ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಗೆ ರಾಜಾತಿಥ್ಯ ನೀಡಿರುವ ಕುರಿತಂತೆ ಇದೀಗ ಪರಪ್ಪನ ಅಗ್ರಹಾರದಲ್ಲಿ ಮತ್ತೆ ಮೂರು ದೂರುಗಳು ದಾಖಲಾಗಿವೆ.
ಪರಪ್ಪನ ಅಗ್ರಹಾರದಲ್ಲಿ ಮೂರು ಪ್ರತ್ಯೇಕ ಎಫ್ ಐ ಆರ್ ಗಳು ದಾಖಲು ಮಾಡಿಕೊಂಡಿದೆ. ನಟ ದರ್ಶನ್, ವಿಲ್ಸನ್ ಗಾರ್ಡನ್ ನಾಗ, ಕುಳ್ಳು ಸೀನ ಹಾಗೂ ನಾಗರಾಜ್ ಮೇಲೆ ಜೈಲು ಸೂಪರಿಂಟೆಂಡೆಂಟ್ ಕೊಟ್ಟ ದೂರಿನ ಮೇರೆಗೆ ಎಫ್ ಐ ಆರ್ ದಾಖಲು ಮಾಡಲಾಗಿದೆ.
ಸದ್ಯ ಮೂರು ಎಫ್ ಐ ಅರ್ ಗಳು ದಾಖಲಾಗಿದ್ದು, ಸಿಗರೇಟ್ ಕೊಟ್ಟಿದ್ದಕ್ಕೆ ಮೊದಲ ಎಫ್ ಐ ಆರ್, ವೀಡಿಯೋ ಮಾಡ್ಕೊಂಡು ವೈರಲ್ ಮಾಡಿದ್ದಕ್ಕೆ ಮತ್ತೊಂದು ಎಫ್ ಐ ಆರ್ ಹಾಗೂ ಜೈಲಿಂದ ಬಾಕ್ಸ್ ಗಳನ್ನು ತಗೊಂಡು ಹೋಗಿದ್ದಕ್ಕೆ ಮತ್ತೊಂದು ಪ್ರಕರಣ ದಾಖಲಾಗಿದೆ ಎಂದು ಹೇಳಲಾಗಿದೆ.