ಬೆಂಗಳೂರು: 402 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಗೆ ಡೇಟ್ ಫಿಕ್ಸ್ ಮಾಡಲಾಗಿದೆ. ದಿನಾಂಕ 22-09-2024ರಂದು 402 ಪಿಎಸ್ಐ ನೇಮಕಾತಿಗಾಗಿ ಲಿಖಿತ ಪರೀಕ್ಷೆ ನಡೆಸುವುದಾಗಿ ಕೆಇಎ ತಿಳಿಸಿದೆ.
ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು, 402 PSI ಹುದ್ದೆಗಳಿಗೆ ಸೆ.22ರಂದು ಲಿಖಿತ ಪರೀಕ್ಷೆ ನಡೆಯಲಿದ್ದು ಇದಕ್ಕೆ KEA ಸಕಲ ಸಿದ್ಧತೆ ನಡೆಸಿದೆ. 66,000 ಮಂದಿ ಅರ್ಜಿ ಸಲ್ಲಿಸಿದ್ದು, ಪರೀಕ್ಷೆಗೆ ಒಂದು ವಾರ ಮೊದಲು ಪ್ರವೇಶ ಪತ್ರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
402 #PSI ಹುದ್ದೆಗಳಿಗೆ ಸೆ.22ರಂದು ಲಿಖಿತ ಪರೀಕ್ಷೆ ನಡೆಯಲಿದ್ದು ಇದಕ್ಕೆ #kea ಸಕಲ ಸಿದ್ಧತೆ ನಡೆಸಿದೆ.
66,000 ಮಂದಿ ಅರ್ಜಿ ಸಲ್ಲಿಸಿದ್ದು, ಪರೀಕ್ಷೆಗೆ ಒಂದು ವಾರ ಮೊದಲು ಪ್ರವೇಶ ಪತ್ರ ಬಿಡುಗಡೆ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.@CMofKarnataka @drmcsudhakar— KEA (@KEA_karnataka) September 2, 2024
ಇನ್ನೂ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಕನ್ನಡ ಕಡ್ಡಾಯ ಪರೀಕ್ಷೆ ಸೆ.29ರಂದು ನಡೆಯಲಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ಅಕ್ಟೋಬರ್ 27ಕ್ಕೆ ನಡೆಯುವ ಪ್ರಮುಖ ಪರೀಕ್ಷೆಗೆ ಅರ್ಹತೆ ಪಡೆಯಲಿದ್ದಾರೆ. 1000 VAO ಹುದ್ದೆಗಳಿಗೆ 5.7 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದು ಈ ಪರೀಕ್ಷೆಗೂ ತಯಾರಿ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಕನ್ನಡ ಕಡ್ಡಾಯ ಪರೀಕ್ಷೆ ಸೆ.29ರಂದು ನಡೆಯಲಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ಅಕ್ಟೋಬರ್ 27ಕ್ಕೆ ನಡೆಯುವ ಪ್ರಮುಖ ಪರೀಕ್ಷೆಗೆ ಅರ್ಹತೆ ಪಡೆಯಲಿದ್ದಾರೆ.
1000 #VAO ಹುದ್ದೆಗಳಿಗೆ 5.7 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದು ಈ ಪರೀಕ್ಷೆಗೂ ತಯಾರಿ ನಡೆಸಲಾಗಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.— KEA (@KEA_karnataka) September 2, 2024
ಐದು ಗ್ಯಾರಂಟಿಗಳ ಜೊತೆ ಶಿಕ್ಷಣ ಮತ್ತು ಆರೋಗ್ಯದ ಗ್ಯಾರಂಟಿ ಸರ್ಕಾರದ ಗುರಿ: ಡಿಸಿಎಂ ಡಿ.ಕೆ.ಶಿವಕುಮಾರ್
ಐದು ಗ್ಯಾರಂಟಿಗಳ ಜೊತೆ ಶಿಕ್ಷಣ ಮತ್ತು ಆರೋಗ್ಯದ ಗ್ಯಾರಂಟಿ ಸರ್ಕಾರದ ಗುರಿ: ಡಿಸಿಎಂ ಡಿ.ಕೆ.ಶಿವಕುಮಾರ್
KPSC ಕೆಎಎಸ್ ಮರು ಪರೀಕ್ಷೆ; ಉದ್ಯೋಗಾಕಾಂಕ್ಷಿಗಳು, ಪ್ರತಿಪಕ್ಷಗಳ ಹೋರಾಟಕ್ಕೆ ಸಿಕ್ಕ ಜಯ: ಆರ್ ಅಶೋಕ್