ನವದೆಹಲಿ : ಎಎಪಿ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿತರಾಗಿದ್ದ ಅರವಿಂದ್ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್’ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಂದಹಾಗೆ, ದೆಹಲಿ ಪೊಲೀಸರು ಮೇ 18 ರಂದು ಕುಮಾರ್ ಅವರನ್ನು ಬಂಧಿಸಿದ್ದರು.
ಕೇಜ್ರಿವಾಲ್ ಅವರ ಆಪ್ತ ಸಹಾಯಕ ಕುಮಾರ್ ಅವರು ಮೇ 13 ರಂದು ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ಮಲಿವಾಲ್ ಅವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
“ಬಿಭವ್ ಕುಮಾರ್ ನನ್ನನ್ನು 7-8 ಬಾರಿ ಕಪಾಳಮೋಕ್ಷ ಮಾಡಿದ್ದಾನೆ. ನನ್ನ ಹೊಟ್ಟೆ ಮತ್ತು ಪೆಲ್ವಿಕ್ ಪ್ರದೇಶಕ್ಕೆ ಒದೆಯಲಾಯಿತು” ಎಂದು ದೆಹಲಿ ಮಹಿಳಾ ಆಯೋಗದ ಮಾಜಿ ಮುಖ್ಯಸ್ಥೆ ಸ್ವಾತಿ ಮಲಿವಾಲ್ ತಮ್ಮ ದೂರಿನಲ್ಲಿ ಆರೋಪಿಸಿದ್ದರು.
‘ಲಾ ನಿನಾ’ ಪರಿಣಾಮ, ದೇಶದಲ್ಲಿ ಈ ವರ್ಷ ತುಂಬಾ ‘ಚಳಿ’ ಇರುತ್ತೆ : ‘IMD’ ಎಚ್ಚರಿಕೆ
UPDATE : ಜಮ್ಮು-ಕಾಶ್ಮೀರದ ವೈಷ್ಣೋ ದೇವಿ ಆಲಯದ ಬಳಿ ಭೂಕುಸಿತ : ಮೂವರು ಸಾವು, ಒರ್ವ ಬಾಲಕಿಗೆ ಗಾಯ