ಗಾಝಾ: ಮಧ್ಯ ಗಾಝಾದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಫೆಲೆಸ್ತೀನ್ ಇಸ್ಲಾಮಿಕ್ ಜಿಹಾದ್ (ಪಿಐಜೆ) ಸೆಂಟ್ರಲ್ ಕ್ಯಾಂಪ್ಸ್ ಬ್ರಿಗೇಡ್ ನ ಕಮಾಂಡರ್ ಮುಹಮ್ಮದ್ ಕಟ್ರೌಯ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಘೋಷಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಟ್ರೌಯ್ ಮಧ್ಯ ಗಾಜಾದಿಂದ ಇಸ್ರೇಲ್ ಕಡೆಗೆ ರಾಕೆಟ್ ದಾಳಿಗಳನ್ನು ಸಂಘ ವ್ರತಟಿಸಿದ್ದಾನೆ ಮತ್ತು ಇಸ್ರೇಲಿ ಪಡೆಗಳ ವಿರುದ್ಧ ವಿವಿಧ ದಾಳಿಗಳನ್ನು ಯೋಜಿಸಿದ್ದಾನೆ ಎಂದು ಐಡಿಎಫ್ ಹೇಳಿಕೊಂಡಿದೆ. ಅವರು ಪಿಐಜೆಯಲ್ಲಿ ಉಪ ಬ್ರಿಗೇಡ್ ಕಮಾಂಡರ್ ಮತ್ತು ಗುಪ್ತಚರ ಅಧಿಕಾರಿ ಸೇರಿದಂತೆ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇಸ್ರೇಲ್ ಹೇಳಿಕೆಯ ಬಗ್ಗೆ ಪಿಐಜೆ ಇನ್ನೂ ಪ್ರತಿಕ್ರಿಯಿಸಿಲ್ಲ.
ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ಅನಿರೀಕ್ಷಿತ ದಾಳಿ ನಡೆಸಿ ಸುಮಾರು 1,200 ಜನರನ್ನು ಕೊಂದ ನಂತರ ಇಸ್ರೇಲ್ 2023 ರ ಅಕ್ಟೋಬರ್ 7 ರಿಂದ ಗಾಜಾ ಪಟ್ಟಿಯಲ್ಲಿ ಹಮಾಸ್ ವಿರುದ್ಧ ದೊಡ್ಡ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿದೆ. ಇಸ್ರೇಲ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 40,691ಕ್ಕೆ ತಲುಪಿದೆ ಎಂದು ಗಾಝಾ ಮೂಲದ ಆರೋಗ್ಯ ಅಧಿಕಾರಿಗಳು ಶನಿವಾರ ವರದಿ ಮಾಡಿದ್ದಾರೆ.