ಬೆಂಗಳೂರು: ನಮ್ಮ ಮೆಟ್ರೋ ರೈಲು ಹಳಿಯ ಮೇಲೆಯೇ ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ, ಕೆಲ ಕಾಲ ನೇರಳೆ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡು, ಆ ಬಳಿಕ ಮತ್ತೆ ಪುನರಾರಂಭಗೊಂಡಿರುವುದಾಗಿ ತಿಳಿದು ಬಂದಿದೆ.
ಈ ಕುರಿತಂತೆ ಬಿಎಂಆರ್ ಸಿಎಲ್ ಮಾಹಿತಿ ನೀಡಿದ್ದು, ಸುಮಾರು ಸಂಜೆ 04 .51 ಗಂಟೆಗೆ ಮೆಟ್ರೋ ರೈಲು ಸೆಟ್ #23 ನೇರಳೆ ಮಾರ್ಗದಲ್ಲಿ – ಕಬ್ಬನ್ ಪಾರ್ಕ್ ಅಪ್ ರಾಂಪ್‌ನಲ್ಲಿ ಮರದ ಕೊಂಬೆಯು ವಾಕ್‌ವೇ ನಡುವೆ ಬಿದ್ದು ಚಲಿಸುವ ರೈಲಿಗೆ ಅಡ್ಡಿಯಾಗಿದ್ದ ಕಾರಣ ಎಚ್ಚರಿಕೆಯಿಂದ ಚಲಿಸಲಾಯಿತು ಎಂದು ತಿಳಿಸಿದೆ.
ಮರದ ಕೊಂಬೆಯನ್ನು ತೆರವುಗೊಳಿಸಿ, 17:05 ಗಂಟೆಗೆ ರೈಲು ಸೇವೆ ಎಂದಿನಂತೆ ಪುನರಾರಂಭವಾಯಿತು ಎಂಬುದಾಗಿ ಬಿಎಂಆರ್ ಸಿಎಲ್ ಮಾಹಿತಿ ನೀಡಿದೆ.
ಗ್ರಾಹಕರಿಗೆ ಉಚಿತವಾಗಿ’100 ಜಿಬಿ ಕ್ಲೌಡ್ ಸಂಗ್ರಹ’ ನೀಡಲಿದೆ ‘ರಿಲಯನ್ಸ್ ಜಿಯೋ’
`TRAI’ ನಿಂದ ಹೊಸ ನಿಯಮ ಜಾರಿ : ಈ ತಪ್ಪು ಮಾಡಿದ್ರೆ ಬಂದ್ ಆಗಲಿದೆ ನಿಮ್ಮ `SIM ಕಾರ್ಡ್’ | TRAI New Rules