ಬೆಂಗಳೂರು: ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿರುವ ಸಫಲ್ ಸೆಮಿಕಂಡಕ್ಟರ್ ಆಧಾರಿತ 200ಕ್ಕೂ ಹೆಚ್ಚು ಆವಿಷ್ಕಾರಗಳಿಗೆ ಉತ್ತೇಜನ ನೀಡಿದೆ. ಇದೊಂದು ವಿಶಿಷ್ಟ ಮಾದರಿಯಾಗಿದ್ದು, ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳು ಈಗ ನಮ್ಮ ರಾಜ್ಯದ ಮಾದರಿಯನ್ನೇ ಅಳವಡಿಸಿಕೊಳ್ಳಲು ಮುಂದಾಗಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿರುವ ಸಫಲ್ ಸೆಮಿಕಂಡಕ್ಟರ್ ಆಧಾರಿತ 200ಕ್ಕೂ ಹೆಚ್ಚು ಆವಿಷ್ಕಾರಗಳಿಗೆ ಉತ್ತೇಜನ ನೀಡಿದೆ. ಇದೊಂದು ವಿಶಿಷ್ಟ ಮಾದರಿಯಾಗಿದ್ದು, ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳು ಈಗ ನಮ್ಮ ರಾಜ್ಯದ ಮಾದರಿಯನ್ನೇ ಅಳವಡಿಸಿಕೊಳ್ಳಲು ಮುಂದಾಗಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.#JobCreation#Jobs… pic.twitter.com/F2o9MsfQIr
— DIPR Karnataka (@KarnatakaVarthe) August 29, 2024
ಪ್ರಸ್ತುತ, ಭಾರತವು ಜಾಗತಿಕವಾಗಿ ಅರೆವಾಹಕಗಳ ಎರಡನೇ ಅತಿದೊಡ್ಡ ಗ್ರಾಹಕವಾಗಿದೆ. ಸೆಮಿಕಾನ್‌ನಲ್ಲಿ 2026 ರ ವೇಳೆಗೆ ನಮ್ಮ ಮಾರುಕಟ್ಟೆ ಗಾತ್ರವು 64 ಶತಕೋಟಿ ಡಾಲರ್ ಆಗುವ ನಿರೀಕ್ಷೆಯಿದೆ. ಅದರಲ್ಲೂ ನಮ್ಮ ಎಲೆಕ್ಟ್ರಾನಿಕ್ ಮಾರುಕಟ್ಟೆಯಾದ 5G, 6G, ಮತ್ತು IOT ನಂತಹ ತಂತ್ರಜ್ಞಾನಗಳು ಮತ್ತು ಅಂತರ್ಜಾಲದ ಒಳಹೊಕ್ಕುಗಳ ತ್ವರಿತ ಅಳವಡಿಕೆಯಿಂದಾಗಿ 2025 ರೊಳಗೆ ಬಳಕೆಯು 400 ಶತಕೋಟಿ ಡಾಲರ್ ಆಗಿರಲಿದೆ.
ಕರ್ನಾಟಕವು ಭವಿಷ್ಯದ ಬೆಳವಣಿಗೆಗೆ ಸಿದ್ಧವಾಗಿದ್ದು, ಅದರಲ್ಲೂ ಎರಡು ಪ್ರಮುಖ ವಿಷಯಗಳಾದ ಕೌಶಲ್ಯ ಮತ್ತು ನಾವೀನ್ಯತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇದು ಕೇವಲ ನಮ್ಮ ಬೇಡಿಕೆಯಲ್ಲ, ಅವಶ್ಯಕತೆಯಾಗಿದೆ. ಏಕೆಂದರೆ 70 ಪ್ರತಿಶತ ವಿನ್ಯಾಸ ಪ್ರತಿಭೆಗಳು ಕರ್ನಾಟಕದಲ್ಲಿದ್ದು, ನಾವಿನ್ಯತೆಯ ಅಭಿವೃದ್ಧಿಗೆ ನಮ್ಮ ರಾಜ್ಯ ಪ್ರಾಶಸ್ಯವಾಗಿದೆ. ನಾವಿನ್ಯತೆಯಲ್ಲಿ ಹೆಚ್ಚು ಬೆಳೆಯುತ್ತಾ ಪ್ರತಿಯೊಂದು ವಸ್ತುವು ಕನ್ನಡಿಗನಿಂದ ನಿರ್ಮಾಣವಾಗುವ ದಿನಗಳು ದೂರವಿಲ್ಲ. ಅಮೆರಿಕಾದಂತ ದೇಶಗಳ ಮಾರುಕಟ್ಟೆಯಲ್ಲಿ ಲಭ್ಯವಾಗುವ ಪ್ರತಿಯೊಂದು ಚಿಪ್‌ನಲ್ಲಿಯೂ ಕನ್ನಡಿಗನ ಕೋಡ್ ಬರೆದಿರುವುದನ್ನು ಅವರಿಂದ ಕೇಳಲು ಹೆಮ್ಮೆಪಡುತ್ತೇವೆ.
