ಮಂಗಳೂರು : ಮಂಗಳೂರಿನಲ್ಲಿ ಅಮಾನವೀಯ ಕೃತ್ಯವೊಂದು ನಡೆದಿದ್ದು, ಕಾಲೇಜು ವಿದ್ಯಾರ್ಥಿಗಳನ್ನು ಅಪಹರಿಸಿ ಅರೆನಗ್ನಗೊಳಿಸಿ ಸಿಗರೇಟ್ ನಿಂದ ಸುಟ್ಟು ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಮಂಗಳೂರಿನ ಮಹಾಕಾಳಿ ಪಡ್ಡು ಎಂಬಲ್ಲಿ ಮಂಗಳೂರಿನ ಎರಡು ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಫುಟ್ಬಾಲ್ ಪಂದ್ಯದ ವೇಳೆ ಗಲಾಟೆ ಶುರುವಾಗಿದ್ದು, ಬಳಿಕ ಒಂದು ಕಾಲೇಜಿನ ವಿದ್ಯಾರ್ಥಿಗಳನ್ನು ಅಪಹರಿಸಿದ ಮತ್ತೊಂದು ಕಾಲೇಜಿನ ವಿದ್ಯಾರ್ಥಿಗಳು ಅರೆನಗ್ನ ಮಾಡಿ ಸಿಗರೇಟ್ ಗಳಿಂದು ಸು್ಟ್ಟು ಹಲ್ಲೆ ಮಾಡಿದ್ದಾರೆ.
ದಿಯಾನ್, ಅನ್ನೈ, ತಸ್ಮಿನ್ ಸಲ್ಮಾನ್, ಅನ್ನಾಸ್ ಎಂಬುವರಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದು, ಘಟನೆ ಸಂಬಂಧ ಇಬ್ಬರನ್ನು ಪೊಲಿಸರು ಬಂಧಿಸಿದ್ದಾರೆ.