ಬೆಂಗಳೂರು: ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಗುಡ್ ನ್ಯೂಸ್ ಎನ್ನುವಂತೆ ಬೆಂಗಳೂರು ಟು ಕಲಬುರ್ಗಿ ನಡುವೆ ವಿಶೇಷ ರೈಲು ಸಂಚಾರದ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಕುರಿತು ನೈರುತ್ಯ ರೈಲ್ವೆ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ಪ್ರಯಾಣಿಕರ ಹೆಚ್ಚಿನ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ರೈಲು ಸಂಖ್ಯೆ 06589/06590 ಎಸ್.ಎಂ.ವಿ.ಟಿ ಬೆಂಗಳೂರು- ಕಲಬುರಗಿ- ಎಸ್.ಎಂ.ವಿ.ಟಿ ಬೆಂಗಳೂರು ಎಕ್ಸ್ಪ್ರೆಸ್ ವಿಶೇಷ ರೈಲನ್ನು ಪ್ರತಿ ದಿಕ್ಕಿನಲ್ಲಿ 03 ಟ್ರಿಪ್ ಓಡಿಸಲಿದೆ ಎಂದಿದೆ.
ರೈಲು ಸಂಖ್ಯೆ 06589 ಎಸ್.ಎಂ.ವಿ.ಟಿ ಬೆಂಗಳೂರು-ಕಲಬುರಗಿ ಎಕ್ಸ್ಪ್ರೆಸ್ ವಿಶೇಷ ರೈಲು ಎಸ್.ಎಂ.ವಿ.ಟಿ ಬೆಂಗಳೂರಿನಿಂದ 05.09.2024, 06.09.2024 ಮತ್ತು 07.09.2024 ರಂದು ರಾತ್ರಿ 9.15 ಕ್ಕೆ ಹೊರಟು ಮರುದಿನ ಬೆಳಿಗ್ಗೆ 07.40 ಕ್ಕೆ ಕಲಬುರಗಿ ತಲುಪಲಿದೆ.
ರೈಲು ಸಂಖ್ಯೆ 06590 ಕಲಬುರಗಿ – ಎಸ್.ಎಂ.ವಿ.ಟಿ ಬೆಂಗಳೂರು ಎಕ್ಸ್ಪ್ರೆಸ್ ವಿಶೇಷ ರೈಲು ಕಲಬುರಗಿಯಿಂದ 06.09.2024, 07.09.2024 ಮತ್ತು 08.09.2024 ರಂದು ಬೆಳಿಗ್ಗೆ 09.35 ಕ್ಕೆ ಹೊರಟು ಅದೇ ದಿನ ರಾತ್ರಿ 08.00 ಗಂಟೆಗೆ ಎಸ್.ಎಂ.ವಿ.ಟಿ ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.
ಈ ವಿಶೇಷ ರೈಲುಗಳು ಯಲಹಂಕ, ಧರ್ಮವರಂ ಜಂ., ಅನಂತಪುರಂ, ಗುಂತಕಲ್ ಜಂ., ಆದೋನಿ, ಮಂತ್ರಾಲಯಂ ರೋಡ್, ರಾಯಚೂರು ಜಂ., ಯಾದಗಿರಿ ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿವೆ.
ಈ ವಿಶೇಷ ರೈಲುಗಳು 02 ಎಸಿ 3-ಟೈರ್ ಕೋಚ್ಗಳು, 10 ಸ್ಲೀಪರ್ ಕ್ಲಾಸ್ ಕೋಚ್ಗಳು, 04 ಸೆಕೆಂಡ್ ಕ್ಲಾಸ್ ಕೋಚ್ಗಳು ಮತ್ತು 02 ಲಗೇಜ್ ಕಮ್ ಬ್ರೇಕ್ ವ್ಯಾನ್ (ದಿವ್ಯಾಂಗ ಸ್ನೇಹಿ ಕಂಪಾರ್ಟ್ಮೆಂಟ್ನೊಂದಿಗೆ) ಕೋಚ್ಗಳನ್ನು ಒಳಗೊಂಡಿರುತ್ತವೆ ಎಂದು ತಿಳಿಸಿದೆ.