ಬೆಂಗಳೂರು: ರಾಜ್ಯದಲ್ಲಿ 200 ಕೋಟಿ ರೂ. ಬಂಡವಾಳ ಹೂಡಿಕೆಗೆ ತೈವಾನ್ ನ ಬೆಸ್ಟೆಕ್ ಪವರ್ ಎಲೆಕ್ಟ್ರಾನಿಕ್ಸ್ ಕಂಪನಿ ಆಸಕ್ತಿ ತಾಳಿದ್ದು, ಬೆಂಗಳೂರಿನ ಸುತ್ತಮುತ್ತ ಕಾರ್ಖಾನೆ ಸ್ಥಾಪಿಸಲು ಆಸಕ್ತಿ ತೋರಿದ್ದು ಅದಕ್ಕೆ ರಾಜ್ಯ ಸರಕಾರವು ಸಂಪೂರ್ಣ ಸಹಕಾರ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಮಂಗಳವಾರ ಇಲ್ಲಿ ಬೆಸ್ಟೆಕ್ ಉದ್ಯಮ ಸಮೂಹದ ಅಧ್ಯಕ್ಷ ಮೈಕ್ ಚೆನ್ ಮತ್ತು ಉಪಾಧ್ಯಕ್ಷ ತೆರೇಸಾ ಡಾಂಗ್ ತಮ್ಮನ್ನು ಭೇಟಿಯಾದ ಬಳಿಕ ಅವರು ಈ ಮಾಹಿತಿ ನೀಡಿದ್ದಾರೆ.
ತೈವಾನ್‌ನ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕಾ ಕಂಪನಿ ಬೆಸ್ಟೆಕ್ ಪವರ್ ಎಲೆಕ್ಟ್ರಾನಿಕ್ಸ್ ರಾಜ್ಯದಲ್ಲಿ ₹200 ಕೋಟಿ ಬಂಡವಾಳ ಹೂಡಲು ಒಲವು ತೋರಿದೆ. ಇದರಿಂದಾಗಿ 5 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಕಂಪನಿಯು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಖಾನೆ ಸ್ಥಾಪಿಸಲು ಆಸಕ್ತಿ ತೋರಿಸಿದೆ. ಇದಕ್ಕೆ ರಾಜ್ಯ ಸರ್ಕಾರವು ಎಲ್ಲಾ… pic.twitter.com/qkFg9rcxr9
— DIPR Karnataka (@KarnatakaVarthe) August 21, 2024
ತೈವಾನ್ ಮೂಲದ ಕಂಪನಿಯ ಈ ಯೋಜನೆಯಿಂದ 5,000 ಉದ್ಯೋಗಗಳು ಸೃಷ್ಟಿಯಾಗಲಿವೆ. ಮೂಲಸೌಕರ್ಯ ಅಭಿವೃದ್ಧಿ ಬಳಿಕ ಮೂರು ವರ್ಷಗಳಲ್ಲಿ ಕಂಪನಿಯು ಯೋಜನೆಗೆ ಹಂತಹಂತವಾಗಿ ಬಂಡವಾಳ ಹೂಡಲಿದೆ ಎಂದು ಅವರು ವಿವರಿಸಿದ್ದಾರೆ.
ಬೆಸ್ಟೆಕ್ ಕಂಪನಿಯು ಅಡಾಪ್ಟರ್, ಸಿ-ಪಿನ್, ಇ.ವಿ. ಮತ್ತು ಲ್ಯಾಪ್‌ಟಾಪ್ ಚಾರ್ಜರ್, ಕೇಬಲ್ ಇತ್ಯಾದಿಗಳನ್ನು ಉತ್ಕೃಷ್ಟ ಗುಣಮಟ್ಟದೊಂದಿಗೆ ತಯಾರಿಸಲಿದೆ. ಈ ಮೂಲಕ ಕಂಪನಿಯು ವಾರ್ಷಿಕವಾಗಿ 2,500 ಕೋಟಿ ರೂಪಾಯಿ ವಹಿವಾಟು ನಡೆಸಲಿದೆ ಎಂದು ಅವರು ವಿವರಿಸಿದ್ದಾರೆ.
BIG NEWS: ಆಲಮಟ್ಟಿ ಡ್ಯಾಂ ಬಳಿ ‘ಗಂಗಾ ಆರತಿ’ ಮಾದರಿಯಲ್ಲಿ ‘ಕೃಷ್ಣಾ ಆರತಿ’: ಡಿಸಿಎಂ ಡಿ.ಕೆ ಶಿವಕುಮಾರ್
BIG NEWS : ರಾಜ್ಯದಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿದ್ರೆ 2 ಲಕ್ಷ ದಂಡ ಜೊತೆಗೆ 7 ವರ್ಷ ಜೈಲು ಶಿಕ್ಷೆ ಫಿಕ್ಸ್
BIG NEWS : ರಾಜ್ಯದಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿದ್ರೆ 2 ಲಕ್ಷ ದಂಡ ಜೊತೆಗೆ 7 ವರ್ಷ ಜೈಲು ಶಿಕ್ಷೆ ಫಿಕ್ಸ್