ಮೈಸೂರು : ಕೊರೊನಾ ಕಾಲದಲ್ಲಿ ನಡೆದಿರುವ ಹಗರಣದ ವರದಿ ಸಲ್ಲಿಕೆಯಾಗಿದ್ದು, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ್ರಂತೆ ಹಾಗಾಯ್ತು ಎಂದು ಸಂಸದ ಡಾ.ಕೆ. ಸುಧಾಕರ್ ಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಕಾಲದಲ್ಲಿ ನಡೆದಿರುವ ಹಗರಣಗಳ ವರದಿ ಸರ್ಕಾರಕ್ಕೆ ನಿನ್ನೆ ಅಷ್ಟೆ ಸಲ್ಲಿಕೆಯಾಗಿದೆ. ವರದಿಯಲ್ಲಿ ಏನಿದೆ ಎಂಬುದು ನನ್ನನ್ನೂ ಸೇರಿಸಿ, ಯಾರಿಗೂ ಗೊತ್ತಿಲ್ಲ. ವರದಿ ಬಹಿರಂಗ ಆಗುವ ಮೊದಲೇ ಡಾ.ಕೆ. ಸುಧಾಕರ್ ಅವರಿಗೆ ವರದಿಯಲ್ಲಿ ಏನಿದೆ ಎಂಬುದು ಗೊತ್ತಾಗಿದೆ ಎಂದರೆ ಏನರ್ಥ?
ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ್ರಂತೆ ಹಾಗಾಯ್ತು ಇದು. ಅವರೊಳಗಿನ ಅಪರಾಧಿಪ್ರಜ್ಞೆ ಅವರನ್ನು ಈ ರೀತಿ ಮಾತಾಡುವಂತೆ ಮಾಡಿದೆ ಎಂದು ವ್ಯಂಗ್ಯವಾಡಿದ್ದಾರೆ.