ಬೆಂಗಳೂರು: ಬಿಎಂಟಿಸಿ ಬಸ್ ಪಾಸ್ ಅನ್ನು ಮೊಬೈಲ್ ನಲ್ಲೇ ಖರೀದಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಸೆ.15ರಿಂದ ಈ ವ್ಯವಸ್ಥೆ ಜಾರಿಗೊಳ್ಳಲಿದೆ. ಹೀಗಾಗಿ ಕೆಲ ಪ್ರಯಾಣಿಕರು ಆತಂಕಕ್ಕೂ ಒಳಗಾಗಿದ್ದರು. ಆದರೇ ಆತಂಕ ಬೇಡ. ಬಿಎಂಟಿಸಿ ಪ್ರಯಾಣಿಕರಿಗೆ ಡಿಜಿಟಲ್ ಜೊತೆಗೆ ಪೂರ್ವ ಮುದ್ರಿತ ಬಸ್ ಬಾಸ್ ಕೂಡ ಲಭ್ಯವಿದೆ ಎಂಬುದಾಗಿ ಬಿಎಂಟಿಸಿ ಸ್ಪಷ್ಟ ಪಡಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಈ ಹಿಂದೆ ತಿಳಿಸಿರುವಂತೆ, 2024 ರ ಸೆಪ್ಟೆಂಬರ್ 15 ರಿಂದ ನಮ್ಮ ಬಿ.ಎಂ.ಟಿ.ಸಿ ಮೊಬೈಲ್ ಅಪ್ಲಿಕೇಶನ್ ಮೂಲಕ ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಬಸ್ ಪಾಸ್ಗಳು ಡಿಜಿಟಲ್ ಮೋಡ್ನಲ್ಲಿ ಲಭ್ಯವಿರುತ್ತವೆ ಎಂದು ಘೋಷಿಸಲು ಹರ್ಷಿಸುತ್ತದೆ. ಈ ಉಪಕ್ರಮವು ನಮ್ಮ ನಿರಂತರ ಪ್ರಯತ್ನಗಳ ಭಾಗವಾಗಿದ್ದು, ಕಾಗದರಹಿತ ವಹಿವಾಟುಗಳನ್ನು ಉತ್ತೇಜಿಸಲು ಮತ್ತು ನಮ್ಮ ಮೌಲ್ಯಯುತ ಪ್ರಯಾಣಿಕರಿಗೆ ಅನುಕೂಲವನ್ನು ಹೆಚ್ಚಿಸಲು ಸಹಾಯವಾಗಿದೆ ಎಂದಿದೆ.
ಈ ಸಂಬಂಧ ಸಾರ್ವಜನಿಕ ಪ್ರಯಾಣಿಕರಿಂದ ಪೂರ್ವ ಮುದ್ರಿತ ಪಾಸುಗಳ ವಿತರಣೆಗಾಗಿ ಬೇಡಿಕೆ ಸ್ವೀಕರಿಸಿದ್ದು, ಅವರ ಬೇಡಿಕೆಗೆ ಸ್ಪಂದಿಸಿ ಹಾಗೂ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪೂರ್ವ ಮುದ್ರಿತ ಪಾಸುಗಳನ್ನು ಸಂಸ್ಥೆಯ ಪಾಸು ವಿತರಣಾ ಕೇಂದ್ರಗಳಲ್ಲಿ ವಿತರಣೆ ಮಾಡುವ ಕ್ರಮವನ್ನು ಮುಂದುವರೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ಪ್ರಯಾಣಿಕರು ತಮ್ಮ ಆದ್ಯತೆಯ ವಹಿವಾಟಿನ ವಿಧಾನವನ್ನು ಆಯ್ಕೆ ಮಾಡಬಹುದಾಗಿರುತ್ತದೆ ಎಂದು ತಿಳಿಸಿದೆ.
ಮುಂದುವರೆದು, ಸಾರ್ವಜನಿಕ ಪ್ರಯಾಣಿಕರು ಕಾಗದ ರಹಿತ ವಹಿವಾಟಿಗೆ ಉತ್ತೇಜನ ನೀಡಲು ಹೆಚ್ಚಿನ ಮಟ್ಟದಲ್ಲಿ ಡಿಜಿಟಲ್ ಪಾಸುಗಳನ್ನು ಖರೀದಿಸಲು ಸಂಸ್ಥೆಯು ವಿನಂತಿಸಿದೆ.
BREAKING : ಹೈಕೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಜಾಮೀನು ಅರ್ಜಿ ವಿಚಾರಣೆ ಮಧ್ಯಾಹ್ನ 2.30 ಕ್ಕೆ ಮುಂದೂಡಿಕೆ
ದಾವಣಗೆರೆಯಲ್ಲಿ ಜೈಲು ಶಿಕ್ಷೆಯ ಭಯದಿಂದ ‘ಕೋರ್ಟ್’ನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