ಬೆಂಗಳೂರು: ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದಂತ ಪಿಸಿಆರ್ ಆಧರಿಸಿ, ವಿಕ್ರಾಂತ್ ರೋಣಾ, ಡೆಡ್ಲಿ ಸೋಮ ಸಿನಿಮಾ ನಿರ್ಮಾಪಕ ಜಾಕ್ ಮಂಜು ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸ್ಯಾಂಡಲ್ ವುಡ್ ನಿರ್ಮಾಪಕ ಶಿವಶಂಕರ್ ಎಂಬುವರು ಕೋರ್ಟ್ ಗೆ ನಿರ್ಮಾಪಕ ಜಾಕ್ ಮಂಜು ಮೋಸ ಮಾಡಿದ್ದಾರೆ ಎಂಬುದಾಗಿ ಪಿಸಿಆರ್ ದಾಖಲಿಸಿದ್ದರು. ಈ ಅರ್ಜಿಯ ಆಧಾರದ ಮೇಲೆ ಕೋರ್ಟ್ ನಿರ್ಮಾಪಕ ಜಾಕ್ ಮಂಜು ಸೇರಿದಂತೆ ಸಿದ್ದೇಶ್, ಮುರುಳಿ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚಿಸಿತ್ತು. ಹೀಗಾಗಿ ಕೋರ್ಟ್ ಸೂಚನೆಯ ಹಿನ್ನಲೆಯಲ್ಲಿ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಮಾಯಾನಗರಿ ಚಿತ್ರದ ಸಂಬಂಧ ನಿರ್ಮಾಪಕ ಶಿವಶಂಕರ್ ಕೋರ್ಟ್ ಗೆ ಪಿಸಿಆರ್ ದಾಖಲಿಸಿದ್ದರು. ಈ ಚಿತ್ರಕ್ಕೆ ಹೂಡಿಕೆ ಮಾಡಿದ್ದಂತ ಹಣವನ್ನು ನೀಡಿರಲಿಲ್ಲ. ಸಿದ್ದೇಶ್ ಎಂಬುವರು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿದ್ದರೇ, ಮುರುಳಿ ಎಂಬುವರು ಶಾಲಿನಿ ಆರ್ಟ್ಸ್ ಮೇಲ್ವಿಚಾರಕ ಆಗಿದ್ದರು. ಇವರಿಬ್ಬರು ಶಿವಶಂಕರ್ ಭೇಟಿ ಮಾಡಿ, ಹಣ ಹೂಡುವುದಕ್ಕೆ ಕೋರಿದ್ದರು.
ಜಾಕ್ ಮಂಜು ಕೂಡ ಶಿವಶಂಕರ್ ಅವರಿಗೆ ಪರಿಚಯ ಮಾಡಲಾಗಿತ್ತು. ಮಾಯಾನಗರಿ ಚಿತ್ರಕ್ಕೆ ಹೂಡಿಕೆ ಮಾಡಿದ್ದಂತ ಹಣವನ್ನು ಶಿವಶಂಕರ್ ವಾಪಾಸ್ ಕೇಳಿದ್ದರು. ಆದರೇ ಕೊಟ್ಟಿರಲಿಲ್ಲ. ಜಾಕ್ ಮಂಜು ಅವರನ್ನು ಕೊಡಿಸುವಂತೆ ಕೇಳಲಾಗಿತ್ತು. ಅದಕ್ಕೂ ಉತ್ತರಿಸಲಾಗಿರಲಿಲ್ಲ. ಹೀಗಾಗಿ ಕೋರ್ಟ್ ಗೆ ಶಿವಶಂಕರ್ ಹಣ ಮೋಸ ಮಾಡಿದಂತ ಆರೋಪದಲ್ಲಿ ಪಿಸಿಆರ್ ಸಲ್ಲಿಸಿ, ನಿರ್ಮಾಪಕ ಜಾಕ್ ಮಂಜು, ಸಿದ್ದೇಶ್, ಮುರುಳಿ ಎಂಬುವರ ವಿರುದ್ಧ ಎಫ್ಐಆರ್ ಗೆ ಕೋರಿದ್ದರು. ಕೋರ್ಟ್ ಇವರ ಅರ್ಜಿಯನ್ನು ಪರಿಗಣಿಸಿ, ಪೊಲೀಸರಿಗೆ ಸೂಚಿಸದ ಪರಿಣಾಮ ಈಗ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
BREAKING: ಮಹಾಮಾರಿ ಡೆಂಗ್ಯೂ ಜ್ವರಕ್ಕೆ ಕೇಂದ್ರ ಸಚಿವ ಜುಯಲ್ ಓರಾಮ್ ಪತ್ನಿಯೇ ಬಲಿ | Union Minister Jual Oram
ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ಸರ್ಕಾರದಿಂದ ಸಿಗಲಿದೆ ಬಡ್ಡಿ ರಹಿತ 5 ಲಕ್ಷ ರೂ.ವರೆಗೆ ಸಾಲ!