ಬೆಂಗಳೂರು :ಕರ್ನಾಟಕ ಸರ್ಕಾರದ ಸೇವೆಗೆ ಸೇರ್ಪಡೆಯಾಗುವ ಎಲ್ಲಾ ಶ್ರೇಣಿಯ ಅಧಿಕಾರಿ/ನೌಕರರು ಕಡ್ಡಾಯವಾಗಿ ಹಾಗೂ ಭಾರತೀಯ ಆಡಳಿತ ಸೇವೆ, ಭಾರತೀಯ ಪೋಲೀಸ್ ಸೇವೆ ಮತ್ತು ಭಾರತೀಯ ಅರಣ್ಯ ಸೇವೆಯಲ್ಲಿನ ಕರ್ನಾಟಕ ವೃಂದಕ್ಕೆ ಸೇರಿದವರು ಐಚ್ಛಿಕವಾಗಿ ಕಡ್ಡಾಯ ಜೀವ ವಿಮಾ ಯೋಜನೆಗೆ ಒಳಪಡಲು ಅರ್ಹರಾಗಿರುತ್ತಾರೆ.
ಕಡ್ಡಾಯ ವಿಮೆ:- ಕಡ್ಡಾಯ ಜೀವ ವಿಮಾ ಯೋಜನೆಗೆ ಒಳಪಡುವ ವಿಧಾನವು ಈ ಕೆಳಕಂಡಂತಿದೆ.
ಈ ಬಗೆಗಿನ ಇತರ ಅಂಶಗಳು ಇಂತಿದೆ:
1) 18 ವರ್ಷ ವಯಸ್ಸಾಗಿರಬೇಕು.
2) 50 ವರ್ಷ ಮೀರಿರಬಾರದು.
3) ಪ್ರಥಮ ಮಾಸಿಕ ವೇತನ ಪಡೆಯುವ ಮುನ್ನ ವಿಮೆಗೆ ಒಳಪಡಬೇಕು.
4) ಧಾರಣ ಮಾಡಿದ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯ ಸರಾಸರಿ ವೇತನದ ಶೇ.6.25 ಭಾಗಕ್ಕಿಂತ ಕಡಿಮೆ ಇಲ್ಲದಂತೆ ಮಾಸಿಕ ದರದ ವಿಮಾ ಕಂತನ್ನು ಪಾವತಿಸಬೇಕು.
1. ಪ್ರಥಮ ವಿಮಾ ಕಂತನ್ನು, ಸರ್ಕಾರಿ ಪಾವತಿಗಳನ್ನು ಸ್ವೀಕರಿಸುವ ಸ್ಥಳೀಯ ಬ್ಯಾಂಕಿನಲ್ಲಿ ದೊರೆಯುವ ಮೂರು ಭಾಗಗಳ ಚಲನ್ ನಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿಮಾಡಿ ನಗದನ್ನು ಈ ಇಲಾಖೆಯ ಲೆಕ್ಕ ಶೀರ್ಷಿಕ 8011-00-105-1-01 ಗೆ ಪ್ರಾರಂಭಿಕ ಠೇವಣಿಯಾಗಿ ಪಾವತಿಸಿ, ಬ್ಯಾಂಕಿನ ಸ್ವೀಕೃತಿ ಮೊಹರಾದ ನಿಗದಿತ ಎರಡು ಭಾಗ ಚಲನ್ ಗಳನ್ನು ಹಿಂದಕ್ಕೆ ಪಡೆಯತಕ್ಕದ್ದು.
2. ಪ್ರಾರಂಭಿಕ ಠೇವಣಿ ಪಾವತಿಸಿದ ಚಲನ್ ತೋರಿಸಿ ಇಲಾಖೆಯ ಎಲ್ಲಾ ಕಛೇರಿಗಳಲ್ಲಿ ಉಚಿತವಾಗಿ ದೊರೆಯುವ ಪ್ರಸ್ತಾವನೆ ನಮೂನೆಯನ್ನು ಪಡೆದುಕೊಳ್ಳತಕ್ಕದ್ದು.
* ರೂ. 1000/- ರೊಳಗಿನ ಪ್ರಾರಂಭಿಕ ಠೇವಣಿಯನ್ನು ಪಾವತಿಸಿದ್ದು 40 ವರ್ಷ ಮೀರದ ವಯಸ್ಸಿನವರು ವೈದ್ಯತರ ಪ್ರಸ್ತಾವನೆಯನ್ನು (ನಾನ್ ಮೆಡಿಕಲ್) ಸಲ್ಲಿಸತಕ್ಕದ್ದು.
