ಬೆಂಗಳೂರು: ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲಿನಲ್ಲಿ ರಾಜಾತಿಥ್ಯ ನೀಡಿದಂತ ಪೋಟೋಗಳು ವೈರಲ್ ಆಗುತ್ತಿದ್ದ ಬೆನ್ನಲ್ಲೇ, ಈಗ ಆಗಸ್ಟ್.12ರಂದೇ ಜೈಲು ಅಧಿಕಾರಿಗಳಿಗೆ ಕಾರಾಗೃಹ ಡಿಜಿಪಿ ಬರೆದಿದ್ದಂತ ಪತ್ರ ಕೂಡ ವೈರಲ್ ಆಗಿದೆ. ಹಾಗಾದ್ರೇ ಪರಪ್ಪನ ಅಗ್ರಹಾರ ಜೈಲಲ್ಲಿ ನಡೆಯುತ್ತಿರುವಂತ ಕರ್ಮಕಾಂಡ ಮೊದಲೈ ಗೊತ್ತಿತ್ತ ಎಂಬ ಅನುಮಾನಕ್ಕೂ ಕಾರಣವಾಗಿದೆ.
ಒಂದು ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್, ಜೊತೆಗೆ ರೌಡಿ ಶೀಟರ್ ಗಳು. ಹೀಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯವನ್ನು ಸ್ವೀಕರಿಸುತ್ತ ಕುಳಿತಿರುವಂತ ನಟ ದರ್ಶನ್ ಪೋಟೋ ವೈರಲ್ ಆಗಿದೆ. ಜೊತೆಗೆ ರೌಡಿ ಶೀಟರ್ ಸತ್ಯ ಎಂಬಾತನ ಜೊತೆಗೆ ವೀಡಿಯೋ ಕಾಲ್ ಮಾಡಿದ್ದರ ವೀಡಿಯೋ ಕೂಡ ವೈರಲ್ ಆಗಿತ್ತು. ಓ ಜೈಲಲ್ಲಿಯೂ ಎಲ್ಲಾ ಸೌಲಭ್ಯಗಳು ಸಿಗುತ್ತವೆ. ದುಡ್ಡು ಕೊಟ್ರೆ ರಾಜಾತಿಥ್ಯ ಸಿಗುತ್ತದೆ ಎಂಬುದಾಗಿ ಸಾರ್ವಜನಿಕರು ಮಾತನಾಡಿಕೊಳ್ಳುವಂತಾಗಿದೆ.
ಆಗಸ್ಟ್.22ರಂದು ನಡೆದಿದ್ದಂತ ಘಟನೆ, ಈಗ ವೈರಲ್ ಆಗಿದೆ ಎಂಬುದಾಗಿ ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಸ್ಪಷ್ಟ ಪಡಿಸಿದ್ದರು. ಆ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಆಗಸ್ಟ್.12ರಂದೇ ಜೈಲಿನಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಿ. ಇಲ್ಲವಾದರೇ ಮುಂದಾಗುವ ಸಮಸ್ಯೆಗೆ ನಿಮ್ಮನ್ನೇ ಹೊಣೆ ಮಾಡುವುದಾಗಿ ಎಚ್ಚರಿಸಿದ್ದಂತ ಪತ್ರ ವೈರಲ್ ಆಗಿದೆ.
ಹಾಗಾದ್ರೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದಂತ ಕರ್ಮಕಾಂಡ, ರಾಜಾತಿಥ್ಯದ ವಿಷಯಗಳು ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣ ಮೂರ್ತಿಗೆ ಮೊದಲೇ ಗೊತ್ತಿತ್ತ ಎನ್ನುವಂತ ಅನುಮಾನವನ್ನು ಹುಟ್ಟು ಹಾಕಿದ್ದಾವೆ. ಇಲ್ಲವಾದಲ್ಲಿ ಆಗಸ್ಟ್.12ರಂದೇ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಪತ್ರವೇಕೆ ಬರೆಯಬೇಕಾಗಿತ್ತು ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿವೆ. ಈ ಬಗ್ಗೆ ಖಚಿತ ಮಾಹಿತಿ ಹೊರ ಬೀಳಬೇಕಿದೆ.
ಬೆಂಗಳೂರು ಜನತೆ ಗಮನಕ್ಕೆ: ಆ.28ರಂದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ಗೆರಿಲ್ಲಾ ಹೋರಾಟಗಾರ ಸಂಗೊಳ್ಳಿರಾಯಣ್ಣ ಬ್ರಿಟೀಷರಿಗೆ ಸಿಂಹಸ್ವಪ್ನ ಆಗಿದ್ದ: ಸಿಎಂ ಸಿದ್ದರಾಮಯ್ಯ