ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಸಾಕ್ಷ್ಯನಾಶಕ್ಕೆ ಬಿಗ್ ಸ್ಕೆಚ್ ಹಾಕಿದ್ದು, ವೃಷಭಾವತಿ ನದಿಯಲ್ಲಿ ಬಟ್ಟೆಗಳನ್ನು ಎಸೆದಿದ್ದರು ಎಂದು ಪೊಲಿಸರ ತನಿಖೆಯಲ್ಲಿ ತಿಳಿದುಬಂದಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಲಕ್ಷ್ಮಣ್ ಹಾಗೂ ನಾಗರಾಜ್ ರೇಣುಕಾಸ್ವಾಮಿ ಹತ್ಯೆ ಬಳಿಕ ಸಾಕ್ಷ್ಯ ನಾಶಕ್ಕೆ ಆರೋಪಿಗಳ ಬಟ್ಟೆಗಳನ್ನು ವೃಷಭಾವತಿ ನದಿಗೆ ಎಸೆದಿದ್ದರು ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿಗಳಾದ ನಾಗರಾಜ್ ಹಾಗೂ ಲಕ್ಷ್ಮಣ್ ಬಟ್ಟೆ ಎಸೆಯುವ ಮೊದಲು ಆರ್. ಆರ್ ನಗರದ ಟ್ರೆಂಡ್ಸ್ ನಲ್ಲಿ ಹೊಸ ಬಟ್ಟೆ ಖರೀದಿಸಿದ್ದರು. ಬಳಿಕ ನೇರವಾಗಿ ಗಣೇಶನ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಮಾಡಿದ್ದರು. ಇದೀಗ ಪೊಲೀಸರು 2 ಸ್ಥಳಗಳಲ್ಲೂ ಸ್ಥಳ ಮಹಜರು ನಡೆಸಿದ್ದಾರೆ.