* ರೂ. 1000/- ಮೀರಿದ ಪ್ರಾರಂಭಿಕ ಠೇವಣಿಯನ್ನು ಪಾವತಿಸಿದವರು ಯಾವುದೇ ವಯಸ್ಸಿನವರಾಗಿದ್ದರೂ ವೈದ್ಯಕೀಯ ಪ್ರಸ್ತಾವನೆಯನ್ನು (ಮೆಡಿಕಲ್) ಸಲ್ಲಿಸತಕ್ಕದ್ದು.
* 40 ವರ್ಷ ವಯಸ್ಸು ಮೀರಿದವರು ಯಾವುದೇ ಮೊತ್ತದ ಪ್ರಾರಂಭಿಕ ಠೇವಣಿಯನ್ನು ಪಾವತಿಸಿದ್ದರೂ ವೈದ್ಯಕೀಯ ಪ್ರಸ್ತಾವನೆಯನ್ನು (ಮೆಡಿಕಲ್) ಸಲ್ಲಿಸತಕ್ಕದ್ದು.
* ಪ್ರಸ್ತಾವನೆದಾರರನ್ನು ಪರೀಕ್ಷಿಸುವ ಅರ್ಹ ವೈದ್ಯರಿಗೆ ಇಲಾಖೆಯಿಂದ ನಿಗದಿತ ವೈದ್ಯಕೀಯ ಶುಲ್ಕವನ್ನು ಪಾವತಿಸಲಾಗುತ್ತದೆ.
ಕಡ್ಡಾಯ ವಿಮಾ ಯೋಜನೆಯಲ್ಲಿರುವ ಸೌಲಭ್ಯಗಳು
1. ನಗದು ರೂಪದಲ್ಲಿ ವಿಮಾಕಂತಿನ ಸಂದಾಯ ಮಾಡುವಿಕೆ
2. ಸಾಲ ಸೌಲಭ್ಯ
1. ನಗದು ರೂಪದಲ್ಲಿ ವಿಮಾಕಂತಿನ ಸಂದಾಯ ಮಾಡುವಿಕೆ:-
ವಿಮಾದಾರರು ಯಾವುದೇ ಕಾರಣದಿಂದ ರಾಜ್ಯ ಸರ್ಕಾರದ ಸೇವೆಯಿಂದ ಬಿಡುಗಡೆಹೊಂದಿದ ಸಂದರ್ಭದಲ್ಲಿ ತಾವು ಹೊಂದಿದ್ದ ಪಾಲಿಸಿಯ ಅವಧಿ ಮುಗಿಯುವವರೆಗೆ ಮುಂದುವರಿಸಿಕೊಂಡು ಹೋಗಲು ಹಾಗೂ ಮಾಸಿಕ ವಿಮಾಕಂತುಗಳನ್ನು ನಗದು ರೂಪದಲ್ಲಿ ಸಂದಾಯ ಮಾಡಲು ನಿಯಮ (17) ರನ್ವಯ ಅವಕಾಶವಿದೆ. ಇದಕ್ಕಾಗಿ ವಿಮಾದಾರನು ಸರ್ಕಾರದ ಸೇವೆಯಿಂದ ಬಿಡುಗಡೆಹೊಂದಿದ ಒಂದು ವರ್ಷದೊಳಗಾಗಿ ನಗದು ಪಾವತಿಗೆ ವಿವಿಧ ಹಕ್ಕು ಇತ್ಯರ್ಥ ಪ್ರಕರಣಗಳು
1. ಅವಧಿ ಪೂರೈಕೆ ಹಕ್ಕು ಪ್ರಕರಣ
2. ಮರಣಜನ್ಯ ಹಕ್ಕು ಪ್ರಕರಣ
3. ವಿಮಾತ್ಯಾಗಮೌಲ್ಯ ಹಕ್ಕು ಪ್ರಕರಣ
1. ಅವಧಿ ಪೂರೈಕೆ ಹಕ್ಕು ಪ್ರಕರಣ:- ಈ ಇಲಾಖೆಯಲ್ಲಿ ನಿಶ್ಚಿತ ಅವಧಿ (ಎನ್ ಡೋಮೆಂಟ್) ಪಾಲಿಸಿಗಳನ್ನು ಮಾತ್ರ ನೀಡುವುದರಿಂದ ವಿಮಾದಾರರ ವಯಸ್ಸು 55 ವರ್ಷಗಳು ತುಂಬಿದ ದಿನಾಂಕದಂದು ಆತ ಹೊಂದಿದ ಎಲ್ಲಾ ಪಾಲಿಸಿಗಳು ಫಲಪ್ರದಗೊಳ್ಳುತ್ತವೆ. ವಿಮಾದಾರರ ಬಗ್ಗೆ ನಿಗದಿತ ಎಲ್ಲಾ ವಿವರಗಳು ಲಭ್ಯವಾದಲ್ಲಿ ಸಾಮಾನ್ಯವಾಗಿ ಫಲಪ್ರದ ತಿಂಗಳಿನಲ್ಲಿಯೇ ಹಕ್ಕನ್ನು ಇತ್ಯರ್ಥಪಡಿಸಿ ಹುಂಡಿ ನೀಡಲಾಗುತ್ತದೆ.
