ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ಬ್ರೂನಿಗೆ ಬಂದಿಳಿದಿದ್ದು, ಯುವರಾಜ ಹಾಜಿ ಅಲ್-ಮುಹ್ತಾದಿ ಬಿಲ್ಲಾ ಅವ್ರನ್ನ ಸ್ವಾಗತಿಸಿದರು. ಅಂದ್ಹಾಗೆ, ಬ್ರೂನಿಯ ಸುಲ್ತಾನ್ ಹಾಜಿ ಹಸನಾಲ್ ಬೋಲ್ಕಿಯಾ (Sultan Haji Hassanal Bolkiah) ಅವರ ಜತೆಗೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದು, ಉಭಯ ದೇಶಗಳ ನಡುವಿನ 40 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನ ಬಲಪಡಿಸಲಾಗುವುದು.
ಅಂದ್ಹಾಗೆ, ಬ್ರೂನಿ ಮಹಾರಾಜ ಬೋಲ್ಕಿಯಾ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, ತುಂಬಾ ಐಷಾರಾಮಿ ಜೀವನವನ್ನ ನಡೆಸುತ್ತಿದ್ದಾರೆ. ಇನ್ನಿವ್ರು ಅತಿ ಹೆಚ್ಚು ದುಬಾರಿ ಕಾರುಗಳನ್ನ ಹೊಂದಿದ್ದು, ಸುಮಾರು 5 ಬಿಲಿಯನ್ ಡಾಲರ್ ಮೌಲ್ಯದ ಐಷಾರಾಮಿ ಕಾರುಗಳಿವೆ.
ಸುಲ್ತಾನ್ ಬಾಲ್ಕಿಯಾ, ತೈಲ ಮತ್ತು ಅನಿಲ ನಿಕ್ಷೇಪಗಳಿಂದ ಸುಮಾರು 30 ಬಿಲಿಯನ್ ಡಾಲರ್ ಗಳಿಸಿದ್ದಾರೆ. ಇನ್ನವ್ರು ಸುಮಾರು ಏಳು ಸಾವಿರ ಐಷಾರಾಮಿ ವಾಹನಗಳನ್ನ ಹೊಂದಿದ್ದು, ಅವುಗಳಲ್ಲಿ 600 ರೋಲ್ಸ್ ರಾಯ್ಸ್ ಕಾರುಗಳಿವೆ. ಅವರ ಹೆಸರಿನಲ್ಲಿ ಗಿನ್ನಿಸ್ ದಾಖಲೆಯೂ ಇದ್ದು, ಬೊಲ್ಚಿಯಾ ಸಂಗ್ರಹವು 450 ಫೆರಾರಿಸ್ ಮತ್ತು 380 ಬೆಂಟ್ಲಿ ಕಾರುಗಳನ್ನ ಸಹ ಒಳಗೊಂಡಿದೆ. ಅವರು ಪೋರ್ಷೆ, ಲಂಬೋರ್ಗಿನಿ, ಮೇಬ್ಯಾಕ್, ಜಾಗ್ವಾರ್, ಬಿಎಂಡಬ್ಲ್ಯು ಮತ್ತು ಮೆಕ್ಲಾರೆನ್ ಕಾರುಗಳನ್ನ ಹೊಂದಿದ್ದಾರೆ.
ಸುಲ್ತಾನ್ ಬೊಲ್ಕಿಯಾ ಅವರ ಸಂಗ್ರಹದಲ್ಲಿರುವ ಬೆಂಟ್ಲಿ ಡೊಮಿನರ್ ಎಸ್‌ಯುವಿ ವಿಶೇಷ ಆಕರ್ಷಣೆಯಾಗಿ ನಿಂತಿದೆ, ಇದರ ಮೌಲ್ಯ ಸುಮಾರು $80 ಮಿಲಿಯನ್. ಪೋರ್ಷೆ 911 ಹರೈಸನ್ ಬ್ಲೂ, 24 ಕ್ಯಾರೆಟ್ ಚಿನ್ನದ ಪ್ಲೇಟ್ ರೋಲ್ಸ್ ರಾಯ್ಸ್ ಸಿಲ್ವರ್ ಸ್ಪರ್-2 ಕಾರುಗಳು. ತೆರೆದ ಛಾವಣಿಯೊಂದಿಗೆ ಕಸ್ಟಮ್ ವಿನ್ಯಾಸದ ರೋಲ್ಸ್ ರಾಯ್ಸ್ ಕೂಡ ಇದೆ. ಅವರು 2007 ರಲ್ಲಿ ತಮ್ಮ ಪುತ್ರಿ ರಾಜಕುಮಾರಿ ಮಜೆಡೆಡಾ ಅವರ ವಿವಾಹಕ್ಕಾಗಿ ಚಿನ್ನದ ಲೇಪನದ ರೋಲ್ಸ್ ರಾಯ್ಸ್ ಕಾರನ್ನ ಖರೀದಿಸಿದರು.
ಇಸ್ತಾನಾ ನೂರುಲ್ ಇಮಾನ್ ಅರಮನೆಯು ಸುಲ್ತಾನ್ ಬೊಲ್ಕಿಯಾ ಅವರ ನಿವಾಸವಾಗಿದ್ದು, ಈ ಕಟ್ಟಡವು ಅತಿದೊಡ್ಡ ವಸತಿ ಅರಮನೆ ಎಂಬ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿದೆ. ಅರಮನೆಯು ಸುಮಾರು 20 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದೆ. ಕಟ್ಟಡವನ್ನ 22 ಕ್ಯಾರೆಟ್ ಚಿನ್ನದಿಂದ ಅಲಂಕರಿಸಲಾಗಿದೆ. ಬ್ರೂನಿ ಸುಲ್ತಾನ್ ಅರಮನೆಯು ಐದು ಈಜುಕೊಳಗಳು, 1700 ಮಲಗುವ ಕೋಣೆಗಳು, 257 ಸ್ನಾನಗೃಹಗಳು ಮತ್ತು 110 ಗ್ಯಾರೇಜುಗಳನ್ನು ಹೊಂದಿದೆ. ಸುಲ್ತಾನನಿಗೆ ಖಾಸಗಿ ಮೃಗಾಲಯವೂ ಇದ್ದು, ಇದ್ರಲ್ಲಿ 30 ಬಂಗಾಳ ಹುಲಿಗಳು, ವಿವಿಧ ಪಕ್ಷಿ ಪ್ರಭೇದಗಳು ಮತ್ತು ಬೋಯಿಂಗ್ 747 ವಿಮಾನವನ್ನ ಹೊಂದಿದೆ.
BREAKING : ‘ಬ್ರೂನಿ’ ಆಗಮಿಸಿದ ‘ಪ್ರಧಾನಿ ಮೋದಿ’ಗೆ ಅದ್ಧೂರಿ ಸ್ವಾಗತ ; ಯುವರಾಜ ‘ಹಾಜಿ ಅಲ್’ ಹಜಾರ್ |VIDEO
ಮುಡಾ ಹಗರಣ: ಸಿಎಂ ಪತ್ನಿಗೆ 50:50 ಸೈಟ್ ಹಂಚಿಕೆ ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡ ‘ರಾಜ್ಯ ಸರ್ಕಾರ’
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ವೇಗವಾಗಿ ತೆರಳೋರೇ ಎಚ್ಚರ: 130 ಕಿ.ಮೀ ಮಿತಿ ಮೀರಿದ್ರೆ FIR ದಾಖಲು