ಮುಂಬೈ : ಮೊಟ್ಟಮೊದಲ ಬಾರಿಗೆ ಒಲಿಂಪಿಕ್ಸ್ ಪ್ರಸಾರ ಮಾಡಿದ ವಯೋಕಾಮ್18, ಪ್ಯಾರಿಸ್ ಒಲಿಂಪಿಕ್ಸ್-2024ರನ್ನು ಭಾರತದಲ್ಲಿ ಇದುವರೆಗಿನ ಅತ್ಯಂತ ಸಮಗ್ರವಾದ ಒಲಿಂಪಿಕ್ ಪ್ರಸ್ತುತಿಯನ್ನು ಒದಗಿಸಿದೆ. ಇದು ಲೀನಿಯರ್ ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಭಾರತದಲ್ಲಿ ಒಲಿಂಪಿಕ್ಸ್ಗೆ ಇದುವರೆಗೆ ಅತಿ ಹೆಚ್ಚು ವೀಕ್ಷಕರನ್ನು ತಲುಪಿಸಿದೆ. 17 ಕೋಟಿಗೂ ಹೆಚ್ಚು ವೀಕ್ಷಕರು ಜಿಯೋಸಿನಿಮಾ ಮತ್ತು ಸ್ಪೋರ್ಟ್ಸ್18 ನೆಟ್ವರ್ಕ್ನಲ್ಲಿ 1,500 ಕೋಟಿ ನಿಮಿಷಗಳಷ್ಟು ಅಭೂತಪೂರ್ವ ವೀಕ್ಷಣೆ ಸಮಯವನ್ನು ಕಂಡರು. ಇದರೊಂದಿಗೆ ಭಾರತದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಜನರು ಒಲಿಂಪಿಕ್ಸ್ ಸ್ಪರ್ಧೆಗಳನ್ನು ವೀಕ್ಷಿಸಿದಂತಾಗಿದೆ.
ಮೊದಲ ಬಾರಿಗೆ ಭಾರತದಲ್ಲಿ ಒಲಿಂಪಿಕ್ಸ್ ಕವರೇಜ್ಅನ್ನು ಜಿಯೋಸಿನಿಮಾದಲ್ಲಿ ಉಚಿತವಾಗಿ 20 ಏಕಕಾಲೀನ ಫೀಡ್ಗಳಲ್ಲಿ ಪ್ರಸ್ತುತಪಡಿಸಲಾಯಿತು. ಇದರೊಂದಿಗೆ ಕ್ರೀಡಾ ಅಭಿಮಾನಿಗಳು ತಮ್ಮ ಆದ್ಯತೆಯ ಸ್ಪರ್ಧೆಗಳು ಮತ್ತು ಭಾರತೀಯ ಕ್ರೀಡಾಪಟುಗಳ ಪ್ರದರ್ಶನಗಳನ್ನು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ತಮ್ಮ ಆದ್ಯತೆಯ ಸಾಧನದಲ್ಲಿ ವೀಕ್ಷಿಸಿದರು. ಇದು ಇದುವರೆಗೆ ಅತಿ ಹೆಚ್ಚು ಜನರು ವೀಕ್ಷಿಸಿದ ಒಲಿಂಪಿಕ್ಸ್ ಆಗಿದೆ. 17 ಕ್ರೀಡಾವಾರು ಫೀಡ್ಗಳು ಮತ್ತು ಮೂರು ಕ್ಯುರೇಟೆಡ್ ಫೀಡ್ಗಳು, 4ಕೆನಲ್ಲಿ ಲಭ್ಯವಿರುವ ಎಲ್ಲಾ ವೀಕ್ಷಕರಿಗೆ ಪ್ಯಾರಿಸ್ ಒಲಿಂಪಿಕ್ಸ್-2024ರಲ್ಲಿ ವಿಶ್ವದ ಅತ್ಯುತ್ತಮ ಕ್ರೀಡಾಪಟುಗಳ ಸ್ಪರ್ಧೆಗಳನ್ನು ಆನಂದಿಸುವ ಅವಕಾಶವನ್ನು ಒದಗಿಸಿತು.
ಲೀನಿಯರ್ ಪ್ಲಾಟ್ಫಾರ್ಮ್ಗಳಾದ ಸ್ಪೋರ್ಟ್ಸ್18-1, ಸ್ಪೋರ್ಟ್ಸ್18-1 ಎಚ್ಡಿ, ಸ್ಪೋರ್ಟ್ಸ್18-2ರಲ್ಲಿ ಭಾರತೀಯರ ಸ್ಪರ್ಧೆಗಳನ್ನು ಗಮನದಲ್ಲಿಟ್ಟುಕೊಂಡು ಪ್ಯಾರಿಸ್ ಒಲಿಂಪಿಕ್ಸ್ ಸ್ಪರ್ಧೆಗಳನ್ನು ಪ್ರಸಾರ ಮಾಡಲಾಯಿತು. ಸ್ಪೋರ್ಟ್ಸ್18-3ರಲ್ಲಿ ಜಾಗತಿಕ ಕ್ರೀಡಾಸ್ಪರ್ಧೆಗಳು ಕ್ರೀಡಾ ಅಭಿಮಾನಿಗಳ ವೀಕ್ಷಣೆಗೆ ಲಭ್ಯವಿದ್ದವು. ಸ್ಪೋರ್ಟ್ಸ್18-1 ಮತ್ತು ಸ್ಪೋರ್ಟ್ಸ್18-1 ಎಚ್ಡಿಯಲ್ಲಿ ಸ್ಪರ್ಧೆಗಳ ವೀಕ್ಷಕವಿವರಣೆಯನ್ನು ಇಂಗ್ಲಿಷ್ನಲ್ಲಿ ಪ್ರಸ್ತುತಪಡಿಸಲಾಯಿತು. ಜತೆಗೆ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಆಯ್ಕೆಯ ಬಟನ್ ಲಭ್ಯವಿತ್ತು. ಸ್ಪೋರ್ಟ್ಸ್18-2ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ವೀಕ್ಷಕವಿವರಣೆಯನ್ನು ಹಿಂದಿ ಭಾಷೆಯಲ್ಲಿ ನೀಡಲಾಯಿತು.
‘ಕ್ರಿಕೆಟ್ ಅಲ್ಲದ ಕ್ರೀಡಾಸ್ಪರ್ಧೆಯು ಭಾರತೀಯ ವೀಕ್ಷಕರಲ್ಲಿ ಹೇಗೆ ಆಸಕ್ತಿಯನ್ನು ಬೆಳೆಸುತ್ತಿದೆ ಎಂಬುದಕ್ಕೆ ಪ್ಯಾರಿಸ್ ಒಲಿಂಪಿಕ್ಸ್-2024 ಒಂದು ಪ್ರಮುಖ ಉದಾಹರಣೆಯಾಗಿದೆ. ವೀಕ್ಷಕರ ಪ್ರಮಾಣ ಮತ್ತು ಉತ್ಸಾಹಭರಿತ ಜಾಹೀರಾತುದಾರರ ಭಾಗವಹಿಸುವಿಕೆ ಎರಡೂ ಅದಕ್ಕೆ ಸಾಕ್ಷಿಯಾಗಿದೆ. ನಮ್ಮ ಒಲಿಂಪಿಕ್ ಕವರೇಜ್ ಕೇವಲ ವಿಶ್ವ ದರ್ಜೆಯ ನಿರ್ಮಾಣವಾಗಿರಲಿಲ್ಲ, ಇದು ವೀಕ್ಷಕರಿಗೆ ಸ್ಟುಡಿಯೋದ ಪರಿಣತರೊಂದಿಗೆ (ಮಾಜಿ ಒಲಿಂಪಿಯನ್ಗಳು), ಸ್ಥಳೀಯ ಭಾಷೆಗಳಲ್ಲಿ ವೀಕ್ಷಕವಿವರಣೆಯೊಂದಿಗೆ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿತು. ನಮ್ಮ ಪ್ರಯತ್ನವು ಕ್ರೀಡಾ ವೀಕ್ಷಣೆಯ ಅನುಭವವನ್ನು ನಿರಂತರವಾಗಿ ಹೆಚ್ಚಿಸುವುದು, ಎಲ್ಲಾ ಪರದೆಯಾದ್ಯಂತ ಕ್ರೀಡಾ ಅಭಿಮಾನಿಗಳನ್ನು ತೊಡಗಿಸಿಕೊಳ್ಳುವುದು ಮತ್ತು ದೀರ್ಘಕಾಲದವರೆಗೆ ಜಾಹೀರಾತುದಾರರಿಗೆ ತಮ್ಮ ಗ್ರಾಹಕರನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಲು ಮಾರ್ಗಗಳು ಮತ್ತು ಅವಕಾಶಗಳನ್ನು ನೀಡುವುದಾಗಿದೆ ಎಂದು ವಯೋಕಾಮ್18ರ ಡಿಜಿಟಲ್ ಸಿಇಒ ಕಿರಣ್ ಮಣಿ ಹೇಳಿದರು.