2. ಮರಣಜನ್ಯ ಹಕ್ಕು ಪ್ರಕರಣ:- ಪಾಲಿಸಿಗಳು ಫಲಪ್ರದಗೊಳ್ಳುವ ಮುನ್ನವೇ ವಿಮಾದಾರರು ಮರಣಹೊಂದಿದಲ್ಲಿ ವಿಮಾ ಪಾಲಿಸಿಗಳ ಒಟ್ಟು ವಿಮಾ ಮೊತ್ತಕ್ಕೆ ಮರಣದ ಮಾಹೆಯವರೆಗಿನ ಲಾಭಾಂಶ ಸೇರಿಸಿ ಒಟ್ಟು ಮೊತ್ತವನ್ನು ನಾಮ ನಿರ್ದೇಶಿತ ವ್ಯಕ್ತಿಗೆ ಪಾವತಿಮಾಡಲಾಗುವುದು.
3. ವಿಮಾ ತ್ಯಾಗ ಮೌಲ್ಯ ಹಕ್ಕು ಪ್ರಕರಣ:-ವಿಮಾದಾರರು ಪಾಲಿಸಿಗಳ ಅವಧಿ ಪೂರ್ಣಗೊಳ್ಳುವ ಮೊದಲೇ (ಫಲಪ್ರದಗೊಳ್ಳುವ ಮೊದಲು) ಸರ್ಕಾರಿ ಸೇವೆಯಿಂದ ಬಿಡುಗಡೆ ಹೊಂದಿದಲ್ಲಿ, (ಅಂದರೆ ಸ್ವಯಂ ನಿವೃತ್ತಿ, ಕಡ್ಡಾಯ ನಿವೃತ್ತಿ, ವಜಾ, ರಾಜೀನಾಮೆ, ಇತರೆ) ಅಂತಹ ವಿಮಾದಾರರು ತಾವು ಹೊಂದಿರುವ ಪಾಲಿಸಿಗಳನ್ನು ಫಲಪ್ರದಗೊಳ್ಳುವವರೆಗೆ ವಿಮಾಕಂತನ್ನು ನಗದಿನಲ್ಲಿ ಪಾವತಿಸಿ ಮುಂದುವರಿಸಿಕೊಂಡು ಹೋಗಬಹುದು (ಇದಕ್ಕೆ ಸರ್ಕಾರಿ ಸೇವೆಯಿಂದ ಬಿಡುಗಡೆ ಹೊಂದಿದ 12 ತಿಂಗಳೊಳಗೆ ಇಲಾಖೆಯಿಂದ ಅನುಮತಿಯನ್ನು ಪಡೆಯುವುದು ಕಡ್ಡಾಯ. ಪಾಲಿಸಿ ಮುಂದುವರಿಸುವ ಇಚ್ಛೆಯಿಲ್ಲದಿದ್ದಲ್ಲಿ ಪಾಲಿಸಿಯ ಮೌಲ್ಯವನ್ನು ಬಿಟ್ಟುಕೊಟ್ಟು ನಗದನ್ನು ಪಡೆದುಕೊಳ್ಳಬಹುದು. ಇದಕ್ಕೆ ವಿಮಾ ತ್ಯಾಗ ಮೌಲ್ಯ ಹಕ್ಕೆಂದು ಕರೆಯುವರು.