ನಾವು ಸರ್ಕಾರದ ಸಹಯೋಗದಲ್ಲಿ SFAL ಅನ್ನು ಪ್ರಾರಂಭಿಸಿದ್ದು, ಕರ್ನಾಟಕ ಮತ್ತು ಉದ್ಯಮದ ಪಾಲುದಾರಾಗಿದ್ದೇವೆ. 2023 ರಲ್ಲಿ, 1 ನೇ ಬ್ಯಾಚ್ ಹೊರಬಂದಿತ್ತು, ಆ ವೇಳೆ ಹೆಚ್ಚು ನುರಿತ ಇಂಜಿನಿಯರ್‌ಗಳು, ಮತ್ತು ಅವರಿಗೆ ನೀಡಿದ ತರಬೇತಿಯು ತುಂಬಾ ದುಬಾರಿಯಾಗಿತ್ತು. ಆದರೆ ಇದು ಅವರಿಗೆ ತಿಂಗಳಿಗೆ 1.5 ಲಕ್ಷಗಳಂತೆ ಕನಿಷ್ಠ ಪ್ಯಾಕೇಜ್ ಮಾಡಲಾಗಿದೆ. ತರಬೇತಿಯು ಒಂದು ಭಾಗವಾಗಿದ್ದು, ಇನ್ನೊಂದು ಭಾಗವು ಸರ್ಕಾರದೊಂದಿಗೆ ನಾವೀನ್ಯತೆಯನ್ನು ಉತ್ತೇಜಿಸುತ್ತದೆ. ನಾವು ಉತ್ತಮ ನೀತಿಗಳನ್ನು ರೂಪಿಸಿದರೆ, ಅದು ಕರ್ನಾಟಕ ರಾಜ್ಯ ಮತ್ತು ಭಾರತಕ್ಕೆ ಖಂಡಿತವಾಗಿಯೂ ಸಹಾಯವಾಗಲಿದೆ.
ಈ ಸೆಮಿಕಂಡಕ್ಟರ್ ಫೇಬಲ್ಸ್ ಆಕ್ಸಿಲರೇಟರ್ ಲ್ಯಾಬ್ (SFAL) ನನ್ನು ನನ್ನ ಕೊನೆಯ ಅವಧಿಯಲ್ಲಿ ಪ್ರಾರಂಭಿಸಲಾಯಿತು. ಸರ್ಕಾರದೊಂದಿಗೆ ಈ ಎಸ್‌ಎಫ್‌ಎಎಲ್ ಪ್ರಾರಂಭಿಸುವುದು ಸವಾಲಿನ ಕೆಲಸವಾಗಿತ್ತು. ಪ್ರಾರಂಭದಲ್ಲಿ ಇದನ್ನು ತಿರಸ್ಕರಿಸಲಾಗಿತ್ತಾದರೂ, ನಂತರ ನಮ್ಮ ಸಿಎಂ ಹಾಗೂ ಹಣಕಾಸು ಇಲಾಖೆಗೆ ತೆರಳಿ ಇದರ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟೆವು. ಸೆಮಿಕಂಡಕ್ಟರ್ ಫೇಬಲ್ಸ್ ಆಕ್ಸಿಲರೇಟರ್ ಲ್ಯಾಬ್‌ನ ಶ್ರೇಷ್ಠತೆಯ ಕೇಂದ್ರವಾಗಿ 5-6 ವರ್ಷಗಳ ಹಿಂದೆ ಬಿತ್ತಲ್ಪಟ್ಟ ಬೀಜಗಳು, ಇಂದು ಚಿಗುರೊಡೆಯುತ್ತಿದೆ.
