ಬೆಂಗಳೂರು: ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ನೀಡಿದಂತ ಅನುಮತಿ ಖಂಡಿಸಿ, ರಾಜ್ಯಾಧ್ಯಂತ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಗದ್ದಲ, ದಾಂಧಲೆ ಹಾಗೂ ಹಲ್ಲೆಗಳಾದರೇ ರಾಜ್ಯಪಾಲರೇ ಹೊಣೆ ಎಂಬುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಎಚ್ಚರಿಕೆ ನೀಡಿದ್ದಾರೆ.
ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವಂತ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಮುಖ್ಯಮಂತ್ರಿ ಸ್ಥಾನದಿಂದ ಸಿದ್ಧರಾಮಯ್ಯ ಇಳಿಸುವ ಪ್ರಶ್ನೆಯೇ ಇಲ್ಲ. ಬಿಜೆಪಿ-ಜೆಡಿಎಸ್ ನಾಯಕರು ಏನೇ ಮಾಡಿದ್ರೂ ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಆಗಲ್ಲ ಎಂದರು.
ಸಿಎಂ ಸಿದ್ಧರಾಮಯ್ಯ ಪರವಾಗಿ ಕಾಂಗ್ರೆಸ್ ವರಿಷ್ಠರು, ರಾಜ್ಯದ 7 ಕೋಟಿ ಕನ್ನಡಿಗರು ಇದ್ದಾರೆ. ಕರ್ನಾಟಕದಲ್ಲಿ ಏನಾದ್ರೂ ಗಲಾಟೆ, ಹಲ್ಲೆ, ದಾಂಧಲೆ ಆದರೇ ಅದಕ್ಕೆ ರಾಜ್ಯಪಾಲರೇ ನೇರ ಹೊಣೆಯಾಗಲಿದ್ದಾರೆ. ಯಾವತ್ತೂ ಕರ್ನಾಟಕದ ಜನರು ಇಂತಹ ಸಂದರ್ಭದಲ್ಲಿ ಸುಮ್ಮನೇ ಕೂರುವುದಿಲ್ಲ ಅಂತ ಹೇಳಿದರು.
BREAKING : ಪ್ರತಿಭಟನೆ ವೇಳೆ ಸಿದ್ದರಾಮಯ್ಯ ಅಭಿಮಾನಿಗೆ ತಗುಲಿದ ಬೆಂಕಿ : ಆಸ್ಪತ್ರೆಗೆ ದಾಖಲು