ಇಸ್ಲಾಮಾಬಾದ್: ನೈಋತ್ಯ ಪಾಕಿಸ್ತಾನದಲ್ಲಿ ಬಂದೂಕುಧಾರಿಗಳು 23 ಪ್ರಯಾಣಿಕರನ್ನು ಗುರುತಿಸಿ ಬಸ್, ವಾಹನಗಳು ಮತ್ತು ಟ್ರಕ್ ಗಳಿಂದ ಕರೆದೊಯ್ದ ನಂತರ ಗುಂಡಿಕ್ಕಿ ಕೊಂದಿದ್ದಾರೆ ಎನ್ನಲಾಗಿದೆ.
ಬಲೂಚಿಸ್ತಾನ ಪ್ರಾಂತ್ಯದ ಕುಸಖೈಲ್ ಜಿಲ್ಲೆಯಲ್ಲಿ ರಾತ್ರಿ ವೇಳೆ ಈ ದಾಳಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಯೂಬ್ ಅಚಕ್ಜೈ ದೃಢಪಡಿಸಿದ್ದಾರೆ. ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಈ ದಾಳಿಯನ್ನು ಬಲವಾಗಿ ಖಂಡಿಸಿದ್ದು, ಇದು “ಅನಾಗರಿಕ” ಎಂದು ಬಣ್ಣಿಸಿದ್ದಾರೆ ಮತ್ತು ಇದಕ್ಕೆ ಕಾರಣರಾದವರು ಕಾನೂನಿನ ಸಂಪೂರ್ಣ ಶಕ್ತಿಯನ್ನು ಎದುರಿಸುತ್ತಾರೆ ಮತ್ತು ನ್ಯಾಯದಿಂದ ತಪ್ಪಿಸಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ.