ಬೆಂಗಳೂರು: ದರ್ಶನ್ಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡುತ್ತಿರುವ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿದ್ದು, ಈಗಾಗಲೇ ನಟ ಏಳು ಮಂದಿ ಜೈಲಿನ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತ್ತು ಮಾಡಿದ್ದು, ಪ್ರಕರಣ ಸಂಬಂಧ ಆತಂರಿಕ ತನಿಖೆಗೆ ಆದೇಶ ಹೊರಡಿಸಿದೆ. ಈ ನಡುವೆ ಇಂದು ಸಿಎಂ ಸಿದ್ರಾಮಯ್ಯ ಅವರನ್ನು ಡಿಜಿ ಮತ್ತು ಐಜಿಪಿ ಅಲೋಕ್ ಕುಮಾರ್ ಅವರು ಭೇಟಿ ನೀಡಿ ಘಟನೆ ಸಂಬಂಧ ಎಲ್ಲಾ ಮಾಹಿತಿಗಳನ್ನು ನೀಡಿದ್ದು, ಇದೇ ವೇಳೆ ಸಿಎಂ ಕೂಡಲೇ ಎಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಮುಂದೆ ಹೀಗೆ ಆಗದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈ ನಡುವೆ ಮಾಧ್ಯಮಗಳಲ್ಲಿ ದರ್ಶನ್ಗೆ ಜೈಲಿನಲ್ಲಿ ವಿಶೇಷ ಆತಿಥ್ಯ ಸುದ್ದಿಗಳು ಪ್ರಸಾರ ವಾಗುತ್ತಿದ್ದು, ಜೈಲಿನ ಅಧಿಕಾರಿಗಳು ದರ್ಶನ್ಗೆ ನೀಡಿದ್ದ ಎಲ್ಲಾ ಸೌಲಭ್ಯಗಳನ್ನು ವಾಪಸ್ಸು ತೆಗೆದುಕೊಂಡು ಸಾಮಾನ್ಯ ವಿಚಾರಣಾ ಕೈದಿಗಳಿಗೆ ನೀಡುವ ಸೌಲಬ್ಯವನ್ನು ನೀಡಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗೆ ದರ್ಶನ್ ಉಪಹಾರಕ್ಕೆ ಜೈಲಿನಲ್ಲೆ ನೀಡುವ ತಟ್ಟೆಯಲ್ಲಿ ಸೇವನೆ ಮಾಡಿ ತಮ್ಮ ಪಾಡಿಗೆ ತಾವು ಇದ್ದರು ಎನ್ನಲಾಗಿದೆ. ಇನ್ನೂ ಹೊರಗೆ ಹೇಗೆ ನಮ್ಮ ಫೋಟೋ ವೈರಲ್ ಆಗಿದೆ ಅನ್ನೋದರ ಬಗ್ಗೆ ದರ್ಶನ್ ತಲೆ ಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ.