ಬೆಂಗಳೂರು: ಬರ್ತ್‌ಡೇ ಕೇಕ್‌ನಲ್ಲಿ ಇತ್ತೀಚಿಗೆ ಸಿಂಥೆಟಿಕ್ ಕಲರ್ ಬಳಕೆ ಮಾಡುತ್ತಿರುವುದು ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಆಹಾರ ಇಲಾಖೆ ಲ್ಯಾಬ್‌ಗೆ ಹೆಚ್ಚಿನ ಮಾಹಿತಿಗಾಗಿ ಕೇಕ್ ಮಾದರಿಗಳನ್ನು ಕಳುಹಿಸಿಕೊಟ್ಟಿದ್ದು ವರದಿಗಾಗಿ ಕಾಯುತ್ತಿದೆ.
ಕೆಲವು ತಿಂಗಳ ಹಿಂದೆ ರಾಜ್ಯ ಸರ್ಕಾರ ಕಬಾಬ್, ಕಾಟನ್ ಕ್ಯಾಂಡಿ ಸೇರಿದಂತೆ ಇತರೆ ಆಹಾರಗಳಲ್ಲಿ ಬಳಕೆ ಮಾಡುವ ಕೃತಕ ಕಲರ್ ಅನ್ನು ಬಳಕೆ ಮಾಡುವುದನ್ನ ಬ್ಯಾನ್ ಮಾಡಲಾಗಿತ್ತು. ಈ ಬೇಕರಿಗಳಲ್ಲಿ ಕೇಕ್‌ಗಳ ಬಣ್ಣಗಳಿಗೆ ಸಿಂಥೇಟಿಕ್ ಬಣ್ಣಗಳನ್ನು ಬಳಕೆ ಮಾಡಲಾಗುತ್ತಿರುವುದು ಆತಂಕ ಮೂಡಿಸಿದೆ. ಈ ನಡುವೆ ಈ ಬಣ್ಣವನ್ನು ಬಟ್ಟೆಗಳ ಬಣ್ಣವನ್ನು ಹೆಚ್ಚಿಸುವುದಕ್ಕೆ ಬಳಕೆ ಮಾಡಲಾಗುತ್ತಿದೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾದರಿ ಕೇಕ್‌ಗಳನ್ನು ಲ್ಯಾಬ್‌ಗಳಿಗೆ ಕಳುಹಿಸಿಕೊಟ್ಟಿದ್ದು, ವರದಿ ಬಳಿಕ ಕೇಕ್‌ಗಳಿಗೆ ಬಳಕೆ ಮಾಡುವ ಬಣ್ಣದ ಬಗ್ಗೆ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ.