ಕೋಲ್ಕತಾ : ಕೋಲ್ಕತಾದ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮುಖ್ಯಸ್ಥರಾಗಿದ್ದ ಸಂಸ್ಥೆಯ ಆವರಣದಲ್ಲಿ ತರಬೇತಿ ವೈದ್ಯೆ ಶವ ಪತ್ತೆಯಾದಾಗಿನಿಂದ ಭಾರಿ ಬಿರುಗಾಳಿ ಎದ್ದಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ದಳ (CBI) ಸಧ್ಯ ಘೋಷ್ ಅವರ ಅಧಿಕಾರಾವಧಿಯಲ್ಲಿ ವೈದ್ಯಕೀಯ ಕಾಲೇಜಿನಲ್ಲಿ ಹಣಕಾಸು ಅಕ್ರಮಗಳ ಪ್ರಕರಣವನ್ನ ದಾಖಲಿಸಿದೆ.
ಕಲ್ಕತ್ತಾ ಹೈಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ರಚಿಸಿದ ವಿಶೇಷ ತನಿಖಾ ಸಂಸ್ಥೆಯಿಂದ (SIT) ಸಿಬಿಐ ತನಿಖೆಯನ್ನ ವಹಿಸಿಕೊಂಡಿದೆ. ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಉಪ ಅಧೀಕ್ಷಕ ಅಖ್ತರ್ ಅಲಿ ಅವರು ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸು ದುರ್ನಡತೆಯ ಬಗ್ಗೆ ಜಾರಿ ನಿರ್ದೇಶನಾಲಯ (ED) ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ಆದೇಶ ಹೊರಡಿಸಲಾಗಿದೆ.
352 ಕೋಟಿ ಹಣ,10 ದಿನ ಎಣಿಕೆ ; ಭಾರತದ ಅತಿದೊಡ್ಡ ‘ಆದಾಯ ತೆರಿಗೆ ದಾಳಿ’, ತಂಡಕ್ಕೆ ಗೌರವ
BREAKING : ಜಮ್ಮು-ಕಾಶ್ಮೀರ ‘ಪೊಲೀಸ್ ಚೆಕ್ ಪೋಸ್ಟ್’ ಮೇಲೆ ಭಯೋತ್ಪಾದಕ ದಾಳಿ : ಓರ್ವ ಉಗ್ರ ಉಡೀಸ್