ಮಂಡ್ಯ: ಜಿಲ್ಲೆಯ ನಿಮಿಷಾಂಬ ಹಾಗೂ ಪಾಂಡವಪುರ ತಾಲ್ಲೂಕಿನ ಆರತಿ ಶ್ರೀ ಅಹಲ್ಯಾದೇವಿ ಉಕ್ಕಡ ಮಾರಮ್ಮನ ದೇಗುಲಕ್ಕೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿದರು.
ಇಂದು ರಾಮಲಿಂಗಾ ರೆಡ್ಡಿ, ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ಮಂಡ್ಯ ಜಿಲ್ಲೆಯ ನಿಮಿಷಾಂಬ ದೇವಸ್ಥಾನ ಹಾಗೂ ಪಾಂಡವಪುರ ತಾಲ್ಲೂಕಿನ ಆರತಿ ಶ್ರೀ ಅಹಲ್ಯಾದೇವಿ ಉಕ್ಕಡ ಮಾರಮ್ಮನ ದೇಗುಲಗಳಿಗೆ ಭೇಟಿ ನೀಡಿದರು.
ಮುಜರಾಯಿ ಸಚಿವರು ನಿಮಿಷಾಂಬ ದೇವಸ್ಥಾನಕ್ಕೆ ಭೇಟಿ, ಸದರಿ ದೇವಸ್ಥಾನಕ್ಕೆ ಹೆಚ್ಚ್ಇನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಿರುವುದರಿಂದ ಭಕ್ತಾಧಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮತ್ತಷ್ಟು ಅಭಿವೃದ್ಧಿ ಕೈಗೊಳ್ಳುವ ಸಂಬಂಧ Master Plan ತಯಾರಿಸಲು ಸೂಚಿಸಿದರು.
ಇದೇ ಸಂದರ್ಭದಲ್ಲಿ ಆರತಿ ಶ್ರೀ ಅಹಲ್ಯಾದೇವಿ ಉಕ್ಕಡ ಮಾರಮ್ಮನ ದೇಗುಲಕ್ಕೆ ಮಾನ್ಯ ಸಚಿವರು ಭೇಟಿ ನೀಡಿದರು. ಇಲ್ಲಿ ಮೂಲಭೂತ ಸೌಲಭ್ಯಗಳಾದ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯು ಇಲ್ಲದಿರುವುದನ್ನು ಕಂಡು ಕೂಡಲೇ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೇವಸ್ಥಾನಗಳು ಭಕ್ತಾಧಿಗಳ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಭಕ್ತಾಧಿಗಳು ನೆಮ್ಮದಿಯಿಂದ ದೇವರನ್ನು ಪೂಜಿಸಿ ತೆರಳುವಂತಿರಬೇಕು. ಈ ಬಗ್ಗೆ ಇಲಾಖೆಯು ಸೂಕ್ತಕ್ರಮವಹಿಸಲು ಆದೇಶಿಸಿದರು.
ಈ ಸಂದರ್ಭದಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡ , ಕೃಷ್ಣ , ಇ.ಒ, ಮುಜರಾಯಿ ಇಲಾಖೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.