ಮಂಡ್ಯ: ಮಂಡ್ಯದಲ್ಲಿ ಗೃಹಿಣಿ ಅನುಮಾಸ್ಪದ ಸಾವನ್ನಪ್ಪಿದ್ದು, ಸಿಟ್ಟಿಗೆದ್ದ ಸಂಬಂಧಿಕರು ಗಂಡನ ಮನೆಗೆ ಬೆಂಕಿ ಹಾಕಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ಗದ್ದೆ ಹೊಸೂರಿನಲ್ಲಿ ಈ ಘಟನೆ ನಡೆದಿದ್ದು, ಸ್ವಾತಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಗೃಹಿಣಿಯಾಗಿದ್ದಾರೆ. ಇನ್ನೂ ಈ ನಡುವೆ ಸ್ವಾತಿ ಮನೆಗೆ ಸಂಬಂಧಿಕರು ಬೆಂಕಿಗೆ ಇಡುತ್ತಿದ್ದ ಹಾಗೇ ಗಂಡ ಮೋಹನ್ ಕೂಡ ಕರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.