ನವದೆಹಲಿ: 40 ಪ್ರಯಾಣಿಕರನ್ನು ಹೊತ್ತ ಭಾರತೀಯ ಪ್ರಯಾಣಿಕರ ಬಸ್ ತನಾಹುನ್ ಜಿಲ್ಲೆಯ ಮಾರ್ಸ್ಯಾಂಗ್ಡಿ ನದಿಗೆ ಬಿದ್ದಿದೆ ಎಂದು ನೇಪಾಳ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಯುಪಿ ಎಫ್ಟಿ 7623 ನಂಬರ್ ಪ್ಲೇಟ್ ಹೊಂದಿರುವ ಬಸ್ ನದಿಗೆ ಬಿದ್ದು ನದಿಯ ದಡದಲ್ಲಿದೆ ಎಂದು ತನಾಹುನ್ ಜಿಲ್ಲಾ ಪೊಲೀಸ್ ಕಚೇರಿಯ ಡಿಎಸ್ಪಿ ದೀಪ್ಕುಮಾರ್ ರಾಯ ಖಚಿತಪಡಿಸಿದ್ದಾರೆ.
ಅಧಿಕಾರಿಯ ಪ್ರಕಾರ, ಬಸ್ ಪೋಖರಾದಿಂದ ಕಠ್ಮಂಡುವಿಗೆ ಹೋಗುತ್ತಿತ್ತು. 40 ಭಾರತೀಯ ಪ್ರಯಾಣಿಕರು ಬಸ್ ನಲ್ಲಿದ್ದು, ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.