ಸೆಮಿಕಂಡಕ್ಟರ್ ಉದ್ಯಮವನ್ನು ಅಭಿವೃದ್ಧಿಪಡಿಸಲು ಮತ್ತು ವ್ಯವಸ್ಥೆಯು ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ಪರಿಸರ ವ್ಯವಸ್ಥೆಯನ್ನು ವರ್ಧಿಸುತ್ತದೆ. ನಮ್ಮ ಪರಿಸರ ವ್ಯವಸ್ಥೆ ಚೆನ್ನಾಗಿದ್ದು ಎಲ್ಲರಿಗೂ ಪ್ರಯೋಜನವಾಗುತ್ತಿದೆ. ನಾನು ಹೇಳುತ್ತಿರುವುದು ಇಷ್ಟೇ ಏಕೆಂದರೆ ನಾವು ಉತ್ಕೃಷ್ಟತೆಯ ಕೇಂದ್ರದಲ್ಲಿ ಒಟ್ಟು 27 ಕೋಟಿಗಳನ್ನು ಖರ್ಚು ಮಾಡಿದ್ದೇವೆ. ಆದರೆ ಇದು 95ಕ್ಕೂ ಹೆಚ್ಚು ಕಂಪನಿಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರಿದೆ, ಸುಮಾರು 43 ಕಂಪನಿಗಳಿಗೆ ಬೆಂಬಲ ಕೊಟ್ಟಿದ್ದೇವೆ. ಇದು ಅತ್ಯಂತ ಸ್ಥಾಪಿತ ಪ್ರದೇಶವಾಗಿದ್ದು, ಬಹುಶಃ 8-7 ದೇಶಗಳು ಮಾತ್ರ ಇದನ್ನು ಬಳಸುತ್ತಿವೆ. ನಮ್ಮ ಉಪಕ್ರಮವು ಹೊಸತನವನ್ನು ಹೊಂದಿದೆ. 200 ಕ್ಕೂ ಹೆಚ್ಚು ಆವಿಷ್ಕಾರಗಳು ಇದರಿಂದ ನೆರವಾದವು. SAFL ಇನ್ಕ್ಯುಬೇಟೆಡ್ ಸ್ಟಾರ್ಟ್ಅಪ್ ಸುಮಾರು 114 ಕೋಟಿಗಳನ್ನು ಸಂಗ್ರಹಿಸಿದ್ದು, 500 ಕೋಟಿಗಳ ಸಂಯೋಜಿತ ಮೌಲ್ಯಮಾಪನವನ್ನು ಹೊಂದಿದೆ.
ಇದೊಂದು ಅತ್ಯಂತ ವಿಶಿಷ್ಟ ಮಾದರಿಯಾಗಿದ್ದು, ಯಾವ ರಾಜ್ಯವೂ ಇದನ್ನು ಮಾಡುತ್ತಿಲ್ಲ. SFAL ಮಾದರಿಯನ್ನು ಪುನರಾವರ್ತಿಸಲು ಪ್ರಯತ್ನಿಸುತ್ತಿದೆ. ಗುಜರಾತ್ ಮತ್ತು ತಮಿಳುನಾಡು ಸರ್ಕಾರಗಳು ತಮ್ಮ ರಾಜ್ಯದಲ್ಲಿ SAFL ಮಾದರಿಯನ್ನು ಪುನರಾವರ್ತಿಸಲು ಕರ್ನಾಟಕ ಸರ್ಕಾರವನ್ನು ಸಮಾಲೋಚಿಸುತ್ತಿವೆ. ನಾವು SAFL 2.0 ಅನ್ನು ಅನುಮೋದಿಸಿದ್ದೇವೆ. ಮುಂದಿನ 5 ವರ್ಷಗಳವರೆಗೆ ಈ ಕಾರ್ಯವನ್ನು ಮುಂದುವರಿಸುತ್ತೇವೆ.
‘ತಿರುಪತಿ ಲಡ್ಡು ಪ್ರಸಾದ’ಕ್ಕೆ ‘ನಂದಿನಿ ತುಪ್ಪ’ ಪೂರೈಕೆ: ಟ್ಯಾಂಕರ್ ಮೂಲಕ ಸಾಗಾಣೆಗೆ ‘ಸಿಎಂ ಸಿದ್ಧರಾಮಯ್ಯ’ ಚಾಲನೆ
`TRAI’ ನಿಂದ ಹೊಸ ನಿಯಮ ಜಾರಿ : ಈ ತಪ್ಪು ಮಾಡಿದ್ರೆ ಬಂದ್ ಆಗಲಿದೆ ನಿಮ್ಮ `SIM ಕಾರ್ಡ್’ | TRAI New Rules