ನವದೆಹಲಿ : ವಿಲೀನವನ್ನ ಕೊನೆಗೊಳಿಸುವ ಬಗ್ಗೆ ಸೋನಿಯೊಂದಿಗಿನ ಎಲ್ಲಾ ವಿವಾದಗಳನ್ನ ಪರಿಹರಿಸಲು ಒಪ್ಪಂದ ಮಾಡಿಕೊಂಡಿರುವುದಾಗಿ ಮಾಧ್ಯಮ ಸಂಸ್ಥೆ ಹೇಳಿದೆ. ಇದಾದ ನಂತರ ಜೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ ಷೇರು ಬೆಲೆ ಇಂದು (ಆಗಸ್ಟ್ 27) ಶೇಕಡಾ 15 ರಷ್ಟು ಏರಿಕೆಯಾಗಿದೆ. ಮಧ್ಯಾಹ್ನದ ವಹಿವಾಟಿನಲ್ಲಿ, ಜೀ ಷೇರು 154.9 ರೂ.ಗೆ ಜಿಗಿದು, ನಂತರ 147.7 ರೂ.ಗೆ ತಣ್ಣಗಾಯಿತು, ಇದು ಹಿಂದಿನ ಮುಕ್ತಾಯಕ್ಕಿಂತ ಸುಮಾರು 10 ಪ್ರತಿಶತದಷ್ಟು ಹೆಚ್ಚಾಗಿದೆ.
ಜೀ ಎಂಟರ್ಟೈನ್ಮೆಂಟ್ ಹೇಳಿಕೆಯಲ್ಲಿ “ಇತ್ಯರ್ಥದ ಭಾಗವಾಗಿ, ಕಂಪನಿಗಳು (Zee and Sony Pictures Networks India) ಸಿಂಗಾಪುರ್ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಸೆಂಟರ್ನಲ್ಲಿ ನಡೆಯುತ್ತಿರುವ ಮಧ್ಯಸ್ಥಿಕೆಯಲ್ಲಿ ಮತ್ತು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಮತ್ತು ಇತರ ವೇದಿಕೆಗಳಲ್ಲಿ ಪ್ರಾರಂಭಿಸಲಾದ ಎಲ್ಲಾ ಸಂಬಂಧಿತ ಕಾನೂನು ಪ್ರಕ್ರಿಯೆಗಳಲ್ಲಿ ಪರಸ್ಪರರ ವಿರುದ್ಧದ ಎಲ್ಲಾ ಹಕ್ಕುಗಳನ್ನ ಹಿಂತೆಗೆದುಕೊಳ್ಳಲು ಪರಸ್ಪರ ಒಪ್ಪಿಕೊಂಡಿವೆ” ಎಂದು ತಿಳಿಸಿದೆ.
ಈ ವರ್ಷದ ಜನವರಿಯಲ್ಲಿ, ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ (SPNI) ಜೀ ಎಂಟರ್ಟೈನ್ಮೆಂಟ್ನೊಂದಿಗೆ ಉದ್ದೇಶಿತ 10 ಬಿಲಿಯನ್ ಡಾಲರ್ ವಿಲೀನ ಒಪ್ಪಂದವನ್ನ ಕೊನೆಗೊಳಿಸಿತು. ವಿಲೀನ ಒಪ್ಪಂದದ ನಿಯಮಗಳನ್ನು ಜೀ ಎಂಟರ್ಟೈನ್ಮೆಂಟ್ ಉಲ್ಲಂಘಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸೋನಿ 90 ಮಿಲಿಯನ್ ಡಾಲರ್ ಮುಕ್ತಾಯ ಶುಲ್ಕವನ್ನ ಕೋರಿದೆ.
10 ಬಿಲಿಯನ್ ಡಾಲರ್ ವಿಲೀನಕ್ಕೆ ತಡೆ ನೀಡಿದ್ದಕ್ಕಾಗಿ ಜೀ ಕೂಡ ಮೇ 23 ರಂದು ಎಸ್ಪಿಎನ್ಐ ಮತ್ತು ಅದರ ಘಟಕ ಬಾಂಗ್ಲಾ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ (BEPL) ನಿಂದ 90 ಮಿಲಿಯನ್ ಡಾಲರ್ (750 ಕೋಟಿ ರೂ.) ಮುಕ್ತಾಯ ಶುಲ್ಕವನ್ನು ಕೋರಿತ್ತು.
BREAKING : ಅಬಕಾರಿ ನೀತಿ ಪ್ರಕರಣ : ಸೆ.3ರವರೆಗೆ ‘ಅರವಿಂದ್ ಕೇಜ್ರಿವಾಲ್’ ನ್ಯಾಯಾಂಗ ಬಂಧನ ವಿಸ್ತರಣೆ
BHELಗೆ ಮತ್ತಷ್ಟು ಶಕ್ತಿ ತುಂಬಲು ಕೇಂದ್ರ ಸರ್ಕಾರದಿಂದ ಕ್ರಮ: HD ಕುಮಾರಸ್ವಾಮಿ
BREAKING : 2024ರ ‘ಮಹಿಳಾ ಟಿ20 ವಿಶ್ವಕಪ್ ಟೂರ್ನಿ’ಗೆ ಬಲಿಷ್ಠ ‘ಭಾರತ ತಂಡ’ ಪ್ರಕಟ |T20 World Cup 2024