ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಪಾಲಾಗಿರುವಂತ ಪವಿತ್ರಾಗೌಡಗೆ, ಮತ್ತೆ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್.9ರವರೆಗೆ ಕೋರ್ಟ್ ವಿಸ್ತರಿಸಿ ಆದೇಶಿಸಿದೆ. ಹೀಗಾಗಿ ಆರೋಪಿ ಪವಿತ್ರಾಗೌಡಗೆ ಜೈಲೇ ಗತಿ ಎನ್ನುವಂತೆ ಆಗಿದೆ.
ಇಂದು ಪ್ರಕರಣ ಸಂಬಂಧ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾಗೌಡ ಅವರ ನ್ಯಾಯಾಂಗ ಬಂಧನ ಕುರಿತಂತ ಅರ್ಜಿಯನ್ನು ವಿಚಾರಣೆ ನಡೆಸಿತು. ಜಾಮೀನು ಅರ್ಜಿಯ ವಿಚಾರಣೆಯ ನಡುವೆಯೂ ಕೋರ್ಟ್ ಸೆಪ್ಟೆಂಬರ್.9ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶಿಸಿದೆ.
ಅಂದಹಾಗೇ ನಿನ್ನೆ ಕೋರ್ಟ್ ನಲ್ಲಿ ಆರೋಪಿ ಸ್ಥಾನದಲ್ಲಿರುವಂತ ಮಹಿಳೆ ಹಾಗೂ ಆನಾರೋಗ್ಯದ ಕಾರಣದಿಂದಾಗಿ ಸಿಆರ್ ಪಿಸಿ ಸೆಕ್ಷನ್ ನಡಿ 437ನಂತೆ ಆರೋಪಿ ಪವಿತ್ರಾಗೌಡಗೆ ಜಾಮೀನು ನೀಡುವಂತೆ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದಿಸಿದ್ದರು. ಈ ಕುರಿತಾದಂತ ವಿಚಾರಣೆ ಇಂದಿಗೆ ಮುಂದೂಡಲಾಗಿತ್ತು. ಆ ವಿಚಾರಣೆ ಬಾಕಿ ಬೆನ್ನಲ್ಲೇ, ಕೋರ್ಟ್ ಸೆಪ್ಟೆಂಬರ್.9ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶಿಸಿದೆ.
ಬೆಂಗಳೂರು ಜನತೆ ಗಮನಕ್ಕೆ: ಆ.29ರ ನಾಳೆ ನಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut