ಬೆಂಗಳೂರು: ನಗರದಲ್ಲಿ ವಿದ್ಯುತ್ ವೆಚ್ಚ ಉಳಿತಾಯಕ್ಕೆ ರಾಜ್ ಸರ್ಕಾರದಿಂದ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಈಗ ಅಳವಡಿಸಿರುವಂತ ಸಾಂಪ್ರದಾಯಿಕ ಬೀದಿ ದೀಪಗಳನ್ನು ತೆರೆವುಗೊಳಿಸಿ, ಎಲ್ಇಡಿ ದೀಪಗಳನ್ನು ಅಳವಡಿಸುವಂತ ಮಹತ್ವದ ಯೋಜನೆ ಕೈಗೊಂಡಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 684 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. 684 ಕೋಟಿ ವೆಚ್ಚದಲ್ಲಿ ಬೆಂಗಳೂರಲ್ಲಿ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಕೆಗೆ ಅನುಮತಿಸಲಾಗಿದೆ.
ʼಇಂಧನ ಉಳಿತಾಯ – ಇಎಂಐ/ವಾರ್ಷಿಕ ಪಾವತಿ ಮಾದರಿʼ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆ ಯೋಜನೆಯಡಿ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸುವ ಹಾಗೂ 7 ವರ್ಷಗಳ ನಿರ್ವಹಣಾ ವೆಚ್ಚಕ್ಕೆ ₹684.34 ಕೋಟಿ ಒದಗಿಸುವ ಪ್ರಸ್ತಾವಕ್ಕೆ ಸಂಪುಟ ಅನುಮೋದನೆ ನೀಡಿದೆ.
ʼಇಂಧನ ಉಳಿತಾಯ – ಇಎಂಐ/ವಾರ್ಷಿಕ ಪಾವತಿ ಮಾದರಿʼ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆ ಯೋಜನೆಯಡಿ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸುವ ಹಾಗೂ 7 ವರ್ಷಗಳ ನಿರ್ವಹಣಾ ವೆಚ್ಚಕ್ಕೆ ₹684.34 ಕೋಟಿ ಒದಗಿಸುವ ಪ್ರಸ್ತಾವಕ್ಕೆ ಸಂಪುಟ ಅನುಮೋದನೆ ನೀಡಿದೆ.#CabinetDecisions @CMofKarnataka @siddaramaiah… pic.twitter.com/hilVnT6Xh8
— DIPR Karnataka (@KarnatakaVarthe) August 23, 2024
ಶಿವಮೊಗ್ಗ: ಆ.26ರಂದು ನಗರದಲ್ಲಿ ‘ಶ್ರೀ ಕೃಷ್ಣ ಜಯಂತಿ’ ಕಾರ್ಯಕ್ರಮ ಆಯೋಜನೆ
‘ಬಿಜೆಪಿ’ಯವರ ಮಾತು ಕೇಳಿ ’15 ಬಿಲ್’ಗಳನ್ನು ರಾಜ್ಯಪಾಲರು ವಾಪಾಸ್ ಕಳುಹಿಸಿದ್ದಾರೆ: ಡಿ.ಕೆ ಶಿವಕುಮಾರ್ ಕಿಡಿ