ಕೆಎನ್ಎನ್ ಡಿಜಿಟಲ್ ಡೆಸ್ಕ್: ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವಂತ ಅನೇಕ ಸುದ್ದಿ, ವೀಡಿಯೋಗಳು ಕೆಲವು ಸಂದರ್ಭಗಳಲ್ಲಿ ಮನ ಮಿಡಿದ್ರೇ, ಮತ್ತೆ ಕೆಲವು ಸಂದರ್ಭದಲ್ಲಿ ನಿಮ್ಮನ್ನು ಕೆರಳುವಂತೆ ಮಾಡುತ್ತವೆ. ಆದರೇ ಅದಕ್ಕೂ ಹೊರತಾಗಿ ಮನಸ್ಸೇ ಮರುಗುವಂತ ವೀಡಿಯೋವೊಂದು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪ್ಪನ ದುಡ್ಡಲ್ಲಿ ಕುಂತು ತಿನ್ನೋರಿಗೆ ದುರಹಂಕಾರ ಇರುತ್ತೆ, ಆದರೇ.. ಅದು ಏನು ಅನ್ನುವ ಬಗ್ಗೆ ಮುಂದೆ ಓದಿ.
ಜೀವನ ನಿರ್ವಹಣೆಗಾಗಿ ಅನೇಕರು ಹಲವು ದಾರಿಗಳನ್ನು ಕಂಡುಕೊಂಡಿದ್ದಾರೆ. ಈಗಂತೂ ಸ್ವಿಗ್ಗಿ, ಜೊಮ್ಯಾಟೋ ಬಂದ ನಂತ್ರ ಬೈಕ್, ಅದನ್ನು ಓಡಿಸೋದಕ್ಕೆ ಡಿಎಲ್ ಇದ್ರೆ ಸಾಕು, ವಾರಕ್ಕೆ ಸಾವಿರಾರು ಸಂಪಾದಿಸಿ, ತಮ್ಮ ಜೀವನ ತಾವೇ ನಿರ್ವಹಣೆ ಮಾಡುವಂತ ಕೆಲಸ ಮಾಡಬಹುದು. ಹೀಗೆಯೇ ಜೋಮ್ಯಾಟೋದಲ್ಲಿ ಡಿಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಂತ ವಿಕಲಚೇತನ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ವೀಡಿಯೋ ಈ ಕೆಳಗಿದೆ ನೀವು ನೋಡಿ..
ಅಪ್ಪನ ದುಡ್ಡಲ್ಲಿ ಕುಂತು ತಿನ್ನೋರಿಗಿ ದುರಹಂಕಾರ ಇರ್ತದ,
ಆದರೆ
ಈ👇 ತರಾ ಕಷ್ಟ ಪಟ್ಟು ಮ್ಯಾಲ ಬಂದವ್ರಿಗಿ ಜೀವನದ ಕಷ್ಟದ ಬಗ್ಗೆ ಅರಿವಿರುತ್ತೆ….❤ pic.twitter.com/DjkwVE1jXW— Muttu Karamudi (@KaramudiMuttu) September 1, 2024
ನೋಡಿದ್ರಲ್ಲ ವೀಡಿಯೋನ. ತನಗೆ ವಿಕಲಚೇತನನೊಬ್ಬ ತನ್ನ ಅಂಗವೈಕಲ್ಯತೆ ಮೀರಿ, ಬದುಕು, ಜೀವನ ನಿರ್ವಹಣೆಗಾಗಿ ತ್ರಿಚಕ್ರವಾಹನದಲ್ಲಿ ಡಿಲಿವರಿ ಬಾಯ್ ಆಗಿ ಕೆಲಸ ಮಾಡುವಂತ ವ್ಯಕ್ತಿಯೊಬ್ಬ ಆರ್ಡರ್ ಮಾಡಿದವರ ಮನೆ ಬಾಗಿಲಿಗೆ ಪುಡ್ ತಲಿಪಿಸಿದ್ರೇ, ಆ ಯುವತಿ ಎಷ್ಟು ದುರಹಂಕಾರದಿಂದ ನಡೆದುಕೊಂಡಳು ಎಂಬುದನ್ನು ನೋಡಿದ್ರಲ್ವ? ಅದಕ್ಕೆ ಅಪ್ಪನ ದುಡ್ಡಲ್ಲಿ ಕುಳಿತು ತಿನ್ನೋರಿಗೆ ದುರಹಂಕಾರ ಇರುತ್ತೆ ಅನ್ನೋದು ನಿಜನೇ ಅನ್ನೋದು ಈ ಘಟನೆಯಲ್ಲಿ ಸತ್ಯವಾಗುತ್ತೆ. ಹಾಗಂತ ಎಲ್ಲರೂ ಈ ರೀತಿಯೇ ಇರ್ತಾರೆ ಎಂದು ಭಾವಿಸುವುದು ತಪ್ಪು.
ಇನ್ನೂ ಅದೇ ಯುವತಿಯ ತಂದೆ ಕಷ್ಟಪಟ್ಟು ಮೇಲೆ ಬಂದೋರು. ಜೀವನದ ಕಷ್ಟ ಏನು ಅಂತ ಅರಿವು ಇರೋರು. ಅಂಗವೈಕಲ್ಯವನ್ನು ಮೆಟ್ಟಿ ನಿಂತು ಪುಡ್ ಡಿಲಿವರಿ ಕೆಲಸ ಮಾಡುತ್ತಿದ್ದಂತ ಆತನನ್ನು ಸತ್ಕರಿಸಿದ ಪರಿಯಂತೂ ಅವರಿಗೊಂದು ಹ್ಯಾಟ್ಸ್ ಆಪ್ ಹೇಳಲೇ ಬೇಕು ಅನ್ನಿಸುತ್ತೆ ಅಲ್ವ? ಈ ಘಟನೆಯ ವೀಡಿಯೋ ನೋಡಿದ ನಂತ್ರ ನಿಮ್ಮ ಮನಸ್ಸು ಮರುಗಿರಬೇಕು, ಕೊರಗಿರಬೇಕು ಅಲ್ವ? ಹೀಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ಕೆಲ ವೀಡಿಯೋಗಳು, ಮನಸ್ಸಿಗೆ ನಾಟೋದು ಗ್ಯಾರಂಟಿ ಎನ್ನುವುದಕ್ಕೆ ಇದೊಂದು ಸಾಕ್ಷಿಯಾಗಿದೆ. ಈ ವೀಡಿಯೋ ಘಟನೆ ಎಲ್ಲಿ ನಡೆದಿರೋದು ಎಂಬುದು ತಿಳಿದು ಬಂದಿಲ್ಲ.
ಮಹಿಳೆಯರಿಗೆ ‘ಉಚಿತ LPG ಸಿಲಿಂಡರ್’: ಅರ್ಜಿ ಸಲ್ಲಿಕೆ, ಅರ್ಹತಾ ಮಾನದಂಡ, ದಾಖಲೆಗಳೇನು? ಇಲ್ಲಿದೆ ಮಾಹಿತಿ