ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಡೆಂಗ್ಯೂ ಬಳಿಕ, ಈಗ ಝಿಕಾ ವೈರಸ್ ಆರ್ಭಟ ಶುರುವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಐದು ಝಿಕಾ ವೈರಸ್ ಕೇಸ್ ಪತ್ತೆಯಾಗಿದೆ.
ಈ ಕುರಿತಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದು, ಬೆಂಗಳೂರಿನ ಜಿಗಣಿಯಲ್ಲಿ ಆಗಸ್ಟ್ 4ರಿಂದ 15ರವರೆಗೆ ಝೀಕಾ ವೈರಾಣುವಿನ ಐದು ಪ್ರಕರಣ ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.
ಜಿಗಣಿಯಲ್ಲಿ ಐದು ಝಿಕಾ ವೈರಸ್ ಕೇಸ್ ಪತ್ತೆಯ ಬೆನ್ನಲ್ಲೇ, ನಿಯಂತ್ರಣ ಕ್ರಮವಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೋಗ ಹರಡದಂತೆ ಕ್ರಮ ವಹಿಸಲಾಗಿದೆ. ಅಲ್ಲದೇ ಸುತ್ತಮುತ್ತಲಿನ ಜನರನ್ನು ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಹೇಳಿದರು.
ಅಂದಹಾಗೇ ಡೆಂಗಿ, ಚಿಕೂನ್ ಗುನ್ಯ ರೋಗ ಹರಡುವಂತ ಈಡಿಸ್ ಎಂಬಂತ ಸೊಳ್ಳೆಗಳೇ ಝೀಕಾ ಸೋಂಕು ಸಹ ಹರಡುತ್ತವೆ. ರೋಗ ಲಕ್ಷಣಗಳು ಕಂಡು ಬಂದವರ ರಕ್ತದ ಮಾದರಿ ಹಾಗೂ ಮೂತ್ರದ ಮಾದರಿ ಸಂಗ್ರಹಿಸಿ, ಪರೀಕ್ಷೆ ಮಾಡುವ ಮೂಲಕ ವೈರಾಣು ಪತ್ತೆ ಹಚ್ಚಲಾಗುತ್ತದೆ. ಸೋ ನಿಮಗೆ ಇದ್ಯಾವುದೇ ಲಕ್ಷಣಗಳಿದ್ದರೇ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬೇಡಿ. ತಪ್ಪದೇ ಪರೀಕ್ಷೆ ಮಾಡಿಸಿಕೊಳ್ಳಿ.
‘ಬಿಜೆಪಿ’ ಸೇರುವ ಬಗ್ಗೆ ಈ ಬಿಗ್ ಅಪ್ ಡೇಟ್ ಕೊಟ್ಟ ‘ಜಾರ್ಖಂಡ್ ಮಾಜಿ ಸಿಎಂ ಚಂಪೈ ಸೊರೆನ್’ | Champai Soren
ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ಸರ್ಕಾರದಿಂದ ಸಿಗಲಿದೆ ಬಡ್ಡಿ ರಹಿತ 5 ಲಕ್ಷ ರೂ.ವರೆಗೆ ಸಾಲ!