ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಟಗರು ಇದ್ದಂತೆ. ಅವರು ಯಾರಿಗೂ, ಯಾವತ್ತಿಗೂ ಭಯ ಬೀಳೋದಿಲ್ಲ ಎಂಬುದಾಗಿ ಸಿಎಂ ಪರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಬ್ಯಾಟ್ ಬೀಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪಾತ್ರ ಏನೂ ಇಲ್ಲ. ಸಿದ್ದರಾಮಯ್ಯ ಹುಲಿ ಇದ್ದಂತೆ ಎಂದರು.
ಬಿಜೆಪಿಯವರಿಗೆ ಹಿಂದುಳಿದ ನಾಯಕನಾಗಿರುವಂತ ಸಿಎಂ ಸಿದ್ಧರಾಮಯ್ಯ ಅವರನ್ನು ಸಹಿಸಲು ಆಗ್ತಿಲ್ಲ. ಈ ಕಾರಣಕ್ಕೆ ಮುಡಾ ಹಗರಣ ಹೊರತಂದಿದ್ದಾರೆ. ಸಿಎಂ ಸಿದ್ಧರಾಮಯ್ಯ ಟಗರು ಇದ್ದಂತೆ. ಯಾರಿಗೂ ಯಾವತ್ತಿಗೂ ಭಯ ಬೀಳೋದಿಲ್ಲ ಎಂಬುದಾಗಿ ತಿಳಿಸಿದರು.
ಅ. 1ರಂದು ಮೋದಿ ಅಂಡ್ ಕಂಪನಿಗೆ ಜಮ್ಮು-ಕಾಶ್ಮೀರದ ಯುವಕರು ನಿರ್ಗಮನ ದ್ವಾರ ತೋರಿಸಲಿದ್ದಾರೆ: ಖರ್ಗೆ