ಜಾಹೀರಾತುದಾರರಿಗೆ ವಿಸ್ತಾರವಾದ ಪ್ರಸ್ತುತಿಯು, ಹೆಚ್ಚು ಉತ್ಸಾಹಭರಿತ ಮತ್ತು ವೈವಿಧ್ಯಮಯ ವೀಕ್ಷಕರೊಂದಿಗೆ ತೊಡಗಿಸಿಕೊಳ್ಳಲು ಸಾಟಿಯಿಲ್ಲದ ಅವಕಾಶವನ್ನು ಒದಗಿಸಿದೆ. ಭಾರತದಲ್ಲಿನ ಒಲಿಂಪಿಕ್ಸ್ ಪ್ರಸಾರದ ಇತಿಹಾಸದಲ್ಲಿ ಇಲ್ಲಿಯವರೆಗಿನ ಅತಿಹೆಚ್ಚಿನ 69 ಬ್ರಾಂಡ್ಗಳು ಹಿಂದಿನ ಆವೃತ್ತಿಗಿಂತ 2.6ಎಕ್ಸ್ಗೂ ಅಧಿಕ ಜಾಹೀರಾತು ಆದಾಯವನ್ನು ಒದಗಿಸಿದವು. ವಯೋಕಾಮ್18 ಪ್ರಸ್ತುತಿಯ ಸಹ-ಪ್ರಸ್ತುತ ಪಾಲುದಾರರು ರಿಲಯನ್ಸ್ ಫೌಂಡೇಶನ್, ಎಸ್ಬಿಐ ಮತ್ತು ಜೆಎಸ್ಡಬ್ಲ್ಯು. ಕೋಕಾ ಕೋಲಾ ಇಂಡಿಯಾ ಲಿಮಿಟೆಡ್, ಹರ್ಬಲೈಫ್ ಅಸೋಸಿಯೇಟ್ ಪಾಲುದಾರರಾಗಿದ್ದರೆ, ಇತರ ಉನ್ನತ ಜಾಹೀರಾತುದಾರರಲ್ಲಿ ಆರ್ಬಿಐ, ಎಎಂಎಫ್ಐ, ಆದಿತ್ಯ ಬಿರ್ಲಾ ಕ್ಯಾಪಿಟಲ್, ಏರ್ ಇಂಡಿಯಾ, ಬಕಾರ್ಡಿ ಮಾರ್ಟಿನಿ ಇಂಡಿಯಾ ಲಿಮಿಟೆಡ್, ಎಂಆರ್ಎಫ್ ಸೇರಿದ್ದವು.
BREAKING: ಒಡಿಶಾದ ‘ದಿಯೋಘರ್’ನಲ್ಲಿ ಚಿನ್ನದ ನಿಕ್ಷೇಪ ಪತ್ತೆ | Discovers Gold Deposits in Odisha
‘ಬಿಜೆಪಿ’ಯವರ ಮಾತು ಕೇಳಿ ’15 ಬಿಲ್’ಗಳನ್ನು ರಾಜ್ಯಪಾಲರು ವಾಪಾಸ್ ಕಳುಹಿಸಿದ್ದಾರೆ: ಡಿ.ಕೆ ಶಿವಕುಮಾರ್ ಕಿಡಿ
ಮಂಕಿಪಾಕ್ಸ್ ಕಾಯಿಲೆ ಮುಂಜಾಗ್ರತ ಕ್ರಮವಾಗಿ ವಿಕ್ಟೋರಿಯಾದಲ್ಲಿ 50 ಬೆಡ್ ಮೀಸಲು: ಶರಣ ಪ್ರಕಾಶ್ ಪಾಟೀಲ್