ಬೆಂಗಳೂರು: ಶಿವಮೊಗ್ಗಕ್ಕೂ ಝೀಕಾ ವೈರಸ್ ಕಾಲಿಟ್ಟಿದೆ. ಜಿಲ್ಲೆಯ ಮೂವರಿಗೆ ಝೀಕಾ ವೈರಸ್ ದೃಢಪಟ್ಟಿದೆ. ಇವರಲ್ಲಿ ಒಬ್ಬರು ಸಾವನ್ನಪ್ಪಿದ್ದರೇ, ಮತ್ತಿಬ್ಬರು ಗುಣಮುಖರಾಗಿದ್ದಾರೆ.
ಈ ಕುರಿತಂತೆ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತ ಸರ್ಕಾರದ ಆರೋಗ್ಯ ಇಲಾಖೆಯ ಪ್ರಾದೇಶಿಕ ನಿರ್ದೇಶಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಕುರಿತು ಚರ್ಚೆ ನಡೆಸಿದ ಸಚಿವರು, ಏರ್ಪೋರ್ಟ್ ಗಳಲ್ಲಿ ಮಂಕಿಪಾಕ್ಸ್ ವೈರಸ್ ಗುಣಲಕ್ಷಣಗಳು ಕಂಡುಬಂದರೆ ಎಚ್ಚರಿಕೆ ವಹಿಸುವಂತೆ ರಾಜ್ಯದ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯದಲ್ಲಿ ಒಟ್ಟು 9 ಝೀಕಾ ವೃರಸ್ ಪ್ರಕರಣಗಳು ಪತ್ತೆಯಾಗಿದ್ದು, ಝೀಕಾ ಹೆಚ್ಚಾಗಿ ಕಂಡುಬಂದಿರುವ ಸ್ಥಳಗಳಲ್ಲಿ ಹೆಚ್ಚಿನ ತಪಾಸಣೆ ನಡೆಸಿ. ಶಿವಮೊಗ್ಗ 3 ಹಾಗೂ ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ 6 ಜನರಿಗೆ ಝೀಕಾ ವೈರಸ್ ಪತ್ತೆಯಾಗಿದೆ. ಬೆಂಗಳೂರಿನ ಜಿಗಣಿಯಲ್ಲಿ 5 ಮಹಿಳೆಯರಿಗೆ ಝೀಕಾ ಪತ್ತೆಯಾಗಿದ್ದು, ವೈರಸ್ ಗೆ ತುತ್ತಾದ ಗರ್ಭೀಣಿ ಸ್ತ್ರೀಯರ ಆರೈಕೆಗೆ ಹೆಚ್ಚಿನ ಒತ್ತು ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿವಮೊಗ್ಗದ 73 ವರ್ಷದ ವ್ಯಕ್ತಿಯನ್ನು ಜೂನ್ 24ರಂದು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಿಗೂ ಝೀಕಾ ವೈರಸ್ ದೃಢಪಟ್ಟಿತ್ತು. ಆದರೇ ಅನಾರೋಗ್ಯದ ಕಾರಣ ಸಾವನ್ನಪ್ಪಿದ್ದಾರೆ. ಇನ್ನೂ ಜೂನ್.24ರಂದು ಪರೀಕ್ಷೆಗೆ ಒಳಗಾದಂತ 24 ವರ್ಷದ ವ್ಯಕ್ತಿಗೂ ಝೀಕಾ ದೃಢಪಟ್ಟಿದೆ. ಅವರು ಗುಣಮುಖರಾಗಿದ್ದಾರೆ. ಜುಲೈ.24ರಂದು ಪರೀಕ್ಷೆಗೆ ಒಳಪಡಿಸಲಾದಂತ 64 ವರ್ಷದ ಮಹಿಳೆಗೂ ಝೀಕಾ ಪತ್ತೆಯಾಗಿದೆ. ಇವರು ಕೂಡ ಗುಣಮುಖರಾಗಿದ್ದಾರೆ ಎಂಬುದಾಗಿ ಆರೋಗ್ಯ ಇಲಾಖೆಯು ತನ್ನ ವರದಿಯಲ್ಲಿ ತಿಳಿಸಿದೆ.
ಶಿವಮೊಗ್ಗ ಡಿಹೆಚ್ಓ ಡಾ.ನಟರಾಜ್ ಅವರು ಈ ಬಗ್ಗೆ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿ, ಸಾಗರ ಒಬ್ಬರು ಹಾಗೂ ಶಿವಮೊಗ್ಗ ನಗರದ ಇಬ್ಬರಿಗೆ ಝೀಕಾ ಪತ್ತೆಯಾಗಿತ್ತು. ಈ ಕಾರಣದಿಂದಾಗಿ ಜಿಲ್ಲೆಯಲ್ಲಿ ಸೊಳ್ಳೆ ನಿಯಂತ್ರಣ ಕ್ರಮವಹಿಸಲಾಗಿದೆ. ಹೆಚ್ಚು ಹೆಚ್ಚು ನೀರು ನಿಲ್ಲುವ ಕಡೆಯಲ್ಲಿ ಗಪ್ಪಿ ಮೀನುಗಳನ್ನು ಲಾರ್ವ ನಾಶಕ್ಕಾಗಿ ಬಿಡಲಾಗಿದೆ. ಸೊಳ್ಳೆ ನಿಯಂತ್ರಣಕ್ಕೆ ಔಷಧಿಯನ್ನು ಸಿಂಪಡಿಸಲಾಗುತ್ತಿದೆ ಎಂಬುದಾಗಿ ಹೇಳಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ರಾಜ್ಯಪಾಲರ ಪ್ರತಿಕೃತಿ ದಹನ, ನಿಂದನೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಖಂಡನೆ
BREAKING : ಹಾವೇರಿಯಲ್ಲಿ ಭೀಕರ ಅಪಘಾತ : ‘NWKRTC’ ಬಸ್ ಪಲ್ಟಿಯಾಗಿ 13 ಪ್ರಯಾಣಿಕರಿಗೆ ಗಂಭೀರ ಗಾಯ!