕ್ತಗೊಂಡವು. ಹವಾಮಾನ ಬದಲಾವಣೆ ಮತ್ತು ಹೆಚ್ಚುತ್ತಿರುವ ಸಾಮಾಜಿಕ ಅಂತರಗಳ ಅವಳಿ ಬಿಕ್ಕಟ್ಟುಗಳ ಪರಿಹಾರಕ್ಕೆ ಕಾಮನ್ಸ್ ವೇದಿಕೆಯಾಗಿ ಕಾರ್ಯನಿರ್ವಹಿಸಬಹುದು ಎಂದು ಅಭಿಪ್ರಾಯಪಡಲಾಯಿತು. 37 ಕ್ಯುರೇಟೆಡ್ ಸೆಷನ್ಗಳು ನಡೆದವು.
Good News: ಜಿಲ್ಲೆಗೊಂದು ‘ವೈದ್ಯಕೀಯ ಕಾಲೇಜು’ ತೆರೆಯಲಾಗುವುದು: ಸಿಎಂ ಸಿದ್ಧರಾಮಯ್ಯ
BREAKING: ‘ಶಿವಮೊಗ್ಗ ಜಿಲ್ಲೆ’ಯಾಧ್ಯಂತ ಗಣೇಶ, ಈದ್ ಮಿಲಾದ್ ಹಬ್ಬದ ವೇಳೆ ‘DJ ಬಳಕೆ’ಗೆ ನಿಷೇಧ ಹೇರಿ ‘DC ಆದೇಶ’
BIG NEWS : ಏನ್ರಿ ಮೀಡಿಯಾ?…ಎಂದಿದ್ದ ಕೊಲೆ ಆರೋಪಿ ನಟ ದರ್ಶನ್ ಗೆ ಜೈಲಿನಲ್ಲಿ ಟಿವಿ ಬೇಕೆ ಬೇಕಂತೆ!