ನವದೆಹಲಿ: ದೇಶದ ಬ್ಯಾಂಕ್ಗಳಿಂದ ಗ್ರಾಹಕರು ಪಡೆದುಕೊಳ್ಳುತ್ತಿರುವ ಸಾಲದ ಪ್ರಮಾಣ ಒಂದೇ ಸಮನೆ ಏರಿಕೆಯಾಗಿರುವ ಹಿನ್ನಲೆಯಲ್ಲಿ ಠೇವಣಿ ಹಣ ಇಲ್ಲದೆ ಗ್ರಾಹಕರಿಗೆ ಸಾಲ ನೀಡಲು ಹಣಕ್ಕಾಗಿ ಬ್ಯಾಂಕ್ಗಳು ಪರದಾಡುತ್ತಿವೆ ಎನ್ನಲಾಗಿದೆ.
ದೇಶದಲ್ಲಿ ಬ್ಯಾಂಕ್ನಿಂದ ಸಾಲ ಪಡೆದುಕೊಳ್ಳುತ್ತಿರುವ ಪ್ರಮಾಣ ಒಂದೇ ಸಮನೆ ಏರಿಕೆಯಾಗುತ್ತಿದ್ದರೆ, ಬ್ಯಾಂಕ್ಗಳಲ್ಲಿ ಗ್ರಾಹಕರು ಹಣವನ್ನು ಠೇವಣಿ ಇಡುವ ನಿದರ್ಶನಗಳು ಕಡಿಮೆಯಾಗುತ್ತಿವೆ. ಹೀಗಾಗಿ ಠೇವಣಿ ಹಣ ಇಲ್ಲದೆ ಗ್ರಾಹಕರಿಗೆ ಸಾಲ ನೀಡಲು ಬ್ಯಾಂಕ್ಗಳು ಹಣಕ್ಕಾಗಿ ವಿವಿಧ ಮೂಲಗಳನ್ನು ಹುಡುಕುತ್ತಿವೆ ಎನ್ನಲಾಗಿದೆ.