ಚಾಮರಾಜನಗರ: ರಾಜ್ಯದಲ್ಲಿ ಮಾಂಗಲ್ಯ ಭಾಗ್ಯ ಯೋಜನೆಯ ಅಡಿಯಲ್ಲಿ ಸಾಮೂಹಿಕ ಮದುವೆಗಳಿಗೆ ಉತ್ತೇಜನ ನೀಡಲಾಗುವುದು ಎಂಬುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಇಂದು ಚಾಮರಾಜನಗರದ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಮಾಂಗಲ್ಯ ಭಾಗ್ಯ ಯೋಜನೆಯಡಿ ಸಾಮೂಹಿತ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನವ ದಂಪತಿಗಳನ್ನು ಹರಿಸಿದರು.
ಮಾಂಗಲ್ಯ ಭಾಗ್ಯ ಯೋಜನೆಯಡಿ ಇಂದು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 66 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ವನ್ನು ಆಯೋಜಿಸಲಾಗಿತ್ತು.
ಪ್ರವರ್ಗ ‘ಎ’ ಮತ್ತು ‘ಬಿ’ ಅಧಿಸೂಚಿತ ದೇವಾಲಯಗಳಲ್ಲಿ ‘ಮಾಂಗಲ್ಯ ಭಾಗ್ಯ’ ಯೋಜನೆ ಅಡಿ ಸಾಮೂಹಿಕ ವಿವಾಹಗಳ ಆಯೋಜನೆ ಮಾಡಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ವಧು-ವರರಿಗೆ ರೂ.55,000/-ಗಳ ಪ್ರೋತ್ಸಾಹ ಧನವನ್ನು ಆದಾಯ ಕಡಿಮೆ ಇರುವ ದೇವಾಲಯಗಳ ನಿಧಿಯಿಂದ ಬಳಸಿಕೊಳ್ಳಲಾಗುವುದು. ಆದಾಯ ಕಡಿಮೆ ಇರುವ ದೇವಾಲಯಗಳಲ್ಲಿ ರೂ.55,000/-ಗಳ ಪ್ರೋತ್ಸಾಹ ಧನವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ನೀಡಲಾಗುವುದು.
ಈ ಕಾರ್ಯಕ್ರಮವು ರಾಮಲಿಂಗಾ ರೆಡ್ಡಿ, ಸಾರಿಗೆ ಮತ್ತು ಮುಜರಾಯಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಎಂ. ಆರ್. ಮಂಜುನಾಥ್, ಶಾಸಕರು, ಹನೂರು ವಿಧಾನಸಭಾ ಕ್ಷೇತ್ರರವರು ಉಪಸ್ಥಿತರಿದ್ದರು.
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ದೇಶಿಕೇಂದ್ರ ಮಹಾಸ್ವಾಮಿಗಳು, ಶ್ರೀ ಮತ್ಸುತ್ತೂರು ವೀರ ಸಿಂಹಾದನ ಮಠ, ಮೈಸೂರು, ಷ.ಬ್ರ.ಪ್ರಣವ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಸಾಲೂರು ಬೃಹನ್ ಮಠದ ಅಧ್ಯಕ್ಷರು ಆಶೀರ್ವಚನವನ್ನು ನೀಡಿದರು.
ಶಿಲ್ಪಾ ನಾಗ್,ಭಾ.ಆ.ಸೇ. ಜಿಲ್ಲಾಧಿಕಾರಿ, ಚಾಮರಾಜನಗರ ಜಿಲ್ಲೆ, ರಘು ಏ ಇ .ಕ.ಆ.ಸೇ ಕಾರ್ಯದರ್ಶಿಗಳು, ಶ್ರೀ ಮಹದೇವ ಪ್ರಭುಸ್ವಾಮಿ, ಶ್ರೀ ಮಹದೇಶ್ವರ ಸಂಯುಕ್ತ ಪದವಿ ಕಾಲೇಜು ಸೇರಿದಂತೆ ಇತರರು ಭಾಗವಹಿಸಿದ್ದರು.
ಸಾಗರ ತಾಲ್ಲೂಕು ಜನತೆ ಗಮನಕ್ಕೆ: ಆ.24ರಂದು ನಗರದ ‘ಗಾಂಧಿ ಮೈದಾನ’ದಲ್ಲಿ ‘ಅವ್ವ ಮಹಾಸಂತೆ’
BIG NEWS : ರಾಜ್ಯದಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿದ್ರೆ 2 ಲಕ್ಷ ದಂಡ ಜೊತೆಗೆ 7 ವರ್ಷ ಜೈಲು ಶಿಕ್ಷೆ ಫಿಕ್ಸ್
ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ನಿಮಗೆ ಸಿಗಲಿರುವ ಯೋಜನೆಗಳ ಕುರಿತು ಇಲ್ಲಿದೆ ಮಾಹಿತಿ