ಬೆಂಗಳೂರು: ದಕ್ಷಿಣ ಭಾರತದ ಮೊದಲ ಹವಾನಿಯಂತ್ರಿತ ಪಾಲಿಕೆ ಬಜಾರ್ ಬೆಂಗಳೂರಿನಲ್ಲಿ ನಿರ್ಮಾಣಗೊಂಡಿದೆ. ವಿಜಯನಗರ ಬಸ್ ಹಾಗೂ ಮೆಟ್ರೋ ನಿಲ್ದಾಣಗಳ ಬಳಿ ಸ್ಥಾಪಿಸಲಾಗಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿಜಯನಗರ ಬಸ್/ಮೇಟ್ರೊ ನಿಲ್ದಾಣದ ಬಳಿ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳ ನಗರೋತ್ಥಾನ ಯೋಜನೆಯಲ್ಲಿ ಹವಾನಿಯಂತ್ರಿತ ಮಾರುಕಟ್ಟೆಯನ್ನು ನಿರ್ಮಿಸಲಾಗಿರುತ್ತದೆ. ಹವಾನಿಯಂತ್ರಿತ ಮಾರುಕಟ್ಟೆಯಾದ “ಪಾಲಿಕೆ ಬಜಾರ್” ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಹವಾನಿಯಂತ್ರಿತ ಮಾರುಕಟ್ಟೆ ಎಂಬ ಹೆಗ್ಗಳಿಕೆಯನ್ನು ಹೊಂದಿರುತ್ತದೆ.
ಪಾಲಿಕೆ ಬಜಾರ್ ಮಾರುಕಟ್ಟೆಯ ವಿವರಗಳು:
ಉದ್ದೇಶಿತ ಯೋಜನೆಯ ಮಾದರಿ:- ದಕ್ಷಿಣ ಭಾರತದಲ್ಲಿ ಪ್ರಪ್ರಥಮವಾಗಿ ಹವಾನಿಯಂತ್ರಿತ ಮಾರುಕಟ್ಟೆ.
ಯೋಜನೆಯ ಒಟ್ಟು ಅಂದಾಜು ಮೊತ್ತ 13 ಕೋಟಿ ರೂ.
ಅನುದಾನದ ವಿವರ:
2017-18ನೇ ಸಾಲಿನಲ್ಲಿ 5 ಕೋಟಿ ರೂ.
2021-22ನೇ ಸಾಲಿನಲ್ಲಿ 8 ಕೋಟಿ ರೂ.
ಕಾಮಗಾರಿಯ ಸ್ಥಳ:- ವಿಜಯನಗರ ಬಸ್/ಮೇಟ್ರೊ ನಿಲ್ದಾಣದ ಬಳಿ.
ಪಾಲಿಕೆ ಬಜಾರ್ನ ಒಟ್ಟು ವಿಸ್ತೀರ್ಣ:- 1165 ಚ.ಮೀ.
ಬಜಾರ್ನ ಉದ್ದ: 136 ಮೀ.
ಬಜಾರ್ನ ಅಗಲ: ಅಂದಾಜು 11 ಮೀ.
ಪ್ರತಿ ಮಳಿಗೆಯ ವಿಸ್ತೀರ್ಣ: ಸರಾಸರಿ 9.0 ಚ.ಮೀ
ಗುತ್ತಿಗೆದಾರರ ಹೆಸರು:- ಮೇ|| ಪರಿಚಿತ ಕನ್ಸ್ಟ್ರಕ್ಷನ್, ಬೆಂಗಳೂರು.
ಪಾಲಿಕೆ ಬಜಾರ್ನ ವೈಶಿಷ್ಯತೆಗಳು:
ಮಳಿಗೆಗಳ ಸಂಖ್ಯೆ:- 79
ಎ.ಸಿ ಯೂನಿಟ್ಗಳ ಸಂಖ್ಯೆ:
ಹೊರಾಂಗಣದಲ್ಲಿರುವ ಸಂಖ್ಯೆ – 05
ಒಳಾಂಗಣದಲ್ಲಿರುವ ಸಂಖ್ಯೆ – 26
ಲಿಫ್ಟ್ ಗಳ ಸಂಖ್ಯೆ:- 01 (0.75 ಟನ್ ಸಾಮರ್ಥ್ಯವುಳ್ಳ ಲಿಫ್ಟ್ ಅಳವಡಿಕೆ)
ಎಸ್ಕಲೇಟರ್ಗಳ ಸಂಖ್ಯೆ:- 02
ವಿದ್ಯುತ್ ಟ್ರಾನ್ಸಾಪಾರ್ಮರ್:- 250 ಕೆ.ವಿ ಸಾಮರ್ಥ್ಯದ 2 ಟ್ರಾನ್ಸಾ÷್ಫರ್ಮರ್ ಅಳವಡಿಕೆ.
ಪ್ರವೇಶ ದ್ವಾರಗಳ ಸಂಖ್ಯೆ:- 08
ವಿದ್ಯುತ್ ದೀಪಗಳ ಸಂಖ್ಯೆ:- 145
ಪ್ರತಿ ಮಳಿಗೆಗಳಿಗೆ ಅಗ್ನಿಶಾಮಕ ಉಪಕರಣಗಳ(Fire Extinguishers) ಅಳವಡಿಕೆ.
ಯೋಜನೆಯಿಂದ ಪ್ರಯೋಜನ ಪಡೆಯುವ ಪ್ರದೇಶಗಳು:-
ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಡಾವಣೆಗಳು.
BIG NEWS: ರಾಜ್ಯ ಸರ್ಕಾರದಿಂದ ‘ಆಸ್ತಿ ನೋಂದಣಿ’ಯಲ್ಲಿ ‘ಆಧಾರ್ ಧೃಡೀಕರಣ’ಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಪ್ರಕಟ