ಕಾರವಾರ: ಇಲ್ಲಿನ ಸೀಬರ್ಡ್ ನೌಕಾನೆಲೆಯ ಸಿಬ್ಬಂದಿಗಳಿಗೆ ಹನಿಟ್ರ್ಯಾಪ್ ಮಾಡಿರುವಂತ ಯುವತಿಯೊಬ್ಬಳು ಮಾಡಿರುವುದಾಗಿ ತಿಳಿದು ಬಂದಿದೆ. ಅಲ್ಲದೇ ಪಾಕಿಸ್ತಾನಕ್ಕೆ ನೌಕಾನೆಲೆಯ ಮಾಹಿತಿ ಸೋರಿಕೆಯ ಶಂಕೆ ವ್ಯಕ್ತವಾಗಿರುವ ಕಾರಣ, ಎನ್ಐಎಯಿಂದ ತನಿಖೆಯನ್ನು ನಡೆಸಲಾಗುತ್ತಿದೆ.
ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವಂತ ಮೂವರು ಸಿಬ್ಬಂದಿಗಳಿಗೆ ಫೇಸ್ ಬುಕ್ ಮೂಲಕ ತಾನು ಮರೈನ್ ಅಧಿಕಾರಿ ಎಂಬುದಾಗಿ ಯುವತಿಯೊಬ್ಬಳು ಪರಿಚಯ ಮಾಡಿಕೊಂಡು, ಹನಿಟ್ರ್ಯಾಪ್ ಮಾಡಿರುವುದಾಗಿ ತಿಳಿದು ಬಂದಿತ್ತು.
ಮುದಗಾದ ವೇತನ್ ತಾಂಡೇಲ್, ತೋಡೂರಿನ ಸುನೀಲ್ ಸೇರಿದಂತೆ ಮೂವರು ಯುವಕರಿಗೆ ಯುವತಿಯೊಬ್ಬಳು ಹನಿಟ್ರ್ಯಾಪ್ ಮಾಡಿ, ಕಾರವಾರದ ಸೀಬರ್ಡ್ ನೌಕಾನೆಲೆಯ ಗುಪ್ತ ಮಾಹಿತಿಯನ್ನು ಪಡೆದಿರುವುದಾಗಿ ಹೇಳಲಾಗುತ್ತಿತ್ತು.
ಈ ಮಾಹಿತಿಯ ಎನ್ಐಎಗೆ ತಿಳಿಯುತ್ತಿದ್ದಂತೇ ಅಲರ್ಟ್ ಆದಂತ ಅಧಿಕಾರಿಗಳು, ಇಂದು ನೌಕಾನೆಲೆಗೆ ಭೇಟಿ ನೀಡಿ, ಸಿಬ್ಬಂದಿಗಳನ್ನು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ರಾಜ್ಯ ಸರ್ಕಾರದಿಂದ ‘ಅಗ್ನಿಶಾಮಕ ಠಾಣೆ’ ಅಧಿಕಾರಿ, ಸಿಬ್ಬಂದಿಗಳಿಗೆ ಗುಡ್ ನ್ಯೂಸ್: ‘7ನೇ ರಾಜ್ಯ ಪರಿಷ್ಕೃತ ವೇತನ’ ಜಾರಿ
BREAKING: ಬೆಂಗಳೂರಲ್ಲಿ ‘ಗೌರಿ-ಗಣೇಶ ಹಬ್ಬ’ಕ್ಕೆ ‘ಪೊಲೀಸ್ ಇಲಾಖೆ’ಯಿಂದ ಮಾರ್ಗಸೂಚಿ ಪ್ರಕಟ: ಇವುಗಳ ಪಾಲನೆ ಕಡ್ಡಾಯ