ನವದೆಹಲಿ: ಇಂದು ದೆಹಲಿಯ CWMA ಕಚೇರಿಯಲ್ಲಿ ಕಾವೇರಿ ನದಿ ನೀರು ಹರಿವಿನ ವಿಚಾರವಾಗಿ ಮಹತ್ವದ 33ನೇ ಸಭೆ ನಡೆಯಿತು. ಈ ಸಭೆಯಲ್ಲಿ ಅಂತಿಮವಾಗಿ ಸಿಡಬ್ಲ್ಯೂ ಎಂಎ ಎರಡೂ ರಾಜ್ಯಗಳಿಗೆ ಜಲಾಶಯಗಳಲ್ಲಿ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಿ ಎಂಬುದಾಗಿ ಸಲಹೆ ಮಾಡಿದೆ.
ಹೀಗಿದೆ ದಿನಾಂಕ: 22.08.2024 ರಂದು ಜರುಗಿದ CWMA 33ನೇ ಸಭೆಯ ಚರ್ಚೆಯ ಸಾರಾಂಶ
1. ಕರ್ನಾಟಕವು CWMA ಮುಂದೆ ಈ ಕೆಳಕಂಡ ಅಂಶಗಳನ್ನು ಸಲ್ಲಿಸಿತು:
i) ದಿನಾಂಕ 21.08.2024 ರಂತೆ ನಿಗದಿಪಡಿಸಿದ ನೀರಿನ ಹರಿವಾದ 71.56 ಟಿಎಂಸಿ ಗೆ ಬದಲಾಗಿ ಬಿಳಿಗುಂಡ್ಲುವಿನಲ್ಲಿ 170.851 ಟಿಎಂಸಿ ನೀರು ಹರಿದಿರುತ್ತದೆ.
ii) ಬಿಳಿಗುಂಡ್ಲುವಿನಲ್ಲಿ ಹರಿದ ಹೆಚ್ಚುವರಿ ನೀರಿನ ಪ್ರಮಾಣವನ್ನು ಮುಂಬರುವ ತಿಂಗಳುಗಳಲ್ಲಿ ಕರ್ನಾಟಕ ರಾಜ್ಯವು ಹರಿಸಬೇಕಾದ ನೀರಿನ ಮೊತ್ತಕ್ಕೆ ಜಮೆ ಮಾಡಿಕೊಳ್ಳತಕ್ಕದ್ದು.
2. ತಮಿಳುನಾಡು ರಾಜ್ಯವು ಈ ಕೆಳಕಂಡ ಅಂಶಗಳನ್ನು ಸಲ್ಲಿಸಿತು:
i) ಬಿಳಿಗುಂಡ್ಲುವಿನಲ್ಲಿ ನಿಗದಿತ ಪ್ರಮಾಣಕ್ಕಿಂತ ವಾಸ್ತವವಾಗಿ ಹರಿದ ಹೆಚ್ಚುವರಿ ನೀರಿನ ಪ್ರಮಾಣವು, ಕರ್ನಾಟಕದ ಜಲಾಶಯಗಳಿಗೆ ಹರಿದು ಬಂದ ಹೆಚ್ಚುವರಿ ಒಳಹರಿವಿನ ಪ್ರಮಾಣದ ಕೊಡುಗೆಯಾಗಿರುತ್ತದೆ. ಆದ್ದರಿಂದ, ಕಾವೇರಿ ನ್ಯಾಯಾಧಿಕರಣದ ಆದೇಶದಂತೆ ಮತ್ತು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಅಂತಿಮ ತೀರ್ಪಿನಂತೆ, ಕರ್ನಾಟಕ ರಾಜ್ಯವು ಪ್ರತಿ ತಿಂಗಳ ನಿಗದಿತ ನೀರಿನ ಪ್ರಮಾಣವನ್ನು ಹರಿಸುವಂತೆ CWMAಯು ನಿರ್ದೇಶಿಸುವಂತೆ ಕೋರಿತು.
ಕೊನೆಯದಾಗಿ, ಅಧ್ಯಕ್ಷರು, CWMA ಇವರು ಎರಡೂ ರಾಜ್ಯಗಳೂ ಸಹ ನೀರನ್ನು ವಿವೇಚನೆಯಿಂದ ಬಳಸಿ, ಜಲಾಶಯಗಳಲ್ಲಿ ನೀರನ್ನು ಸಂಗ್ರಹಿಸಿಕೊಳ್ಳತಕ್ಕದ್ದು ಎಂದು ಸಲಹೆಯನ್ನು ನೀಡಿದರು.
ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೆ ನಾವು ವಿರಮಿಸುವುದಿಲ್ಲ: BJP MLC ಛಲವಾದಿ ನಾರಾಯಣಸ್ವಾಮಿ
ಲೋಕಾಯುಕ್ತಕ್ಕಿಂತ ‘CBI’ ಅಧಿಕಾರಿಗಳೇ ಎಷ್ಟೋ ವಾಸಿ :ವಿಚಾರಣೆ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